More

    ಕಾಡು ಉಳಿಸುವುದು ಎಲ್ಲರ ಕರ್ತವ್ಯ

    ಸಿರಗುಪ್ಪ: ರಾಜ್ಯದಲ್ಲಿ ಅರಣ್ಯ ಸಂಪತ್ತು ಹೇರಳವಾಗಿದ್ದು, ಪುರಾತನ ಕಾಲದಲ್ಲಿ ಕರ್ನಾಟಕ ರಾಜ್ಯ ದಂಡಕಾರಣ್ಯದ ಒಂದು ಮುಖ್ಯ ಪ್ರದೇಶವಾಗಿತ್ತೆಂದು ಮುಖ್ಯಗುರು ಚಿಣಿಗಿಸಾಬ್ ತಿಳಿಸಿದರು.

    ಇದನ್ನೂ ಓದಿ: ಮರೆವಿನ ಸಮಸ್ಯೆ ಕಾಡುತ್ತಿದೆಯೇ? ನಿರ್ಲಕ್ಷ್ಯ ಬೇಡ..!

    ಉತ್ತನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಸ್ಯ ಶ್ಯಾಮಲಾ ದಿನಾಚರಣೆ ಅಂಗವಾಗಿ ಶಾಲಾ ಅಂಗಳದಲ್ಲಿ ಸಸಿ ನೆಟ್ಟು ಮಾತನಾಡಿದರು.

    ಮನುಷ್ಯನ ಜೀವನಕ್ಕೆ ಕಾಡು ಬಹಳಷ್ಟು ಕಾಣಿಕೆ ಕೊಟ್ಟಿದೆ. ಇಂಧನದಿಂದ ಹಿಡಿದು ಔಷಧಿಯ ಸಸ್ಯಗಳವರೆಗೂ ಮನುಷ್ಯನಿಗೆ ಬೆನ್ನೆಲುಬಾಗಿ ನಿಂತಿದೆ. ವನ್ಯಜೀವಿಗಳಿಗೆ ಆಶ್ರಯತಾಣ, ವಿವಿಧ ಜೀವಗಳ ಕಣಜ ಕಾಡು.

    ಪ್ರಪಂಚದ ಅತಿ ಹೆಚ್ಚು ಕಾಡುಗಳಿರುವ ದೇಶಗಳಲ್ಲಿ ಭಾರತವು ಒಂದು, ಭಾರತದ ಅರಣ್ಯದ ವಿಸ್ತೀರ್ಣವು 7ಲಕ್ಷ ಚದರ ಕಿ.ಮೀ.ಗಳಿಗಿಂತ ಹೆಚ್ಚಿದೆ.
    ಕಾಡುಗಳಿದ್ದರೆ ಮಾತ್ರ ಮನುಷ್ಯರು ಮತ್ತು ಪ್ರಾಣಿಪಕ್ಷಿಗಳು ಬದುಕಲು ಸಾಧ್ಯ.

    ಆದ್ದರಿಂದ ಕಾಡನ್ನು ಉಳಿಸಿ ಬೆಳೆಸಲು ಪ್ರತಿಯೊಬ್ಬರು ಗಿಡಮರಗಳನ್ನು ಬೆಳೆಸಿ ಎಂದು ಹೇಳಿದರು. ತಾಳೂರು ಕ್ಲಷ್ಟರ್‌ನ ಸಿ.ಆರ್.ಪಿ. ಮಲ್ಲಿಕಾರ್ಜುನ, ಶಿಕ್ಷಕರಾದ ಕೆ.ಭೀಮರೆಡ್ಡಿ, ದಿನೇಶ, ಅತಿಥಿ ಶಿಕ್ಷಕರಾದ ಭಾಗ್ಯಶ್ರೀ, ಸಮೀವುಲ್ಲಾ. ಸಫಿವುಲ್ಲಾ, ಹುಲುಗಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts