More

    ಎನ್‌ಪಿಎಸ್ ನೌಕರರರನ್ನು ಒಪಿಎಸ್ ವ್ಯಾಪ್ತಿಗೆ ತರಲು ಒತ್ತಾಯ

    ಬೆಂಗಳೂರು: ಹೊಸ ಪಿಂಚಣಿ ವ್ಯವಸ್ಥೆ (ಎನ್‌ಪಿಎಸ್) ನೌಕರರನ್ನು ಹಳೆ ಪಿಂಚಣಿ ವ್ಯವಸ್ಥೆ (ಒಪಿಎಸ್) ವ್ಯಾಪ್ತಿಗೆ ಪರಿಗಣಿಸುವಂತೆ ಒತ್ತಾಯಿಸಿ ಸರ್ಕಾರ ನೌಕರರ ಸಂಘದ ನಿಯೋಗ ಆರ್ಥಿಕ ಇಲಾಖೆ ಅಪರ ಮುಖ್ಯಕಾರ್ಯದರ್ಶಿಯವರಿಗೆ ಬುಧವಾರ ಮನವಿ ಸಲ್ಲಿಸಿತು.
    2006ರ ಏಪ್ರಿಲ್1 ಕ್ಕಿಂತ ಪೂರ್ವದಲ್ಲಿ ರಾಜ್ಯ ಸರ್ಕಾರದ ಅಧಿಸೂಚನೆ ಅನ್ವಯ ನೇಮಕ ಹೊಂದಿರುವ ನೌಕರರು ಹಳೆ ಪಿಂಚಣಿ ವ್ಯಾಪ್ತಿಗೆ ತರಬೇಕೆಂಬ ನಿಯೋಗದ ಬೇಡಿಕೆಗೆ ಸ್ಪಂದಿಸಿದ ಅಪರ ಮುಖ್ಯಕಾರ್ಯದರ್ಶಿಯವರು, ಮುಖ್ಯಮಂತ್ರಿಯವರ ಅನುಮೋದನೆ ಪಡೆದು ಶೀಘ್ರದಲ್ಲೇ ಆದೇಶ ಹೊರಡಿಸುವುದಾಗಿ ಭರವಸೆ ನೀಡಿದರು.
    ಕೇಂದ್ರ ಸರ್ಕಾರದ ನಿರ್ದೇಶನದಂತ 2023ರ ಅಕ್ಟೋಬರ್ 18ರಂದು ಐಎಎಸ್ ಶ್ರೇಣಿಯ ಅಧಿಕಾರಿಗಳನ್ನು ಒಪಿಎಸ್ ಯೋಜನೆಗೆ ಒಳಪಡಿಸಿ ಆದೇಶಿಸಲಾಗಿದೆ. ಅದೇ ರೀತಿ ಹಲವು ರಾಜ್ಯಗಳು ಇದನ್ನು ಅನುಷ್ಠಾನಗೊಳಿಸುತ್ತಿವೆ. ಕೇಂದ್ರದ ಮಾದರಿಯಲ್ಲಿ ರಾಜ್ಯದ ನೌಕರರನ್ನು ಒಪಿಎಸ್ ಯೋಜನೆಗೆ ತರುವಂತೆ ಒತ್ತಾಯಿಸಲಾಯಿತು.
    ಈ ತೀರ್ಮಾನ ಕೈಗೊಂಡರೆ 11,366 ಬಾದಿತ ಎನ್‌ಪಿಎಸ್ ನೌಕರರಿಗೆ ಅನುಕೂಲವಾಗಲಿದೆ.
    ನಿಯೋಗದಲ್ಲಿ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಹಾಗೂ ಪದಾಧಿಕಾರಿಗಳು, ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ರಮೇಶ್ ಸಂಗಾ ಹಾಗೂ ಪದಾಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts