More

    ಬಿಎಲ್​ಒ ಕೆಲಸದಿಂದ ಶಿಕ್ಷಕರನ್ನು ಮುಕ್ತಗೊಳಿಸಿ

    ಹಿರೇಕೆರೂರ: ಬಿಎಲ್​ಒ ಕೆಲಸದಿಂದ ಶಿಕ್ಷಕರನ್ನು ಮುಕ್ತಗೊಳಿಸುವಂತೆ ಆಗ್ರಹಿಸಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲೂಕು ಘಟಕದ ವತಿಯಿಂದ ಪಟ್ಟಣದ ತಹಸೀಲ್ದಾರ್ ಡಾ.ಪ್ರಭಾಕರಗೌಡ ಎಚ್. ಮೂಲಕ ರಾಜ್ಯ ಸರ್ಕಾರಕ್ಕೆ ಶುಕ್ರವಾರ ಮನವಿ ಸಲ್ಲಿಸಲಾಯಿತು.

    ಸಂಘದ ತಾಲೂಕು ಅಧ್ಯಕ್ಷ ಕೆ.ಎಸ್. ಪುಟ್ಟಪ್ಪಗೌಡ್ರ ಮಾತನಾಡಿ, ನಮ್ಮ ಪ್ರಾಥಮಿಕ ಶಾಲಾ ಶಿಕ್ಷಕರು ಹಲವು ವರ್ಷಗಳಿಂದ ಬಿಎಲ್​ಒ ಕೆಲಸ ನಿರ್ವಹಿಸುತ್ತ ಬಂದಿದ್ದಾರೆ. ಈಗ ನಮ್ಮ ಇಲಾಖೆ ಕೆಲಸಗಳು ಮತ್ತು ಜವಾಬ್ದಾರಿ ಹೆಚ್ಚಾಗಿದೆ. ಶಾಲೆಗಳಲ್ಲಿ ಶಿಕ್ಷಕರ ಸಂಖ್ಯೆ ಕಡಿಮೆಯಿದ್ದು, ಆನ್​ಲೈನ್ ಮೂಲಕ ಮತದಾರರ ಪಟ್ಟಿ, ಎಚ್2ಎಚ್ ಸಮೀಕ್ಷೆ ಮಾಡಲು ತಿಳಿಸಿದ್ದು, ಕಷ್ಟಕರವಾಗುತ್ತಿದೆ. ಶಾಲಾ ಅವಧಿಯಲ್ಲಿ ಈ ಕಾರ್ಯ ಮಾಡಬೇಕಾಗಿದ್ದು, ಹೀಗಾಗಿ ಶಿಕ್ಷಣದ ಚಟುವಟಿಕೆಗಳಲ್ಲಿ ಭಾರಿ ಹಿನ್ನಡೆಯಾಗುತ್ತಿದೆ. ಕೂಡಲೇ ಶಿಕ್ಷಕರನ್ನು ಬಿಎಲ್​ಒ ಕಾರ್ಯದಿಂದ ಮುಕ್ತಿಗೊಳಿಸಬೇಕು ಎಂದು ಆಗ್ರಹಿಸಿದರು.

    ಕಾರ್ಯದರ್ಶಿ ರಮೇಶ ಪೂಜಾರ, ಅನುರಾಧಾ ಬಿ., ಶಶಿಕಲಾ ಅತ್ತಿಕಟ್ಟಿ, ಪ್ರೇಮಿಳಾ ಪಾಟೀಲ, ಎಸ್.ಎಸ್. ಚಿನ್ನಿಕಟ್ಟಿ, ಬಿ.ಬಿ. ಕಣಸೋಗಿ, ಮೃತ್ಯುಂಜಯ ಮಕರಿ, ಪಿ.ಎಸ್. ಸಾಲಿ, ಎನ್.ಎಸ್. ಹೆಗ್ಗೇರಿ, ಎಂ.ಎಂ. ಮತ್ತೂರ, ಕೃಷ್ಣಪ್ಪ, ಪಿ.ಆರ್. ನಾಯಕ್ ಹಾಗೂ ಶಿಕ್ಷಕರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts