More

    ಅರಣ್ಯದ ಎಲ್ಲೆಂದರಲ್ಲಿ ಮದ್ಯದ ಬಾಟಲಿ

    ಬಾವನಸೌಂದತ್ತಿ: ರಾಯಬಾಗ ತಾಲೂಕಿನ ಯಡ್ರಾಂವ ಅರಣ್ಯ ಪ್ರದೇಶದಲ್ಲಿ ಕುಡುಕರು ಮದ್ಯ ಸೇವಿಸಿ, ಅರಣ್ಯ ಪ್ರದೇಶದ ಎಲ್ಲೆಂದರಲ್ಲಿ ಮದ್ಯದ ಬಾಟಲಿಗಳನ್ನು ಎಸೆದು ಹೋಗುತ್ತಿದ್ದಾರೆ. ಇದರಿಂದ ಸುಂದರ ಪರಿಸರ ಮಲೀನವಾಗುತ್ತಿದೆ.

    ಅರಣ್ಯ ಪ್ರದೇಶದ ಅಂದ ಹಾಳಾಗುತ್ತಿರುವುದರಿಂದ ಪರಿಸರ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಮದ್ಯ ಮಾರಾಟಕ್ಕೆ ಹಲವು ದಿನ ಬ್ರೇಕ್ ಬಿದ್ದಿತ್ತು. ಬಳಿಕ ಮದ್ಯ ಮಾರಾಟಕ್ಕೆ ಸರ್ಕಾರದಿಂದ ಅನುಮತಿ ದೊರೆತಿದ್ದರಿಂದ ಮದ್ಯ ವ್ಯಸನಿಗಳು ಮುಗಿಬಿದ್ದು ಖರೀದಿಸಿದರು. ಪರಸ್ಪರ ಅಂತರ ಕಾಯ್ದುಕೊಳ್ಳುವ ಸಲುವಾಗಿ ಬಾರ್‌ಗಳಲ್ಲಿ ಕುಳಿತು ಮದ್ಯ ಸೇವನೆಗೆ ಅವಕಾಶ ನೀಡಿರಲಿಲ್ಲ. ಹೀಗಾಗಿ ಕುಡುಕರು ಬಾರ್‌ಗಳಲ್ಲಿ ಮದ್ಯ ಖರೀದಿಸಿ ಯಡ್ರಾಂವ ಅರಣ್ಯ ಪ್ರದೇಶಕ್ಕೆ ತಂದು ಕುಡಿದ ಖಾಲಿ ಬಾಟಲಿ, ಪ್ಯಾಕೆಟ್‌ಗಳನ್ನು ಎಸೆದು ಗಲೀಜು ಮಾಡುತ್ತಿದ್ದಾರೆ. ಯಡ್ರಾಂವ ಗ್ರಾಮದಿಂದ ಬಾವನಸೌಂದತ್ತಿ ಗ್ರಾಮಕ್ಕೆ ಅರಣ್ಯ ಪ್ರದೇಶದ ಮೂಲಕ ಹಾದು ಹೋಗಬೇಕಾಗಿರುವುದರಿಂದ ಈ ಮಾರ್ಗ ಕುಡುಕರಿಗೆ ನೆಚ್ಚಿನ ತಾಣವಾದಂತಾಗಿದೆ.ಯಡ್ರಾಂವ ಗ್ರಾಮದಲ್ಲಿ ವೈನ್‌ಶಾಪ್ ಇದ್ದು, ಇಲ್ಲಿ ಮದ್ಯ ಖರೀದಿಸಿ ಸಮೀಪದ ಅರಣ್ಯ ಪ್ರದೇಶದಲ್ಲಿ ತಂದು ಕುಡಿದು ಮೋಜು ಮಸ್ತಿ ಮಾಡುತ್ತಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಮಾತ್ರ ಕ್ರಮಕ್ಕೆ ಮುಂದಾಗದೇ ಮೌನ ವಹಿಸಿದ್ದಾರೆ. ಇನ್ನಾದರೂ ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮಕ್ಕೆ ಮುಂದಾಗಲಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

    ಬಾವನಸೌಂದತ್ತಿ ಅರಣ್ಯಪ್ರದೇಶದಲ್ಲಿ ಮದ್ಯ ಕುಡಿದು ಬಾಟಲಿ, ಪ್ಯಾಕೆಟ್ ಮತ್ತು ಪ್ಲಾಸ್ಟಿಕ್‌ಗಳನ್ನು ಬೀಸಾಡಿ ಹೋಗುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಪರಿಸರ ರಕ್ಷಣೆ ಕಾಳಜಿ ಎಲ್ಲರೂ ವಹಿಸಬೇಕು.
    | ಪಿ.ಪಿ. ರಜಪೂತ ಡಿಆರ್‌ಎಫ್‌ಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts