More

    ಮುಂಗಾರು ಮಳೆಯ ಅಬ್ಬರಕ್ಕೆ ಅಪಾಯದಂಚಿನಲ್ಲಿವೆ ಕಾಂಚೀನಗರದ ನಾಲ್ಕು ಮನೆಗಳು

    ಶೃಂಗೇರಿ: ತಾಲೂಕಿನಲ್ಲಿ ಮುಂಗಾರು ಮಳೆ ಚುರುಕುಗೊಂಡಿದ್ದು, ಆರಂಭದಲ್ಲೇ ಸಾಕಷ್ಟು ಹಾನಿ ಉಂಟುಮಾಡಿದೆ.

    ವಿದ್ಯಾರಣಪುರ ಗ್ರಾಪಂ ವ್ಯಾಪ್ತಿಯ ಕಾಂಚೀನಗರದ ಕುಮಾರ್ ಮನೆ ಸಮೀಪ ಧರೆಕುಸಿದಿದೆ. ರಾಷ್ಟ್ರೀಯ ಹೆದ್ದಾರಿ-169ರ ಆನೆಗುಂದ-ಉಳ್ಳುವಳ್ಳಿ ನಡುವೆ ಐದು ಕಿ.ಮೀ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಕೆಸರುಮಯವಾಗಿದ್ದು ವಾಹನ ಚಾಲಕರು ಪರದಾಡುವಂತಾಗಿದೆ. ಉತ್ತಮೇಶ್ವರದಿಂದ ಶೃಂಗೇರಿಗೆ ಸಂಪರ್ಕ ಕಲ್ಪಿಸುವ ವಿನಾಯಕಮಕ್ಕಿ ಸಮೀಪದ ರಸ್ತೆ ಕುಸಿದಿದೆ.
    ಕಿಕ್ರೆ ಗ್ರಾಮದ ಮೇಗಳಬೈಲಿನ ಗ್ರಾಮ ಸಡಕ್ ಯೋಜನೆಯಡಿ ನಿರ್ಮಿಸಲಾದ ರಸ್ತೆಯ ಸಮೀಪ ಇರುವ ಮನೆಗಳ ಎದುರಿನ ಧರೆ ಕುಸಿದಿದೆ. ರಸ್ತೆ ಕಾಮಗಾರಿ ಅವೈಜ್ಞಾನಿಕವಾಗಿದ್ದು, ವೇದಾ, ಪುಟ್ಟ, ರವಿ, ಸನತ್ ಎಂಬುವರ ಮನೆಗಳು ಅಪಾಯದಂಚಿನಲ್ಲಿವೆ. ಸ್ಥಳಕ್ಕೆ ತಹಸೀಲ್ದಾರ್ ಗೌರಮ್ಮ, ಮೆಣಸೆ ಪಿಡಿಒ ನಾಗಭೂಷಣ್, ಪಿಡಬ್ಲುೃಡಿ ಇಂಜಿನಿಯರ್ ಮಲ್ಲಿಕಾರ್ಜುನ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.
    ಮುಂಡುಗೋಡು ಗ್ರಾಮದಲ್ಲಿ ವಿದ್ಯುತ್ ಲೈನ್ ಮೇಲೆ ಮರಬಿದ್ದು ಶೃಂಗೇರಿ, ಜಯಪುರಕ್ಕೆ ವಿದ್ಯುತ್ ಪೂರೈಕೆ ಸ್ಥಗಿತವಾಗಿದೆ. ಬುಧವಾರ ರಾತ್ರಿ 11ಗಂಟೆಯಿಂದ ಟಾರ್ಚ್ ಬೆಳಕಿನಲ್ಲಿ ದುರಸ್ತಿ ಮಾಡಿದ ಮೆಸ್ಕಾಂ ಸಿಬ್ಬಂದಿ ಕಾರ್ಯವನ್ನು ಸಾರ್ವಜನಿಕರು ಪ್ರಶಂಸಿಸಿದ್ದಾರೆ. ತುಂಗಾ ನದಿ ನೀರಿನ ಮಟ್ಟ ಸಾಕಷ್ಟು ಏರಿಕೆಯಾಗಿದೆ. ಉಪನದಿಗಳಾದ ಮಾಲತಿ, ನಳಿನಿ, ನಂದಿನಿ ಹಾಗೂ ಹಳ್ಳಕೊಳ್ಳಗಳು ಭರ್ತಿಯಾಗಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts