More

    ಉತ್ತರ ಕನ್ನಡದಲ್ಲಿ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ: ಇಬ್ಬರು ಆರೋಪಿಗಳು ವಶಕ್ಕೆ, ಇನ್ನಿಬ್ಬರಿಗೆ ತೀವ್ರ ಶೋಧ

    ಉತ್ತರಕನ್ನಡ: ಒಂದೇ ಕುಟುಂಬದ ನಾಲ್ವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ಇನ್ನಿಬ್ಬರು ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

    ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಹಾಡುವಳ್ಳಿಯಲ್ಲಿ ಈ ಕೊಲೆ ನಡೆದಿದೆ. ಶಂಭು ಭಟ್ (65), ಅವರ ಪತ್ನಿ ಮಾದೇವಿ ಭಟ್ (40), ಪುತ್ರ ರಾಜೀವ್ ಭಟ್ (34) ಹಾಗೂ ಸೊಸೆ ಕುಸುಮಾ ಭಟ್ (30) ಕೊಲೆಯಾದವರು. ಮನೆಯ ಹೊರಗಡೆ ನಾಲ್ವರ ಶವ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ನಾಲ್ವರನ್ನು ಅಟ್ಟಾಡಿಸಿ ಕತ್ತಿಯಿಂದ ಕಡಿದು ಹಾಕಿರುವಂಥ ಸನ್ನಿವೇಶ ಕಂಡುಬಂದಿದೆ.

    ಇದನ್ನೂ ಓದಿ: ಸಿಡಬ್ಲ್ಯುಸಿ ಸದಸ್ಯತ್ವ: ಖರ್ಗೆಗೆ ಪೂರ್ಣಾಧಿಕಾರ; ಚುನಾವಣೆ ಇಲ್ಲ, ನಾಮ ನಿರ್ದೇಶನಕ್ಕೆ ಅವಕಾಶ

    Photo of Accused Vidya Bhat
    ಸೊಸೆ ವಿದ್ಯಾ ಭಟ್​

    ಶಂಭು ಭಟ್ ಅವರ ಹಿರಿಯ ಸೊಸೆ ವಿದ್ಯಾ ಭಟ್​ ಕುಟುಂಬಸ್ಥರಿಂದ ಈ ಕೊಲೆ ನಡೆದಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈಕೆಯ ಪತಿ ಶ್ರೀಧರ್ ಭಟ್​ ಕೆಲ ತಿಂಗಳ ಹಿಂದಷ್ಟೇ ಮೂತ್ರಪಿಂಡ ವೈಫಲ್ಯದಿಂದ ಮೃತಪಟ್ಟಿದ್ದರು.

    ಆರೋಪಿಗಳ ಪತ್ತೆಗಾಗಿ ಭಟ್ಕಳ ಡಿವೈಎಸ್ಪಿ ಮತ್ತು ಸಿಪಿಐ ನೇತೃತ್ವದಲ್ಲಿ ಎರಡು ತಂಡ ರಚನೆಯಾಗಿದೆ. ಸದ್ಯ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಉಳಿದ ಆರೋಪಿಗಳಿಗಾಗಿ ಹುಡುಕಾಟ ತೀವ್ರಗೊಳಿಸಿದ್ದಾರೆ.

    ಜೀವನಾಂಶ ಹಾಗೂ ಆಸ್ತಿ ಹಂಚಿಕೆ ಸಂಬಂಧ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿದೆ. 6 ಎಕರೆ ಜಮೀನನ್ನು ಭಾಗ ಮಾಡುವ ವಿಚಾರಕ್ಕೆ ಕಲಹ ಉಂಟಾಗಿತ್ತು. 1 ಎಕರೆ 9 ಗುಂಟೆ ಜಮೀನನ್ನು ವಿದ್ಯಾಭಟ್​ಗೆ ಜೀವನಾಂಶವಾಗಿ ಗಂಡನ ಕುಟುಂಬ ನೀಡಿತ್ತು. ಆದರೆ, ಹೆಚ್ಚಿನ ಪಾಲು ಬೇಕು ಎಂದು ವಿದ್ಯಾ ಭಟ್​ ಜಗಳ ಮಾಡಿದ್ದಳು.

    ಇದೀಗ ವಿದ್ಯಾ ಭಟ್ ಕುಮ್ಮಕ್ಕಿನಿಂದಲೇ ಕೊಲೆ ನಡೆದಿರುವ ಗುಮಾನಿ ಇದೆ. ವಿದ್ಯಾ ಭಟ್​ ಆಸ್ತಿಯನ್ನು ವಿನಯ್ ಭಟ್‌ ಎಂಬಾತ ನೋಡಿಕೊಳ್ಳುತ್ತಿದ್ದ. ಆತನೇ ಈ ಕೊಲೆ ನಡೆಸಿದ್ದಾನೆ ಎನ್ನಲಾಗಿದೆ.

    ಇದನ್ನೂ ಓದಿ: ಸತ್ಯ ಘಟನೆಯ 19.20.21; ನಕ್ಸಲ್ ನಿಗ್ರಹ ಪಡೆಯಿಂದ ಬಂಧಿತನಾಗಿದ್ದ ವಿಠಲ್ ಕುರಿತ ಚಿತ್ರ

    ಹತ್ಯೆ ನಡೆದ ವೇಳೆ 10 ವರ್ಷದ ಒಂದು ಮಗು ಪಕ್ಕದ ಮನೆಯಲ್ಲಿ ಆಟವಾಡುತಿತ್ತು. ನಾಲ್ಕು ವರ್ಷದ ಇನ್ನೊಂದು ಮಗು ಮಲಗಿತ್ತು. ಪ್ರಾಣಾಪಾಯದಿಂದ ಪಾರಾಗಿರುವ ಮಕ್ಕಳಿಬ್ಬರೂ ಈಗ ಅನಾಥರಾದಂತಾಗಿದೆ. ಭಟ್ಕಳ ಗ್ರಾಮೀಣ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

    ಚಿರತೆ ಸೆರೆಗೆ ಇಟ್ಟಿದ್ದ ಬೋನಿನಲ್ಲಿ ಸಿಲುಕಿದ ವ್ಯಕ್ತಿ! ಹೇಗೆ ಅಂತಾ ಗೊತ್ತಾದ್ರೆ ನಿಮ್ಮ ಹುಬ್ಬೇರೋದು ಖಚಿತ

    ಸಾಕುನಾಯಿ ಕಾಪಾಡಲು ಹೋಗಿ ದುರಂತ ಅಂತ್ಯ ಕಂಡ ಮಹಿಳೆ! ಭಯಾನಕ ವಿಡಿಯೋ ವೈರಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts