More

    ಸುನಕ್ ಸಂಪುಟಕ್ಕೆ ಮಾಜಿ ಪ್ರಧಾನಿ ಕ್ಯಾಮರೂನ್! ಬ್ರೆವರ್‌ಮನ್ ವಜಾ ಆಗಿದ್ದೇಕೆ?

    ಲಂಡನ್: ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ಸೋಮವಾರ ತಮ್ಮ ಸಂಪುಟದಿಂದ ಆಂತರಿಕ ವ್ಯವಹಾರಗಳ ಸಚಿವ ಸುಯೆಲ್ಲಾ ಬ್ರೆವರ್‌ಮನ್ ಅವರನ್ನು ವಜಾಗೊಳಿಸಿದ್ದು, ವಿದೇಶಾಂಗ ವ್ಯವಹಾರಗಳ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದ ಜೇಮ್ಸ್ ಕ್ಲೆವರ್ಲಿ ಅವರನ್ನು ಬದಲಿಸಿದ್ದಾರೆ. ಅಲ್ಲದೆ, ಬ್ರಿಟನ್ ಮಾಜಿ ಪ್ರಧಾನಿ ಡೇವಿಡ್ ಕ್ಯಾಮರೂನ್ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡಿದ್ದಾರೆ.

    ಇದನ್ನೂ ಓದಿ: ನನ್ನ ಆಯ್ಕೆ ಅವರ ತೀರ್ಮಾನ, ಇದಕ್ಕೆ ಯಾರದ್ದೂ ವಿರೋಧವಿಲ್ಲ: ಬಿ.ವೈ.ವಿಜಯೇಂದ್ರ
    ಕ್ಯಾಮರೂನ್ ಅವರಿಗೆ ವಿದೇಶಾಂಗ ವ್ಯವಹಾರಗಳ ಸಚಿವರ ಜವಾಬ್ದಾರಿ ವಹಿಸಲಾಯಿತು. ಅವರ ನೇಮಕಾತಿಯನ್ನು ಬ್ರಿಟಿಷ್ ರಾಜರು ಅನುಮೋದಿಸಿದರು. ಲಂಡನ್‌ನಲ್ಲಿ ಪ್ಯಾಲೆಸ್ತೇನ್​ ಬೆಂಬಲಿಗರು ಇತ್ತೀಚೆಗೆ ನಡೆಸಿದ ಪ್ರತಿಭಟನೆಗಳಲ್ಲಿ ಪೊಲೀಸರು ನಿಭಾಯಿಸಿದ ರೀತಿಯನ್ನು ಬ್ರೇವರ್‌ಮನ್ ಟೀಕಿಸಿದ್ದರು. ಪ್ರತಿಭಟನೆಗಳ ಸಂಬಂಧ ಪೋಲೀಸರ ದ್ವಂದ್ವ ನೀತಿಯ ಬಗ್ಗೆ ಬ್ರೇವರ್‌ಮನ್ ಲೇಖನವನ್ನು ಪ್ರಕಟಿಸಿದ್ದರು.

    ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷದ ನಾಯಕರು ಮತ್ತು ವಿರೋಧ ಪಕ್ಷದ ನಾಯಕರು ಬ್ರೇವರ್‌ಮನ್ ಅವರ ಕಾಮೆಂಟ್‌ಗಳು ಪ್ರಚೋದನಕಾರಿಯಾಗಿದೆ ಮತ್ತು ಅವರನ್ನು ತಕ್ಷಣವೇ ಸಚಿವ ಸ್ಥಾನದಿಂದ ತೆಗೆದುಹಾಕಬೇಕು ಎಂದು ಒತ್ತಾಯಿಸಿದ್ದರು.

    ಇನ್ನೂ ಹೆಚ್ಚಿನದನ್ನು ಹೇಳ್ತೇನೆ:
    ಪ್ರಧಾನ ಮಂತ್ರಿ ರಿಷಿ ಸುನಕ್ ಅವರು ಬ್ರೇವರ್‌ಮನ್‌ಗೆ ರಾಜೀನಾಮೆ ನೀಡುವಂತೆ ಆದೇಶಿಸಿದ್ದರು. “ಇಷ್ಟು ದಿನ ಗೃಹ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದು ನನ್ನ ಜೀವನದಲ್ಲಿ ಒಂದು ದೊಡ್ಡ ಆಶೀರ್ವಾದ ಸಿಕ್ಕಿದ್ದು ಎಂದು ಭಾವಿಸಿದ್ದೇನೆ. . ನಾನು ಶೀಘ್ರದಲ್ಲೇ ಇದರ ಬಗ್ಗೆ ಹೆಚ್ಚಿನದನ್ನು ಹೇಳುತ್ತೇನೆ ಎಂದು ಬ್ರಾವರ್‌ಮನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

    ಬಿಡೆನ್​ ಅಧ್ಯಕ್ಷ ಎಂದಿದ್ದು ಯಾರನ್ನು? ಅಮೆರಿಕಾ ಅಧ್ಯಕ್ಷರಿಗೆ ಕಾಡುತ್ತಿದೆಯೇ ಮರೆವಿನ ಕಾಯಿಲೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts