More

    ಆಸ್ಟ್ರೇಲಿಯಾ ಮಾಜಿ ಕ್ರಿಕೆಟರ್​ ರಿಕ್ಕಿ ಪಾಂಟಿಗ್​ಗೆ ಕಾಡಿದ ನಾಲ್ವರು ಬೌಲರ್​ಗಳು ಇವರು…ಭಾರತದ ಈ ಸ್ಪಿನ್ನರ್​ನ ಎದುರಿಸುವುದು ಜಾಸ್ತಿಯೇ ಕಠಿಣ ಇತ್ತಂತೆ…

    ಮೆಲ್ಬೋರ್ನ್​: ಆಸ್ಟ್ರೇಲಿಯಾದ ಮಾಜಿ ಕ್ಯಾಪ್ಟನ್​ ರಿಕ್ಕಿ ಪಾಂಟಿಂಗ್​ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್​ಮನ್​. ಅವರ ಕ್ಯಾಪ್ಟನ್ಸಿಯಲ್ಲಿ ಆಸ್ಟ್ರೇಲಿಯಾ ಮೂರು ವಿಶ್ವಕಪ್​ಗಳನ್ನು ಗೆದ್ದಿದೆ.

    ರಿಕ್ಕಿ ಪಾಂಟಿಂಗ್​ ಅವರು ಏಕದಿನ ಪಂದ್ಯಾವಳಿ, ಟೆಸ್ಟ್​ ಹಾಗೂ ಟಿ-20 ಮೂರು ಸ್ವರೂಪದ ಕ್ರಿಕೆಟ್​ನಲ್ಲಿ ಪಳಗಿದ್ದರು. ಟೀಂಗೆ ಆಧಾರಸ್ತಂಭದಂತೆ ಇದ್ದು ಜವಾಬ್ದಾರಿ ನಿಭಾಯಿಸಿದವರು. ಅವರೊಬ್ಬ ಯಶಸ್ವಿ ಕ್ಯಾಪ್ಟನ್​ ಎಂದೇ ಕರೆಸಿಕೊಂಡಿದ್ದಾರೆ. 168 ಟೆಸ್ಟ್​, 375 ಏಕದಿನ ಪಂದ್ಯಾವಳಿಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 27,000 ರನ್​ಗಳನ್ನು ಗಳಿಸಿದ್ದಾರೆ.

    ಅದ್ಭುತ ಬ್ಯಾಟ್ಸ್​ಮನ್​ ಎನ್ನಿಸಿಕೊಂಡಿದ್ದ ರಿಕ್ಕಿ ಪಾಂಟಿಂಗ್​ ಅವರು ತಮ್ಮ ಕ್ರಿಕೆಟ್​ ಜೀವನದಲ್ಲಿ ತಾವು ಎದುರಿಸಿದ ಬೌಲರ್​ಗಳಲ್ಲಿ ಯಾರ್ಯಾರು ಅತ್ಯುತ್ತಮ ಎಂಬುದನ್ನು ಇತ್ತೀಚೆಗೆ ಹೇಳಿಕೊಂಡಿದ್ದಾರೆ. ಅಂದರೆ ತಮ್ಮ ದೃಷ್ಟಿಯಲ್ಲಿ ಯಾರು ತುಂಬ ಅತ್ಯುತ್ತಮ ಬೌಲರ್​ಗಳಾಗಿದ್ದರು ಎಂಬುದನ್ನು ಅವರು ಬಹಿರಂಗ ಪಡಿಸಿದ್ದು ಅದರಲ್ಲಿ ಭಾರತದ ಓರ್ವ ಬೌಲರ್​ ಕೂಡ ಸೇರಿದ್ದಾರೆ.

    ಟ್ವಿಟರ್​ನಲ್ಲಿ ರಿಕ್ಕಿ ಪಾಂಟಿಂಗ್ ಅಭಿಮಾನಿಯೋರ್ವರು ಪ್ರಶ್ನೆಯನ್ನು ಕೇಳಿದ್ದರು. ನಿಮ್ಮ ಕ್ರಿಕೆಟ್​ ವೃತ್ತಿಜೀವನದಲ್ಲಿ ನೀವು ಫೇಸ್​ ಮಾಡಿದ ಬೌಲರ್​ಗಳಲ್ಲಿ ಯಾರ ಬೌಲಿಂಗ್​ ತುಂಬ ಕಷ್ಟಕರವಾಗಿತ್ತು. ನಿಮ್ಮ ದೃಷ್ಟಿಯಲ್ಲಿ ಅತ್ಯುತ್ತಮ ಬೌಲರ್​ಗಳು ಯಾರು ಎಂದು ಕೇಳಿದ್ದರು. ಅದಕ್ಕೆ ಉತ್ತರಿಸಿದ ರಿಕ್ಕಿ, ಪಾಕಿಸ್ತಾನದ ಫಾಸ್ಟ್​ ಬೌಲರ್ಸ್​ ಹಾಗೂ ಇಂಡಿಯನ್​ ಸ್ಪಿನ್ನರ್​ ಓರ್ವರ ಹೆಸರು ಸೇರಿ ಒಟ್ಟು ನಾಲ್ವರು ಬೌಲರ್​ಗಳನ್ನು ಹೆಸರಿಸಿದ್ದಾರೆ.

    ಫಾಸ್ಟ್​ ಬೌಲರ್​ಗಳಾದ ಪಾಕಿಸ್ತಾನದ ವಾಸಿಂ ಅಕ್ರಮ್​ ಹಾಗೂ ವೆಸ್ಟ್​ ಇಂಡೀಸ್​ನ ಕರ್ಟ್ಲಿ ಆಂಬ್ರೋಸ್ ತುಂಬ ಅತ್ಯುತ್ತಮ ಬೌಲರ್​ಗಳು ಎನ್ನಿಸುತ್ತಾರೆ. ಶೋಯೆಬ್​ ಅಕ್ತರ್​ ಅವರು ಕ್ವಿಕ್​ ಆಗಿ ಬೌಲ್​ ಮಾಡುವ ರೀತಿಯೂ ಸ್ವಲ್ಪ ಕಷ್ಟವಾಗುತ್ತಿತ್ತು. ಆದರೆ ಎಲ್ಲರಿಗಿಂತಲೂ ನನಗೆ ಕಠಿಣವಾಗಿ ಕಾಡಿದ್ದು ಭಾರತದ ಸ್ಪಿನ್ನರ್​ ಹರ್ಭಜನ್​ ಸಿಂಗ್​ ಅವರು ಎಂದು ಪಾಂಟಿಂಗ್ ಹೇಳಿದ್ದಾರೆ. ಹರ್ಭಜನ್​ ಸಿಂಗ್​ ಅವರ ಬೌಲಿಂಗ್​ಗೆ ನಾನು ಅದೆಷ್ಟೋ ಬಾರಿ ಔಟ್ ಆಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts