More

    ಕಾಡಾನೆ ಸೆರೆ ಕಾರ್ಯಾಚರಣೆ ಆರಂಭ

    ಮಾಲಂಬಿ ದಿನೇಶ್ ಶನಿವಾರಸಂತೆ
    ಹೊಸಗುತ್ತಿ ಗ್ರಾಮದ ಜಗದೀಶ್ ಎಂಬುವವರ ಮೇಲೆ ದಾಳಿ ಮಾಡಿ ಸಾಯಿಸಿದ್ದ, ಸುತ್ತಮುತ್ತಲ ಗ್ರಾಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಾಡಾನೆ ಸೆರೆಗೆ ಅರಣ್ಯ ಇಲಾಖೆ ಮುಂದಾಗಿದೆ.

    ಶನಿವಾರಸಂತೆ ಹೋಬಳಿ ವ್ಯಾಪ್ತಿಯ ಕುರುಡವಳ್ಳಿ, ಎಳನೀರುಗುಂಡಿ, ರಾಮನಹಳ್ಳಿ, ಮಾದೇಗೋಡು, ಗೋಪಾಲಪುರ, ಹಿತ್ಲುಕೇರಿ, ಜಾಗೇನಹಳ್ಳಿ, ಮುಳ್ಳೂರು, ಆಲೂರು ಸಿದ್ದಾಪುರ, ಮಾಲಂಬಿ, ಹೊಸಗುತ್ತಿ, ಬಾಣವಾರ, ಗೋಣಿಮಾರೂರು ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿತ್ತು. ಶಾಲೆ ಮಕ್ಕಳು, ರೈತರು, ಕಾರ್ಮಿಕರು ಹೊರಗೆ ಓಡಾಡುವುದೇ ಕಷ್ಟ ಎಂಬ ಪರಿಸ್ಥಿತಿ ನಿರ್ಮಾಣವಾಗಿತ್ತು.

    ಹಾಸನ ಜಿಲ್ಲೆಯ ಯಸಳೂರು ಮೀಸಲು ಅರಣ್ಯದಿಂದ 30ಕ್ಕೂ ಹೆಚ್ಚಿನ ಕಾಡಾನೆಗಳು ಬಂದಿವೆ ಎನ್ನಲಾಗಿತ್ತು. ಕಾಫಿ, ಬಾಳೆ, ತೆಂಗು, ಶುಂಠಿ ಕೃಷಿಗಳನ್ನು ಹಾನಿಗೊಳಿಸುತ್ತಿದ್ದವು. ಶೀಘ್ರ ಕಾಡಾನೆ ಸೆರೆ ಕಾರ್ಯಾಚರಣೆ ನಡೆಸದಿದ್ದಲ್ಲಿ ಶನಿವಾರಸಂತೆ ಅರಣ್ಯ ಇಲಾಖೆ ಕಚೇರಿ ಎದುರು ಪ್ರತಿಭಟನೆ ಕೈಗೊಳ್ಳುವುದಾಗಿ ಬೆಳೆಗಾರರು ಎಚ್ಚರಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆಗೆ 6 ಸಾಕಾನೆಗಳು, ಡ್ರೋನ್ ಕ್ಯಾಮರಾ, 50 ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಪ್ರವೃತ್ತರಾಗಿದ್ದಾರೆ. ಆರ್‌ಎಫ್‌ಒ ಗಾನಶ್ರೀ ನೇತೃತ್ವ ವಹಿಸಿದ್ದಾರೆ.

    ದುಬಾರೆ ಸಾಕಾನೆ ಶಿಬಿರದ ಸುಗ್ರೀವ, ಪ್ರಶಾಂತ, ಧನಂಜಯ, ಹರ್ಷ, ಶ್ರೀರಾಮ, ಅಜ್ಜಯ್ಯ ಆನೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts