More

    ಅಭಿವ್ಯಕ್ತಿ ಸ್ವಾತಂತ್ರ್ಯ ಹಾಳು ಮಾಡುವ ಹುನ್ನಾರ: ರಾಜೇಂದ್ರ ಚೆನ್ನಿ

    ತೀರ್ಥಹಳ್ಳಿ: ಚಲನಶೀಲ ಅರ್ಥ ವ್ಯವಸ್ಥೆ ಕಟ್ಟಿಕೊಡುವ ಮಧ್ಯಮ ವರ್ಗ ಇಂದು ಮಂಪರಿನಲ್ಲಿದೆ ಎಂದು ಹಿರಿಯ ವಿಮರ್ಶಕ ಪ್ರೊ. ರಾಜೇಂದ್ರ ಚೆನ್ನಿ ಅಭಿಪ್ರಾಯ ವ್ಯಕ್ತಪಡಿಸಿದರು.

    ಕುಪ್ಪಳಿಯ ಹೇಮಾಂಗಣದಲ್ಲಿ ಲೋಹಿಯಾ ಜನ್ಮಶತಾಬ್ದಿ ಪ್ರತಿಷ್ಠಾನ, ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಸಹಯೋಗದಲ್ಲಿ ಶನಿವಾರ ಏರ್ಪಡಿಸಿದ್ದ ಹೊಸ ಸಮಾಜದತ್ತ ಅಧ್ಯಯನ ಶಿಬಿರ ಉದ್ಘಾಟಿಸಿ ಮಾತನಾಡಿ, ಸಿದ್ಧಾಂತ, ಸೈದ್ಧಾಂತಿಕ ಅಪಸವ್ಯ, ನ್ಯೂನತೆ ಸಮಾಜದಲ್ಲಿದೆ. ಉದಾರೀಕರಣ, ಖಾಸಗೀಕರಣ, ಜಾಗತೀಕರಣ ಒಂದು ವರ್ಗಕ್ಕೆ ಮಾತ್ರ ಲಾಭ ತಂದಿದೆ ಎಂದರು.
    ಜಾಗತಿಕವಾದ ವಾಸ್ತವಿಕ ಸತ್ಯ ಒಪ್ಪಿತವಲ್ಲ. ಬಡತನ, ಖುಷಿಯ ಕೊರತೆ, ಆರ್ಥಿಕ, ಸಾಮಾಜಿಕ ಅಸಮಾನತೆ ಅಗೋಚರ ವಿಷಯವಾಗುತ್ತಿದೆ. ಮಾನವ ಸಂತೃಪ್ತ ವಿಚಾರಗಳು ಗೌಣವಾಗುತ್ತಿದೆ. ನ್ಯಾಯಾಂಗದ ವಿಶ್ವಾಸಾರ್ಹತೆ ಕಳೆದು ಹೋಗುತ್ತಿದೆ. ಭಾರತ ಸ್ವಾತಂತ್ರ್ಯವಾಗಿ 75 ವರ್ಷ ಕಳೆದರೂ ಸಮಾಜವನ್ನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಟ್ಟಲು ಎಲ್ಲ ಪಕ್ಷಗಳು ಸೋತಿದೆ ಕಳವಳ ವ್ಯಕ್ತಪಡಿಸಿದರು.
    ಅಭಿವ್ಯಕ್ತಿ ಸ್ವಾತಂತ್ರ್ಯ ಹಾಳು ಮಾಡುವ ಹುನ್ನಾರ ನಡೆಯುತ್ತಿದೆ. ಕೊಲೆ, ಹಿಂಸೆ, ಬೆದರಿಕೆ, ಜೈಲುಗಳ ಸಾಲಿಗೆ ಟ್ರೋಲಿಂಗ್ ಸೇರಿದೆ. ಮನುಷ್ಯ ಸಂಬಂಧಗಳ ನಡುವಿನ ಗೋಡೆ ಬಿಗಿಯಾಗುತ್ತಿದೆ. ಗೋಡೆ ಬೀಳಿಸದಿದ್ದರೆ ಅಸ್ಪಷ್ಯತೆ, ಲಿಂಗ ತಾರತಮ್ಯ, ಜಾತಿ ವ್ಯವಸ್ಥೆ ಪ್ರಬಲವಾಗುತ್ತದೆ. ಆಡಳಿತದಲ್ಲಿ ವಿರೋಧ ಪಕ್ಷ ಇರಬಾರದು ಎಂಬ ಚಿಂತನೆ ಸಂವಿಧಾನ ವಿರೋಧಿಯಾಗಿದೆ ಎಂದರು.
    ಡಿ.ಎಸ್.ನಾಗಭೂಷಣ ಸಮಾಜವನ್ನು ಎಚ್ಚರಿಸುವ ಕೆಲಸ ಮಾಡುತ್ತಿದ್ದರು. ತಪ್ಪುಗಳನ್ನು ತಿದ್ದುವ ಮೂಲಕ ವಿದ್ಯಾರ್ಥಿಗಳನ್ನು ಸರಿದಾರಿಗೆ ಕೊಂಡೊಯ್ಯುತ್ತಿದ್ದರು. ಸಂಪನ್ಮೂಲ ವ್ಯಕ್ತಿಗಳನ್ನು ಅತ್ಯಂತ ಪರಿಶ್ರಮದಿಂದ ಸೇರಿಸುತ್ತಿದ್ದರು ಎಂದು ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಸಮಕಾರ್ಯದರ್ಶಿ ಕಡಿದಾಳು ಪ್ರಕಾಶ್ ನೆನಪಿಸಿಕೊಂಡರು.
    ಸವಿತಾ ನಾಗಭೂಷಣ ಮಾತನಾಡಿ, ಅನಕ್ಷರಸ್ಥರು ಅವಿವೇಕಿಗಳಲ್ಲ. ಆತ್ಮಸಾಕ್ಷಿಯ ಮುಂದೆ ಸತ್ಯ ನಶ್ವರ. ದೇಹಕ್ಕೆ ಅಗತ್ಯವಾದ ಒಳ್ಳೆಯ ಬಟ್ಟೆ, ಸೌಂದರ್ಯ ಮನಸ್ಸಿಗೂ ಬೇಕು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts