More

    ಮಾಜಿ ಶಾಸಕ ಅನಿಲ್‌ಲಾಡ್ ಕಾಂಗ್ರೆಸ್ ತೊರೆದು ಜೆಡಿಎಸ್‌ಗೆ

    ಬಳ್ಳಾರಿ: ಮಾಜಿ ಶಾಸಕ ಅನಿಲ್‌ಲಾಡ್ ರಾತ್ರೋರಾತ್ರಿ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಗೊಂಡಿದ್ದು, ಜಿಲ್ಲೆಯಲ್ಲಿ ಮತ್ತಷ್ಟು ಸಂಚಲನ ಮೂಡಿಸಿದೆ.

    ಇದನ್ನೂ ಓದಿ: ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಮಾಜಿ ಶಾಸಕ ಅನಿಲ್‌ಲಾಡ್

    ಕಾಂಗ್ರೆಸ್‌ನ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಅನಿಲ್‌ಲಾಡ್‌

    ನಗರದ ಕಾಂಗ್ರೆಸ್‌ನ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಅನಿಲ್‌ಲಾಡ್‌ಗೆ ಟಿಕೆಟ್ ತಪ್ಪಿದ್ದರಿಂದಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು. ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವುದಾಗಿಯೂ ಘೋಷಣೆ ಮಾಡಿದ್ದರು. ಈ ಬೆನ್ನೆಲ್ಲೇ ಮಾಜಿ ಸಿಎಂ ಎಚ್.ಡಿ.ಕುಮಾರ ಸ್ವಾಮಿ ಬೆಂಗಳೂರಿಗೆ ಕರೆಸಿಕೊಂಡು ಲಾಡ್‌ಗೆ ಜೆಡಿಎಸ್‌ನಿಂದ ಸ್ಪರ್ಧಿಸುವಂತೆ ಹೇಳಿದ್ದಾರೆ. ಗುರುವಾರ ನಾಮಪತ್ರ ಸಲ್ಲಿಸುವ ಸಾಧ್ಯತೆಗಳಿವೆ.

    ದಿಢೀರ್ ರಾಜಕೀಯ ಬೆಳವಣಿಗೆ

    ರಾತ್ರೋರಾತ್ರಿ ಜೆಡಿಎಸ್ ಅಭ್ಯರ್ಥಿ ಬದಲಾಗಿದ್ದು, ಮತದಾರರಿಗೆ ಅಚ್ಚರಿ ಎನಿಸಿದೆ. ಈ ಹಿಂದೆ ಮುನ್ನಾಭಾಯ್ ಅವರನ್ನು ಜೆಡಿಎಸ್ ಅಭ್ಯರ್ಥಿ ಎಂದು ಎಚ್‌ಡಿಕೆ ಬಳ್ಳಾರಿಗೆ ಆಗಮಿಸಿದ್ದ ವೇಳೆ ವೇದಿಕೆಯಲ್ಲೇ ಘೋಷಣೆ ಮಾಡಿದ್ದರು. ಆದರೆ, ದಿಢೀರ್ ರಾಜಕೀಯ ಬೆಳವಣಿಗೆಯಿಂದಾಗಿ ಮುನ್ನಾಭಾಯ್‌ಗೆ ಟಿಕೆಟ್ ತಪ್ಪಿದೆ.

    ತ್ರಿಕೋನ ಸ್ಪರ್ಧೆ

    ಈಗಾಗಲೇ ಬಳ್ಳಾರಿ ನಗರ ರಣಕಣವಾಗಿದ್ದು, ಕಾಂಗ್ರೆಸ್‌ನಿಂದ ಭರತ್ ರೆಡ್ಡಿ, ಬಿಜೆಪಿಯಿಂದ ಸೋಮಶೇಖರ ರೆಡ್ಡಿ, ಕೆಆರ್‌ಪಿಪಿಯಿಂದ ಲಕ್ಷ್ಮೀ ಅರುಣಾ ಅವರು ಸ್ಪರ್ಧೆ ಮಾಡುತ್ತಿದ್ದು, ತ್ರಿಕೋನ ಸ್ಪರ್ಧೆ ಏರ್ಪಡಲಿದೆ ಎನ್ನುವ ಮಾತುಗಳು ಕೇಳಿಬರುವ ಮುನ್ನವೇ ನಾಲ್ಕನೇ ಅಭ್ಯರ್ಥಿಯಾಗಿ ಅನಿಲ್‌ಲಾಡ್ ಎಲ್ಲರಿಗೂ ಶಾಕ್ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts