More

    ವರ್ಣರಂಜಿತ ವೇದಿಕೆಯಲ್ಲಿ ಪ್ರತಿಭಾವಂತ ಮಕ್ಕಳನ್ನು ಪುರಸ್ಕರಿಸಿ ಗೌರವಿಸಿದ ಮಾಜಿ ಸಚಿವ ಎ. ಮಂಜು

    ಅರಕಲಗೂಡು: ಆಧುನಿಕತೆಗೆ ಒಗ್ಗಿಕೊಳ್ಳುವ ಮೂಲಕ ಮಕ್ಕಳು ದೇಶೀಯ ಕಲೆಗಳತ್ತಲೂ ಹೆಚ್ಚು ಆಸಕ್ತಿ ಬೆಳೆಸಿಕೊಂಡು ತಮ್ಮಲ್ಲಿ ಹುದುಗಿರುವ ಪ್ರತಿಭೆಯನ್ನು ಹೊರಹಾಕಲು ಭವಿಷ್ಯದಲ್ಲಿ ಎದುರಾಗುವ ಎಲ್ಲ ರೀತಿಯ ಸವಾಲುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕಿದೆ ಎಂದು ಮಾಜಿ ಸಚಿವ ಎ. ಮಂಜು ಸಲಹೆ ನೀಡಿದರು.

    ಪಟ್ಟಣದ ಶಿವದೇವ ಕಲ್ಯಾಣ ಮಂಟಪದಲ್ಲಿ ಎ. ಮಂಜು ಅಭಿಮಾನಿ ಬಳಗದ ವತಿಯಿಂದ ಭಾನುವಾರ ರಾತ್ರಿ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕರೊನಾ ಲಾಕ್ ಡೌನ್ ಸಮಯದಲ್ಲಿ ಶಾಲೆಗಳು ನಡೆಯದೆ ಮನೆಯಲ್ಲಿಯೇ ಉಳಿದಿದ್ದ ಮಕ್ಕಳ ಪ್ರತಿಭೆಯನ್ನು ಗುರುತಿಸುವ ಉದ್ದೇಶದಿಂದ ಸಾಮಾಜಿಕ ಜಾಲ ತಾಣದ ಮುಖೇನ ಒದಗಿಸಿದ್ದ ವಿಭಿನ್ನ ಪ್ರತಿಭಾ ವೇದಿಕೆಗೆ ನಿರೀಕ್ಷೆಗೂ ಮೀರಿ ಅಭೂತಪೂರ್ವ ಬೆಂಬಲ‌ ಸಿಕ್ಕಿದ್ದು ಶ್ಲಾಘನೀಯ ಸಂಗತಿ. ಪೋಷಕರು ಮಕ್ಕಳ ಪ್ರತಿಭೆ ಗುರುತಿಸುವ ಕಾರ್ಯವನ್ನು ಹೊಣೆಗಾರಿಕೆಯಾಗಿ ವಹಿಸಿಕೊಳ್ಳಬೇಕು. ಮುಖ್ಯವಾಗಿ ಇಂಥ ಕಾರ್ಯಕ್ರಮಗಳಲ್ಲಿ ಮಕ್ಕಳ ಪಾಲಕರು ಹಾಜರಿರುವುದು ಒಳಿತು ಎಂದರು.

    ಚಿತ್ರನಟಿ ದೀಪಿಕಾ ದಾಸ್ ಮಾತನಾಡಿ, ಯಾರಲ್ಲಿ ಯಾವ ಪ್ರತಿಭೆ ಅಡಗಿರುತ್ತದೆಯೋ ಗೊತ್ತಿರುವುದಿಲ್ಲ, ಹಾಗಾಗಿ ವಿದ್ಯೆಗೆ ನೀಡುವಷ್ಟೆ ಆದ್ಯತೆಯನ್ನು ಕಲೆ ಮತ್ತು ಕ್ರೀಡೆಗಳಿಗೆ ನೀಡಿದರೆ ಭವಿಷ್ಯದ ಬದುಕು ಕಟ್ಟಿಕೊಳ್ಳಲು ಸಹಾಕವಾಗಲಿದೆ ಎಂದು ಹೇಳಿದರು.

    ಅಂತರಾಷ್ಟ್ರೀಯ ವಾಲಿಬಾಲ್ ಕ್ರೀಡಾಪಟು ಅನುಪ್ ಮಾತನಾಡಿದರು. ಕಾರ್ಯಕ್ರದ ನೇತೃತ್ವ ವಹಿಸಿದ್ದ ಕೆ.ಆರ್. ಹೊಯ್ಸಳ, ಸಾಹಸಗೌಡ, ಗಣೇಶ್, ಜಮೀರ್ ಅಹಮದ್, ಭಾರ್ಗವ, ಸಚಿನ್, ಶಶಾಂಕ್, ಶ್ರೀನಿವಾಸ್, ಹಳ್ಳಿಮೈಸೂರು ವಿರೂಪಾಕ್ಷ ಅವರನ್ನು ಎ. ಮಂಜು ಸನ್ಮಾನಿಸಿದರು.

    ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿ ಎಬ್ಬಿಸಿದ್ದ ೩೦೦ ಪ್ರತಿಭಾನ್ವಿತ ಮಕ್ಕಳಿಗೆ ಪೋಷಕರ ಸಮ್ಮಖದಲ್ಲಿ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ವರ್ಣರಂಜಿತ ವೇದಿಕೆಯ ಎಲ್ ಇಡಿ ಪರದೆಯಲ್ಲಿ ಮೂಡಿಬರುತ್ತಿದ್ದ ವಿವಿಧ ಕಲಾತ್ಮಕ ಪ್ರತಿಭಾ ಪ್ರದರ್ಶನಗಳನ್ನು ಕಣ್ತುಂಬಿಕೊಂಡು ಆನಂದಿಸಿ ಮಕ್ಕಳು ಬಣ್ಣದ ಬೆಳಕಿನಲ್ಲಿ ಮಿಂದೆದ್ದಿದ್ದು ವಿಶೇಷವಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts