More

    ಫ್ರಾನ್ಸ್​ ಮಾಜಿ ರಾಷ್ಟ್ರಪತಿ ನಿಕೋಲಸ್​ ಸರ್ಕೋಜಿಗೆ 1 ವರ್ಷ ಜೈಲು ಶಿಕ್ಷೆ

    ಪ್ಯಾರಿಸ್: ಕಾನೂನುಬಾಹಿರವಾಗಿ ಚುನಾವಣಾ ವೆಚ್ಚ ಮಾಡಿದ್ದಕ್ಕಾಗಿ ಫ್ರಾನ್ಸ್​ನ ಮಾಜಿ ರಾಷ್ಟ್ರಪತಿ ನಿಕೋಲಸ್​ ಸರ್ಕೋಜಿ ಅವರಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. 2007 ರಿಂದ 2012 ರವರೆಗೆ ದೇಶದ ಅಧ್ಯಕ್ಷರಾಗಿದ್ದ ಸರ್ಕೋಜಿ ಮೇಲೆ ವಿಧಿಸಲಾಗಿರುವ ಎರಡನೇ ಜೈಲು ಶಿಕ್ಷೆಯ ಆದೇಶ ಇದಾಗಿದೆ.

    2012 ರಲ್ಲಿ ಸರ್ಕೋಜಿ, ಅಧ್ಯಕ್ಷ ಸ್ಥಾನದ ಮರುಚುನಾವಣೆಗಾಗಿ ನಡೆಸಿದ ವಿಫಲ ಪ್ರಯತ್ನದ ಸಂದರ್ಭದಲ್ಲಿ, ಫ್ರೆಂಚ್​ ಚುನಾವಣಾ ಕಾನೂನುಗಳನ್ನು ಉಲ್ಲಂಘಿಸಿದ್ದರೆಂಬ ಆರೋಪದ ವಿಚಾರಣೆ ನಡೆಸಿದ ಪ್ಯಾರಿಸ್​ನ ನ್ಯಾಯಾಲಯ ಇಂದು (ಸೆ.30) ಅವರನ್ನು ತಪ್ಪಿತಸ್ಥರೆಂದು ಘೋಷಿಸಿದೆ. ಸರ್ಕೋಜಿ ಮತ್ತು ಇತರ 13 ಆರೋಪಿಗಳಿಗೆ ಶಿಕ್ಷೆ ವಿಧಿಸಿರುವ ನ್ಯಾಯಾಲಯ, ಸರ್ಕೋಜಿ ಎಲೆಕ್ಟ್ರಾನಿಕ್​ ಬ್ರೇಸ್​ಲೆಟ್​ ತೊಟ್ಟುಕೊಂಡು ಮನೆಯಲ್ಲೇ ಇರಬಹುದು ಎಂದು ಅವಕಾಶ ನೀಡಿದೆ.

    ಇದನ್ನೂ ಓದಿ: ಶೂಟಿಂಗ್‌ ವೇಳೆ ಕುಸಿದುಬಿದ್ದ ನಟಿ ಶ್ವೇತಾ ಆಸ್ಪತ್ರೆಗೆ ದಾಖಲು-ಮಾಜಿ ಪತಿ ಟ್ವೀಟ್‌

    ಮೊದಲ ಬಾರಿಗೆ ಮಾರ್ಚ್ 2014 ರಲ್ಲಿ ಆರಂಭವಾದ ಈ “ಬೈಗ್ಮೇಲಿಯನ್ ಕೇಸ್” ಎಂದು ಕರೆಯಲ್ಪಟ್ಟ ಕ್ರಿಮಿನಲ್ ಕೇಸಿನ ತನಿಖೆಯಲ್ಲಿ, ಸರ್ಕೋಜಿ, ಚುನಾವಣಾ ಪ್ರಚಾರದ ಸಮಯದಲ್ಲಿ ಫ್ರೆಂಚ್ ಕಾನೂನು ನಿಗದಿಪಡಿಸಿದ 24 ಮಿಲಿಯನ್ ಡಾಲರ್​ ಮಿತಿಯನ್ನು ಮೀರಿ, 54 ಮಿಲಿಯನ್‌ ಡಾಲರ್​ಗಳಷ್ಟು ವೆಚ್ಚ ಮಾಡಿದ್ದರು ಎಂದು ಕಂಡುಬಂದಿತ್ತು ಎನ್ನಲಾಗಿದೆ.

    ಕಳೆದ ಮಾರ್ಚ್​ ತಿಂಗಳಲ್ಲಿ ಮತ್ತೊಂದು ಭ್ರಷ್ಟಾಚಾರ ಪ್ರಕರಣದಲ್ಲಿ ಅವರಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. ಆ ಕೋರ್ಟ್​ ಆದೇಶದ ವಿರುದ್ಧ ಅವರು ಅಪೀಲು ಸಲ್ಲಿಸಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)

    VIDEO| ಘೋಷಣೆ ಕೂಗಿಸುತ್ತಾ ವೇದಿಕೆಯಿಂದ ಬಿದ್ದ ನಾಯಕ

    ಅಮರೀಂದರ್​ ಸಿಂಗ್​ ಬಿಜೆಪಿ ಸೇರುತ್ತಾರಾ? ತಮ್ಮ ಮುಂದಿನ ನಡೆಯ ಬಗ್ಗೆ ಕ್ಯಾಪ್ಟನ್​ ಹೇಳಿದ್ದಿಷ್ಟು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts