More

    ಇಬ್ಬರನ್ನು ಸಾಯಿಸಿದ್ದ ಹುಲಿ ಕೊನೆಗೂ ಸೆರೆ ಸಿಕ್ಕಿತು; ಹತ್ತರ ಪ್ರಾಯದ ಹೆಣ್ಣು ಹುಲಿ ಮೈಸೂರಿಗೆ ರವಾನೆ

    ಕೊಡಗು: ಇಬ್ಬರನ್ನು ಸಾಯಿಸಿ ಕೊಡಗಿನಾದ್ಯಂತ ಎರಡು ದಿನಗಳಿಂದ ಆತಂಕ ಸೃಷ್ಟಿಸಿದ್ದ ಹುಲಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಕೊನೆಗೂ ಸೆರೆ ಹಿಡಿದಿದ್ದಾರೆ. ಇಬ್ಬರನ್ನು ಬಲಿ ಪಡೆದಿದ್ದ ಹುಲಿಯ ಸೆರೆಯಿಂದ ಕೊಡಗು ಜಿಲ್ಲೆಯ ಜನತೆ ಸದ್ಯಕ್ಕೆ ನಿರಾಳರಾಗಿದ್ದಾರೆ.

    ಶನಿವಾರ ರಾತ್ರಿ ಬಾಲಕನೊಬ್ಬನನ್ನು ಕೊಂದಿದ್ದ ವ್ಯಾಘ್ರ, ಇಂದು ಬೆಳ್ಳಂಬೆಳಗ್ಗೆ ವೃದ್ಧೆಯೊಬ್ಬರ ಮೇಲೂ ದಾಳಿ ಮಾಡಿ ಕೊಂದು ಹಾಕಿದೆ. ಪೊನ್ನಂಪೇಟೆ ತಾಲೂಕಿನ ಕುಮತೂರು ಗ್ರಾಮ ಬಾಲಕ ಅಯ್ಯಪ್ಪ (14) ಮತ್ತು ಟಿ.ಶೆಟ್ಟಿಗೇರಿ ಗ್ರಾಮದ ಕಾರ್ಮಿಕ ಮಹಿಳೆ ಚಿಣ್ಣಿ (60) ಹುಲಿ ದಾಳಿಯಿಂದ ಮೃತಪಟ್ಟ ದುರ್ದೈವಿಗಳು.

     

    ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲೂಕಿನ ಮಂಚಳ್ಳಿ ಗ್ರಾಮದಲ್ಲಿ ಹುಲಿಯನ್ನು ಸೆರೆ ಹಿಡಿಯಲಾಗಿದೆ. ಇಬ್ಬರ ಜೀವ ಬಲಿ ಪಡೆದಿದ್ದ ವ್ಯಾಘ್ರವನ್ನು ಪತ್ತೆ ಹಚ್ಚಿ ಬಂಧಿಸಲು ಅರಣ್ಯ ಇಲಾಖೆಯ ಪರಿಣತರು ಕಾರ್ಯಾಚರಣೆ ನಡೆಸಿದ್ದರು. ಅರಿವಳಿಕೆ ಮದ್ದು ಪ್ರಯೋಗಿಸಿ ಹತ್ತು ವರ್ಷದ ಹೆಣ್ಣು ಹುಲಿಯನ್ನು ಸೆರೆ ಹಿಡಿದಿರುವ ಅರಣ್ಯ ಇಲಾಖೆ, ಅದನ್ನು ಮೈಸೂರಿನ ಕೂರ್ಗಳ್ಳಿಗೆ ರವಾನಿಸಿದೆ.

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಹುಲಿಗೆ ಇಬ್ಬರು ಬಲಿ! ರಾತ್ರಿ ಬಾಲಕ, ಬೆಳಗ್ಗೆ ವೃದ್ಧೆಯನ್ನ ಕೊಂದ ವ್ಯಾಘ್ರ, ಬೆಚ್ಚಿಬಿದ್ದ ಸ್ಥಳೀಯರು

    ಹದಿಹರೆಯದ ಮಗಳನ್ನೇ ರೇಪ್ ಮಾಡಿ ಗರ್ಭಿಣಿಯಾಗಿಸಿದ, ಗರ್ಭಪಾತವಾದ ಮೇಲೆ ಮತ್ತೆ ಮೇಲೆರಗಿದ… ಕೋರ್ಟ್ ಹೇಳಿದ್ದೇನು ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts