More

    VIDEO| ರಸ್ತೆ ಅಗಲೀಕರಣಕ್ಕೆ ಅಡ್ಡಿಪಡಿಸಿದಲ್ಲದೇ ಜೆಸಿಬಿ ಚಾಲಕನ ಮೇಲೆ ಹಲ್ಲೆ ಮಾಡಿದ ಮಾಜಿ ಶಾಸಕ

    ಮಂಡ್ಯ: ರಸ್ತೆ ಅಗಲೀಕರಣಕ್ಕೆ ಅಡ್ಡಿಪಡಿಸಿದಲ್ಲದೇ ಜೆಸಿಬಿ ಚಾಲಕನ ಮೇಲೆ ಹಲ್ಲೆ ಮಾಡಿ ಮಾಜಿ ಶಾಸಕ ರಮೇಶ್​ ಬಂಡಿಸಿದ್ದೇಗೌಡ ಅವರು ಹದ್ದು ಮೀರಿದ ವರ್ತನೆ ತೋರಿದ್ದಾರೆ.

    ಇದನ್ನೂ ಓದಿ: FACT CHECK| ಅಪ್ಪ ರಿಕ್ಷಾ ಓಡಿಸೋ ಏರಿಯಾದಲ್ಲೇ ಮಗಳು ಇನ್ಸ್​ಪೆಕ್ಟರ್​: ಸುದ್ದಿಯ ಅಸಲಿಯತ್ತೇ ಬೇರೆ!

    ಶ್ರೀರಂಗಪಟ್ಟಣ ತಾಲೂಕಿನ‌ ಅರಕೆರೆ ಗ್ರಾಮದಲ್ಲಿ ಘಟನೆ ನಡೆದಿದೆ. 10 ಕೋಟಿ ರೂ. ವೆಚ್ಚದಲ್ಲಿ ಅರಕೆರೆ ಗ್ರಾಮದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದೆ. ಹೀಗಾಗಿ ರಸ್ತೆ ಒತ್ತುವರಿ ಮಾಡಿಕೊಂಡು ನಿರ್ಮಿಸಿದ್ದ ಮನೆ ಹಾಗೂ ಅಂಗಡಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಇಂದು ನಡೆಯುತ್ತಿತ್ತು.

    ಅಧಿಕಾರಿಗಳು ಹಾಗೂ ಪೊಲೀಸರ ಸಮ್ಮುಖದಲ್ಲೇ ತೆರವು ಕಾರ್ಯಾಚರಣೆ ನಡೆಯುವಾಗ ಮಧ್ಯ ಪ್ರವೇಶಿಸಿದ ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌಡ ಹಾಗೂ ಬೆಂಬಲಿಗರು ಜೆಸಿಬಿ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಈ ವೇಳೆ ಚಾಲಕನನ್ನು ಹಿಡಿದು ಬಂಡಿಸಿದ್ದೇಗೌಡ ಥಳಿಸಿದ್ದಾರೆ. ಸದ್ಯ ಅರಕೆರೆ ಗ್ರಾಮದಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ.

    ಇದನ್ನೂ ಓದಿ: ಅರಬ್‌ ದೇಶಕ್ಕೂ ನಿದ್ದೆಗೆಡಿಸಿರೋ ‘ಚಿನ್ನದ ರಾಣಿ’- ಗೋಳೋ ಎನ್ನುತ್ತಿರುವ ಅಧಿಕಾರಿಗಳು

    ಅರಕೆರೆಯು ಹಾಲಿ ಶಾಸಕ ರವೀಂದ್ರ ಶ್ರೀಕಂಠಯ್ಯ ಹಾಗೂ ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌರ ಸ್ವಗ್ರಾಮ. ಇದೇ ತಿಂಗಳ 6 ರಂದು ಶ್ರೀರಂಗಪಟ್ಟಣದ PLD ಬ್ಯಾಂಕ್ ಮಳಿಗೆಯ ಉದ್ಘಾಟನೆ ವಿಚಾರದಲ್ಲಿ ಮಾಜಿ ಮತ್ತು ಹಾಲಿ ಶಾಸಕರ ಬೆಂಬಲಿಗರ ನಡುವೆ ಹೊಡೆದಾಟವಾಗಿತ್ತು. ಕ್ಷೇತ್ರದಲ್ಲಿ ಹಾಲಿ, ಮಾಜಿ ಶಾಸಕರ ರಂಪಾಟ ತಾರಕ್ಕೇರಿದೆ. (ದಿಗ್ವಿಜಯ ನ್ಯೂಸ್​)

    VIDEO| PPE ಕಿಟ್​ ಧರಿಸಿ ಡ್ಯಾನ್ಸ್​ ಮಾಡಿದ ಲೇಡಿ ಡಾಕ್ಟರ್​ ಇವರೇ ನೋಡಿ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts