More

    ಮೇವು ಬ್ಯಾಂಕ್, ಗೋಶಾಲೆ ತೆರೆಯಲು ಒತ್ತಾಯ: ಉಪ ತಸೀಲ್ದಾರ್ ರೇಣುಕಾಗೆ ಮನವಿ

    ಹನುಮಸಾಗರ: ಪಟ್ಟಣದಲ್ಲಿ ಗೋಶಾಲೆ ಮತ್ತು ಮೇವು ಬ್ಯಾಂಕ್ ತೆರೆಯುವಂತೆ ಒತ್ತಾಯಿಸಿ ಸೋಮವಾರ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ಉಪತಸೀಲ್ದಾರ್ ರೇಣುಕಾ ಹಾದಿಮನಿಗೆ ಮನವಿ ಸಲ್ಲಿಸಿದರು.

    ಮಳೆ ಬಾರದಿದ್ದರಿಂದ ಮೇವಿನ ಕೊರತೆ ರೈತರನ್ನು ಕಾಡುತ್ತಿದೆ.

    ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹೋಬಳಿ ಘಟಕದ ಅಧ್ಯಕ್ಷ ಮುತ್ತಣ್ಣ ಹಲಕೂಲಿ ಮಾತನಾಡಿ, ಮುಂಗಾರು ಆರಂಭವಾಗಿ ಎರಡು ತಿಂಗಳು ಆದರೂ ಮಳೆಯಾಗಿಲ್ಲ. ಇದರಿಂದ ರೈತರು ಕಂಗಾಲಾಗಿದ್ದು, ಬೀಜ ಬೀತ್ತನೆ ಮಾಡಿಲ್ಲ. ಸಂಗ್ರಹಿಸಿಟ್ಟಿದ್ದ ಮೇವು ಖಾಲಿಯಾಗಿದ್ದು, ಮಳೆ ಬಾರದಿದ್ದರಿಂದ ಮೇವಿನ ಕೋರತೆ ರೈತರನ್ನು ಕಾಡುತ್ತಿದೆ. ಜಾನುವಾರುಗಳನ್ನು ಸಾಕಲು ಸಂಕಷ್ಟ ಪಡುತ್ತಿದ್ದು, ಮೇವಿಲ್ಲದೆ ಕಡಿಮೆ ಹಣಕ್ಕೆ ದನಕರುಗಳನ್ನು ಮಾರಾಟ ಮಾಡುವಂತಾಗಿದೆ. ಸರ್ಕಾರ ಕೂಡಲೇ ರೈತರ ಸಹಾಯಕ್ಕೆ ಬರಬೇಕಾಗಿದ್ದು, ಹನುಮಸಾಗರದಲ್ಲಿ ಗೋಶಾಲೆ ಹಾಗೂ ಮೇವು ಬ್ಯಾಂಕ್ ತೆರಯಬೇಕು ಎಂದು ಒತ್ತಾಯಿಸಿದರು.

    ಇದನ್ನೂ ಓದಿ: ಜಿಲ್ಲೆಯಲ್ಲಿ ಕಾಡಲಿದೆಯೇ ಮೇವಿನ ಕೊರತೆ


    ಉಪ ತಹಸೀಲ್ದಾರ್ ರೇಣುಕಾ ಹಾದಿಮನಿ ಮನವಿ ಸ್ವೀಕರಿಸಿ ಮಾತನಾಡಿ, ಮೇಲಾಧಿಕಾರಿಗಳಿಗೆ ಮನವಿ ತಲುಪಿಸುವುದಾಗಿ ತಿಳಿಸಿದರು.ರೈತರಾದ ಮುತ್ತಪ್ಪ ಹಲಕೂಲಿ, ಯಮನೂರ ಮಡಿವಾಳರ, ಶರಣಪ್ಪ ಬೋದುರ, ಚಂದಪ್ಪ ಹಕ್ಕಿ, ಶಬೀರಸಾಬ ಹುನಗುಂದ, ಶಾಮಿದಸಾಬ ಡಲಾಯತ್, ಮಹಿಬೂಬಸಾಬ ಗದ್ವಾಲ, ಬುಡ್ಡಾಲಿ ಡಲಾಯತ್, ಮಲ್ಲಪ್ಪ ಪಟ್ಟಣಶೆಟ್ಟರ, ಕೆಂಚಪ್ಪ ರ‌್ಯಾಯಾವಣಕಿ, ಅಪ್ಪಣ್ಣ ಗದ್ದಿ, ಚಂದಪ್ಪ ಗದ್ದಿ, ಅಂದಾನಪ್ಪ ಬೂದಿಹಾಳ, ಸಿದ್ದು ಮೇಟಿ, ಸೌಕತ್ತಾಲಿ, ಯಲ್ಲಪ್ಪ ಪೂಜಾರ, ವಿ.ಎ. ಸಂಗಮೇಶ, ಗುರುಶಾಂತಯ್ಯ, ಅಭಿಶೇಕ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts