More

    ಅಧಿಕಾರಿಗಳಿಗೆ ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು ಎಚ್ಚರಿಕೆ

    ಪಾಂಡವಪುರ: ಅಧಿಕಾರಿಗಳು ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸುವುದರ ಜತೆಗೆ ಜನಸಾಮಾನ್ಯರ ಕೆಲಸ ಕಾರ್ಯಗಳನ್ನು ಸಕಾಲದಲ್ಲಿ ಮಾಡದಿದ್ದರೆ ನನ್ನ ಕೈಚಳಕ ತೋರಿಸಬೇಕಾಗುತ್ತದೆ ಎಂದು ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು ಹೇಳಿದರು.

    ಪಟ್ಟಣದ ಟಿಎಪಿಸಿಎಂಎಸ್ ರೈತ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಪುರಸಭೆ ಉಪಚುನಾವಣೆಯಲ್ಲಿ ಚುನಾಯಿತರಾದ ನೂತನ ಜೆಡಿಎಸ್ ಸದಸ್ಯರಿಗೆ ಅಭಿನಂದನೆ ಮತ್ತು ಕೃತಜ್ಞತಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

    ಕಳೆದ ಚುನಾವಣೆ ಸೋಲಿನ ಬಳಿಕ ನಾನು ಯಾವುದೇ ಅಧಿಕಾರಿಗಳಿಗೂ ಕರೆ ಮಾಡಿ ಕೆಲಸ ಮಾಡುವಂತೆ ಸೂಚನೆ ನೀಡಿಲ್ಲ. ಪುರಸಭೆಯಲ್ಲಿ 23 ಸದಸ್ಯರಿದ್ದು ಅವರು ಹೇಳಿದಂತೆ ಅಧಿಕಾರಿಗಳು ಜನಪರವಾದ ಕೆಲಸಗಳನ್ನು ನಿರ್ವಹಿಸಬೇಕು. ಪುರಸಭೆ ವ್ಯಾಪ್ತಿಯಲ್ಲಿ ಸ್ಥಗಿತಗೊಂಡಿರುವ ವಿವಿಧ ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದರು.

    ಇಡೀ ದೇಶದ ರಾಜಕಾರಣದಲ್ಲಿ ಐದು ವರ್ಷಗಳ ಅಂತರದಲ್ಲಿ ಲೋಕಸಭೆಯ ಎರಡು ಚುನಾವಣೆ ಹಾಗೂ ವಿಧಾನಸಭೆಯ ಎರಡು ಚುನಾವಣೆಗಳನ್ನು ಎದುರಿಸಿದ್ದ ವ್ಯಕ್ತಿ ಯಾರಾದರೂ ಇದ್ದರೆ ಅದು ಸಿ.ಎಸ್.ಪುಟ್ಟರಾಜು ಮಾತ್ರ. ಇದರಲ್ಲಿ ಎರಡು ಚುನಾವಣೆ ಸೋತು ಎರಡರಲ್ಲಿ ಗೆದ್ದಿದ್ದೇನೆ. ಯಾವಾಗಲೂ ಚುನಾವಣೆ ಎಂದರೆ ಹೆದರಿಕೊಳ್ಳುತ್ತಿರಲಿಲ್ಲ. ಆದರೀಗ ಇತ್ತೀಚಿಗೆ ಚುನಾವಣೆ ಎಂದರೆೆ ಮೈ ಜುಮ್ ಎನ್ನಿಸುತ್ತದೆ. 2023ರ ವಿಧಾನಸಭಾ ಚುನಾವಣಾ ಫಲಿತಾಂಶ ನನಗೆ ಆತಂಕ ತಂದಿತ್ತು. ಪುರಸಭೆ ಉಪ ಚುನಾವಣೆ ಗೆಲುವು ಹೊಸ ಚೈತನ್ಯ ಮೂಡಿಸಿದೆ. ಮುಂದಿನ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಸೇರಿದಂತೆ ಎಲ್ಲ ಚುನಾವಣೆಗಳಲ್ಲೂ ನಮ್ಮ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸೋಣ. ಕ್ಷೇತ್ರದ 26 ಪಂಚಾಯಿತಿಗಳಲ್ಲಿ ಜೆಡಿಎಸ್ ಬೆಂಬಲಿತರು ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.

    ಪುರಸಭೆ ಮಾಜಿ ಅಧ್ಯಕ್ಷೆ ಅರ್ಚನಾ ಚಂದ್ರು, ಶ್ವೇತಾ ಉಮೇಶ್, ಸರಸ್ವತಿ, ಸುನೀತಾ ಕದಿರೇಷನ್, ಶಿವಕುಮಾರ್, ಆರ್.ಸೋಮಶೇಖರ್, ಎಂ.ಗಿರೀಶ್, ಚಂದ್ರು, ಟಿಎಪಿಸಿಎಂಎಸ್ ಅಧ್ಯಕ್ಷ ಡಿ.ಶ್ರೀನಿವಾಸ್, ಜೆಡಿಎಸ್ ಮುಖಂಡರಾದ ವಕೀಲ ಕಣಿವೆ ಯೋಗೇಶ್ ಪಿ.ಎಸ್.ಲಿಂಗರಾಜು, ಹಾರೋಹಳ್ಳಿ ನಂಜೇಗೌಡ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts