More

    ಉಚಿತ ಭಾಗ್ಯಗಳಿಂದ ಬರಲಿದೆ ಬಡಿದಾಡಿ ತಿನ್ನುವ ಪರಿಸ್ಥಿತಿ

    ಉಪ್ಪಿನಬೆಟಗೇರಿ: ಉಚಿತ ಭಾಗ್ಯಗಳಿಂದ ಮುಂದಿನ ದಿನಗಳಲ್ಲಿ ಅರಾಜಕತೆ ಸೃಷ್ಟಿಯಾಗಿ ಪರಸ್ಪರ ಬಡಿದಾಡಿ ತಿನ್ನುವ ಪರಿಸ್ಥಿತಿ ಬಂದೊದಗಲಿದೆ ಎಂದು ಭಾರತರತ್ನ ಕೃಷಿ ವಿಜ್ಞಾನಯೋಗಿ ಕನೇರಿ ಸಿದ್ಧಗಿರಿ ಸಂಸ್ಥಾನಮಠದ ಅದೃಶ ಶ್ರೀ ಕಾಡಸಿದ್ಧೇಶ್ವರ ಸ್ವಾಮೀಜಿ ಹೇಳಿದರು.

    ಸಮೀಪದ ಕಲ್ಲೂರ ಆರೂಢ ವಿದ್ಯಾಶ್ರಮದ ಮಾತಾಜಿ ಲಲಿತಮ್ಮನವರ ಷಷ್ಟ್ಯ್ಧ ಸಮಾರಂಭದ ಅಂಗವಾಗಿ ಕುವೆಂಪು ಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ‘ಸಂತ ಸಂಗಮ’ ಕಾರ್ಯಕ್ರಮದಲ್ಲಿ ‘ಸಮಾಜಕ್ಕೆ ಅನ್ನದಾತನ ಕೊಡುಗೆ ಏನು ?’ಎಂಬ ವಿಷಯ ಕುರಿತು ಅವರು ಮಾತನಾಡಿದರು. ಸರ್ಕಾರ ದುಡಿಯುವ ಕೈಗಳಿಗೆ ಕೆಲಸ ಕೊಡದೆ ಅವರನ್ನು ಸೋಮಾರಿಗಳನ್ನಾಗುತ್ತಿದೆ. ಹೀಗಾಗಿ ಒಕ್ಕಲುತನಕ್ಕೆ ಕೂಲಿಕಾರರಿಲ್ಲದೆ ರೈತರು ಪರದಾಡುವಂತಾಗಿದೆ. 200 ದೇಶಗಳ ಪೈಕಿ 140 ದೇಶಗಳಿಗೆ ಆಹಾರ ಉತ್ಪನ್ನ ಸರಬರಾಜು ಮಾಡುವ ನಮ್ಮ ದೇಶದ ರೈತನಿಗೆ ಇಂದು ಬೆಲೆ ಇಲ್ಲದಂತಾಗಿದೆ ಎಂದರು.

    ಗಂಡು ಮಗು ಬೇಕು ಎಂದು ಬಯಸುವ ಹೆಣ್ಣಿನ ಮನಸ್ಥಿತಿ ಬದಲಾದಾಗ ಮಾತ್ರ ಸಮಾಜದಲ್ಲಿ ಮಹಿಳೆಗೆ ಗೌರವ ಸಿಗುತ್ತದೆ. ಇತ್ತೀಚೆಗೆ ರೈತರ ಮಕ್ಕಳಿಗೆ ಹೆಣ್ಣು ಸಿಗುತ್ತಿಲ್ಲ. ನೌಕರಿ ಮಾಡುವ ಜನರಲ್ಲಿ ವಿವಾಹ ವಿಚ್ಛೇದನದ ಪ್ರಮಾಣ ಹೆಚ್ಚಾಗಿವೆ. ನಿಮ್ಮ ಮಗಳು ಉತ್ತಮ ಜೀವನ ನಡೆಸಬೇಕೆಂದರೆ ರೈತರ ಮಕ್ಕಳಿಗೆ ಮಗಳನ್ನು ಕೊಡಬೇಕು ಎಂದರು.

    ಶಿರೋಳದ ಶ್ರೀ ಶಂಕರಾರೂಢ ಸ್ವಾಮೀಜಿ ಮಾತನಾಡಿ, ಎಲ್ಲ ರೈತರು ಸಾವಯವ ಕೃಷಿಗೆ ಮಹತ್ವ ನೀಡಬೇಕು. ದೇಶಿಯ ಹಸುಗಳನ್ನು ಸಾಕುವ ಮೂಲಕ ರೋಗಮುಕ್ತ ಜೀವನ ನಡೆಸಬಹುದು ಎಂದರು.

    ಆರೂಢ ವಿದ್ಯಾಶ್ರಮದ ಶ್ರೀ ಲಲಿತಮ್ಮ ತಾಯಿಯವರು ಅಧ್ಯಕ್ಷತೆ ವಹಿಸಿದ್ದರು. ಚಿಕ್ಕುಂಬಿ ಅಭಿನವ ನಾಗಲಿಂಗ ಸ್ವಾಮಿಗಳು, ಬುರಗಾಪುರದ ಯೊಗೇಶ್ವರಿ ಮಾತಾಜಿ, ಗದಗ ಕದಳಿವನ ಮಠದ ಅಕ್ಕಮಹಾದೇವಿ ತಾಯಿ, ಜಕನೂರ ಸಿದ್ಧಲಿಂಗ ಸ್ವಾಮೀಜಿ, ಗುರುಲಿಂಗ ಸ್ವಾಮೀಜಿ, ಸವಿತಾ ಅಮರಶೆಟ್ಟಿ, ಬಸವರಾಜ ಕೊರವರ, ಇತರರು ಉಪಸ್ಥಿತರಿದ್ದರು.

    ದುಷ್ಕೃತ್ಯ ಮರುಕಳಿಸದಂತೆ ಕ್ರಮ ಜರುಗಿಸಿ

    ಮೊನ್ನೆ ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ನೇಹಾ ಕೊಲೆಗೈದ ಫಯಾಜ್​ನ ಕೃತ್ಯ ಕ್ರೂರತನದಿಂದ ಕೂಡಿದ್ದು, ಇಂಥ ಕೊಲೆಗಡುಕರ ಪರವಾಗಿ ನಿಲ್ಲುವ ಪ್ರತಿಯೊಬ್ಬರೂ ಕೊಲೆಗಡುಕರಿದ್ದಂತೆ. ಆತನ ಪಾಲಕರು ಶಿಕ್ಷಕರಾಗಿದ್ದರೂ ಆತನಿಗೆ ಸಂಸ್ಕಾರದ ಕೊರತೆಯಿಂದ ಇಂಥ ಹೇಯಕೃತ್ಯ ಸಂಭವಿಸುತ್ತವೆ. ಸರ್ಕಾರ ಕಾನೂನಿನ ಪ್ರಕಾರ ಉಗ್ರವಾದ ಶಿಕ್ಷೆ ವಿಧಿಸಿ ಇಂಥ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು.

    ಶ್ರೀ ಕಾಡಸಿದ್ಧೇಶ್ವರ ಸ್ವಾಮೀಜಿ, ಕನೇರಿ ಮಠ, ಮಹಾರಾಷ್ಟ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts