More

    ಹಳೇ ಮೂಡಿಗೆರೆಯಲ್ಲಿ ಕಾಡಾನೆ ಹಿಂಡು

    ಮೂಡಿಗೆರೆ: ಸಕಲೇಶಪುರ ಭಾಗದಲ್ಲಿ ಬೀಡುಬಿಟ್ಟು ಅಲ್ಲಿನ ರೈತರ ನೆಮ್ಮದಿ ಭಂಗ ಮಾಡಿದ್ದ 4 ಮರಿ ಸೇರಿ 20 ಕಾಡಾನೆಗಳ ಹಿಂಡು ಗುರುವಾರ ರಾತ್ರಿ ಹಳೇ ಮೂಡಿಗೆರೆ ಸಮೀಪದ ಕೃಷ್ಣೇಗೌಡ ಎಂಬುವರ ಕಾಫಿ ತೋಟಕ್ಕೆ ಲಗ್ಗೆಯಿಟ್ಟು ಅಲ್ಲೇ ಬೀಡುಬಿಟ್ಟಿವೆ.

    ಗುರುವಾರ ಬೇಲೂರು ತಾಲೂಕಿನ ಅರೆಹಳ್ಳಿ ಮೂಲಕ ಮೂಡಿಗೆರೆ ತಾಲೂಕಿನ ಗೌತಹಳ್ಳಿ, ದುಂಡುಗ ಗ್ರಾಮದ ಸುಬ್ಬೇಗೌಡ ಅವರ ತೋಟದಲ್ಲಿ ಸಾಗಿ ಶೆಟ್ಟಯಾರ್ ಎಂಬುವರ ಪಾಳು ಬಿದ್ದ ಜಾಗದಲ್ಲಿ ಗುರುವಾರ ಸಂಜೆವರೆಗೂ ಬೀಡು ಬಿಟ್ಟಿದ್ದವು.

    ತಾಲೂಕಿಗೆ ಒಮ್ಮೆಲೆ 20 ಕಾಡಾನೆಗಳ ಹಿಂಡು ದಾಂಗುಡಿ ಇಟ್ಟಿದ್ದರಿಂದ ಮಾಕೋನಹಳ್ಳಿ, ಹಳೇ ಮೂಡಿಗೆರೆ, ಚಿನ್ನಿಗ-ಜನ್ನಾಪುರ ಗ್ರಾಪಂ ವ್ಯಾಪ್ತಿಯ ಜನತೆ ಭಯಗೊಂಡಿದ್ದಾರೆ.

    ಜಿಲ್ಲಾ ಅರಣ್ಯ ಉಪ ಸಂರಕ್ಷಣಾಧಿಕಾರಿ ಜಗನ್ನಾಥ್, ಎಸಿಎಫ್ ಮುದ್ದಣ್ಣ, ಆರ್​ಎಫ್​ಒ ಮೋಹನ್, ಗೋಣಿಬೀಡು ಉಪ ವಲಯಾರಣ್ಯಾಧಿಕಾರಿ ಶಿವಕುಮಾರ್ ಮತ್ತು ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಪಟಾಕಿ ಸಿಡಿಸಿ ಕಾಡಾನೆ ಓಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಕಾಡಾನೆಗಳ ಗುಂಪು ಕಾಫಿ ತೋಟದಲ್ಲಿ ಅತ್ತಿತ್ತ ತಿರುಗಾಡುತ್ತಿದ್ದರೂ ರೊಚ್ಚಿಗೆದ್ದಿಲ್ಲ. ರೈತರ ಬೆಳೆಯೂ ಹಾನಿಯಾಗಿಲ್ಲ. ನಾಲ್ಕು ಮರಿಯಾನೆ ಇರುವುದರಿಂದ ಕಾಡಾನೆಗಳ ಹಿಂಡು ರೊಚ್ಚಿಗೇಳುವ ಸಾಧ್ಯತೆಯಿದೆ ಎಂದು ಜನ ಮನೆಯಿಂದ ಹೊರಬರಲು ಭಯಪಡುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts