More

    ಸಿಎಂ ಬಿಎಸ್​ವೈ ಭೇಟಿ ಮಾಡಿದ ಎಚ್​ಡಿಕೆ: ಹಾಲಿ-ಮಾಜಿ ಸಿಎಂ ನಡುವೆ ನಡೆದ ಚರ್ಚೆಯೇನು?

    ಬೆಂಗಳೂರು: ಅಭಿವೃದ್ಧಿ ಕಾರ್ಯಕ್ಕಾಗಿ ಮಾತ್ರ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪರನ್ನು ಭೇಟಿಯಾದೆ ಎಂದು ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರು ತಿಳಿಸಿದರು.

    ಸಿಎಂ ಬಿಎಸ್‌ವೈ ಭೇಟಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಎಚ್​ಡಿಕೆ, ಎರಡು ದಿನದಿಂದ ಬೆಂಗಳೂರಿನಲ್ಲಿ ಸಾಕಷ್ಟು ಮಳೆ ಆಗಿತ್ತು. ನಮ್ಮ‌ಶಾಸಕ‌ ಮಂಜುನಾಥ್ ದಾಸರಹಳ್ಳಿ ಅವರ ಕ್ಷೇತ್ರದಲ್ಲೂ ಸಾಕಷ್ಟು ಹಾನಿ ಆಗಿತ್ತು. ನಾನು ಸಿಎಂ ಆಗಿದ್ದಾಗ 515 ಕೋಟಿಯ ಯೋಜನೆಗೆ ಅನುಮೋದನೆ ಕೊಟ್ಟಿದ್ದೆ. ಆದರೆ ಈಗ 16 ಕೋಟಿ ‌ಮಾತ್ರ ಕೊಟ್ಟಿದ್ದಾರೆ ಹೀಗಾಗಿ ಅಲ್ಲಿ ಆಗಿರುವ ಅನಾಹುತ ನಿರ್ವಹಣೆಗೆ ಅಗತ್ಯ ನೆರವು ನೀಡೋದಕ್ಕೆ ಮನವಿ ಮಾಡಿದ್ದೇವೆ ಎಂದರು.

    ಇದನ್ನೂ ಓದಿ: ವಿಧವೆ ತಂಗಿಯ ಮೇಲೆ ಗಂಡ ಕಣ್ಣುಹಾಕಿದ್ದಾರೆ: ಕಾನೂನಿನಡಿ ಇರುವ ದಾರಿಗಳೇನು?

    ಬಿಜೆಪಿ ನಾಯಕತ್ವ ಬದಲಾವಣೆ ಮಾತು ಕೇಳಿಬರುತ್ತಿರುವ ಸಂದರ್ಭದಲ್ಲಿ ಭೇಟಿ ಮಾಡಿದ್ದೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಎಚ್​ಡಿಕೆ, ಅದು ನನಗೆ ಗೊತ್ತಿಲ್ಲ. ಅಭಿವೃದ್ಧಿ ಕಾರ್ಯಕ್ಕೆ ಭೇಟಿ ಆಗಿದ್ದೇನಷ್ಟೇ ಎಂದರು.

    ಇದೇ ವೇಳೆ ಮಾತನಾಡಿದ ದಾಸರಹಳ್ಳಿ ಶಾಸಕ ಮಂಜುನಾಥ್, ಮಳೆಯಿಂದಾಗಿ ನನ್ನ ಕ್ಷೇತ್ರದಲ್ಲಿ ಹೆಚ್ಚು ಹಾನಿ ಆಗಿದೆ. ಮನೆಗಳಿಗೂ ನೀರು ನುಗ್ಗಿದೆ. ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಸಾಕಷ್ಟು ಅನುದಾನ ಬಿಡುಗಡೆ ಮಾಡಿದ್ದರು. ಸರ್ಕಾರ ಬದಲಾದಾಗ ಬಿಡುಗಡೆಗೆ ಸ್ವಲ್ಪ ತೊಂದರೆ ಆಗಿತ್ತು. ಪೀಣ್ಯ ಕೈಗಾರಿಕಾ ಪ್ರದೇಶ ಕೂಡಾ ನಮ್ಮ ಕ್ಷೇತ್ರಕ್ಕೆ ಬರುತ್ತದೆ. ಮಳೆಯಿಂದಾಗಿ ಅಲ್ಲೂ ಸಮಸ್ಯೆ ಆಗಿತ್ತು. ಆದಾಯ ಬರುವ ಕ್ಷೇತ್ರವಾಗಿದ್ದರಿಂದ ಆದಷ್ಟು ಬೇಗ ಗಮನ ಹರಿಸುವಂತೆ ಮನವಿ ಮಾಡಿದ್ದೇವೆಂದು ಹೇಳಿದರು.

    ‘ಮಾದಕ’ ನಟಿಗಾಗಿ ಹೆಂಡತಿಯನ್ನೇ ತೊರೆದ ರವಿಶಂಕರ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts