More

    ಅತ್ಯಾಚಾರ ಆರೋಪಿ ಮಾಜಿ ಬಿಷಪ್​ ಫ್ರಾಂಕೋ ಮುಲ್ಲಕ್ಕಲ್ ವಿರುದ್ಧ ದೋಷಾರೋಪ

    ಕೊಟ್ಟಾಯಂ(ಕೇರಳ): ದೇಶದ ಗಮನಸೆಳೆದಿದ್ದ ಕ್ರಿಶ್ಚಿಯನ್ ಸನ್ಯಾಸಿನಿ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಬಿಷಪ್​ ಫ್ರಾಂಕೋ ಮುಲ್ಲಕ್ಕಲ್​ ವಿರುದ್ಧ ದೋಷಾರೋಪ ಪಟ್ಟಿ ರಚನೆಯಾಗಿದೆ. ಸ್ಥಳೀಯ ಹೆಚ್ಚುವರಿ ಸೆಷನ್ಸ್ ಕೋರ್ಟ್​ ನಲ್ಲಿ ಈ ಪ್ರಕರಣದ ವಿಚಾರಣೆ ನಡೆದಿದ್ದು, ಅತ್ಯಾಚಾರಕ್ಕೆ ಸಂಬಂಧಿಸಿದ ಸಾಕ್ಷ್ಯಾಧಾರಗಳನ್ನು ಮುಂದಿಟ್ಟುಕೊಂಡು ಈ ದೋಷಾರೋಪ ಪಟ್ಟಿ ಸಿದ್ದಪಡಿಸಲಾಗಿದ್ದು, ಮುಂದಿನ ವಿಚಾರಣೆ ಸೆಪ್ಟೆಂಬರ್ 16ರಂದು ನಡೆಯಲಿದೆ.

    ಫ್ರಾಂಕೋ ಮುಲ್ಲಕ್ಕಲ್ ವಿರುದ್ಧ ಐಪಿಸಿಯ ವಿವಿಧ ಸೆಕ್ಷನ್​ಗಳ ಪ್ರಕಾರ ಪ್ರಕರಣ ದಾಖಲಾಗಿದೆ. ತನ್ನ ಮೇಲಿನ ಆರೋಪವನ್ನು ಅಲ್ಲಗಳೆದಿರುವ ಫ್ರಾಂಕೋ ಮುಲ್ಲಕ್ಕಲ್​ಗೆ ಕಳೆದ ವಾರ ಜಾಮೀನು ಮಂಜೂರಾಗಿತ್ತು. ಆದರೆ, ಇದಕ್ಕೆ ಕಠಿಣ ಷರತ್ತುಗಳನ್ನು ವಿಧಿಸಿದ್ದ ಕೋರ್ಟ್​ ತಿಳಿಸಲಾದ ದಿನಾಂಕಗಳನ್ನು ವಿಚಾರಣೆ ಹಾಜರಾಗಬೇಕು ಎಂದು ನಿರ್ದೇಶನವನ್ನೂ ನೀಡಿತ್ತು. ಇದರಂತೆ, ಅವರು ಇಂದು ವಿಚಾರಣೆಗೆ ಹಾಜರಾಗಿದ್ದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಗಲಭೆ ಕುರಿತು ಜಮೀರ್​ ಅಹ್ಮದ್​ ಸರಣಿ ಟ್ವೀಟ್​

    ಇದಕ್ಕೂ ಮೊದಲು, ಮುಲ್ಲಕ್ಕಲ್​ ಸುಪ್ರೀಂ ಕೋರ್ಟ್ ಮೊರೆ ಹೋಗಿ ತನ್ನ ಮೇಲಿ ರೇಪ್ ಕೇಸ್​ ಅನೂರ್ಜಿತಗೊಳಿಸುವಂತೆ ಕೋರಿದ್ದರು. ಆದರೆ, ಸುಪ್ರೀಂ ಕೋರ್ಟ್​ ಅವರ ಮನವಿಯನ್ನು ತಿರಸ್ಕರಿಸಿದ್ದಲ್ಲದೆ, ವಿಚಾರಣೆ ಎದುರಿಸುವಂತೆ ಸೂಚಿಸಿತ್ತು. ಈ ಅರ್ಜಿಯಲ್ಲಿ ಅವರು ಕೇರಳ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿದ್ದರು. ಹೈಕೋರ್ಟ್​ ಕೂಡ ಮುಲ್ಲಕ್ಕಲ್​ಗೆ ವಿಚಾರಣೆ ಎದುರಿಸುವುದಕ್ಕೆ ನಿರ್ದೇಶಿಸಿತ್ತು.

    ಬಿಷಪ್​ ಆಗಿದ್ದ ಮುಲ್ಲಕ್ಕಲ್​ 2014ರಿಂದ 2016ರ ಅವಧಿಯಲ್ಲಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾಗಿ ಕ್ರೈಸ್ತ ಸನ್ಯಾಸಿನಿಯೊಬ್ಬರು ಕೊಟ್ಟಾಯಂ ಪೊಲೀಸ್ ಠಾಣೆಯಲ್ಲಿ 2018ರ ಜೂನ್​ ತಿಂಗಳಲ್ಲಿ ದೂರು ದಾಖಲಿಸಿದ್ದರು. ಇದಾಗಿ, ವಿಶೇಷ ತನಿಖಾ ತಂಡ ಬಿಷಪ್ ಅವರನ್ನು ಬಂಧಿಸಿತ್ತು. (ಏಜೆನ್ಸೀಸ್)

    ರೋರಿಚ್ ಎಸ್ಟೇಟ್ ಬದಲು ಹೆಸರಘಟ್ಟದಲ್ಲಿ ಫಿಲ್ಮ್​ಸಿಟಿ ನಿರ್ಮಾಣ … ಡಿಸಿಎಂ ಆಶ್ವಾಸನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts