More

    ಕಾರ್ಮಿಕರ ಪಾಲಿಗೆ ಜೀವನ ಮುಡಿಪಾಗಿಟ್ಟ ಅರವಿಂದ್

    ಹಟ್ಟಿಚಿನ್ನದಗಣಿ: ಹಟ್ಟಿಚಿನ್ನದಗಣಿ ಕಂಪನಿ ನೌಕರರನ್ನು ಹಾಗೂ ಜೂನೀಯರ್ ನ್ಯಾಯವಾದಿಗಳನ್ನು ಸ್ವಂತ ಮಕ್ಕಳಂತೆಯೆ ನೋಡಿಕೊಳ್ಳುತ್ತಿದ್ದ ಧೀಮಂತ ವ್ಯಕ್ತಿ ಅರವಿಂದ್ ಮಳೆಬೆನ್ನೂರ್ ಎಂದು ಗುವಾಹಟಿ ಉಚ್ಛನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಕೆ.ಶ್ರೀಧರರಾವ್ ಬಳ್ಳಾರಿ ಬಣ್ಣಿಸಿದರು.

    ಇದನ್ನೂ ಓದಿ: ಕಟ್ಟಡ ಕಾರ್ಮಿಕರ ಸಮಸ್ಯೆ ಈಡೇರಿಸಿ

    ನಗರದ ಸ್ವರ್ಣ ಭವನ ಕಲ್ಯಾಣ ಮಂಟಪದಲ್ಲಿ ಕಂಪನಿ ಸಿಬ್ಬಂದಿ ಹಾಗೂ ಕಾರ್ಮಿಕ ಸಂಘದ ಸಹಯೋಗದಲ್ಲಿ ಕಾನೂನು ಕೇಸರಿ-ಕಾರ್ಮಿಕರ ಸಿರಿ ಗ್ರಂಥ ಲೋಕಾರ್ಪಣೆ ಹಾಗೂ ಅರವಿಂದ್ ಮಳೆಬೆನ್ನೂರ್ ವಕೀಲರ ಟ್ರಸ್ಟ್ ರಾಯಚೂರು ಉದ್ಘಾಟನೆ ಸಮಾರಂಭದಲ್ಲಿ ಭಾನುವಾರ ಮಾತನಾಡಿದರು.

    ಅರವಿಂದರ ಬದುಕೆ ಬರಹ, ಕಾರ್ಮಿಕರಿಗೆ ಹಾಗೂ ಕಾನೂನಿಗೆ ನೀಡಿದ ಕೊಡುಗೆ ಅಪಾರ. 30 ವರ್ಷ ನಿರಂತರವಾಗಿ ಹಟ್ಟಿಚಿನ್ನದಗಣಿ ಕಾರ್ಮಿಕ ಸಂಘದ ನೇತಾರರಾಗಿ ಹತ್ತು-ಹಲವು ಕಾರ್ಮಿಕಪರ ಯೋಜನೆಗಳನ್ನು ರೂಪಿಸಿದ್ದಾರೆ.

    ಇವರ ನಿಧನದ ವೇಳೆ ಕಾರ್ಮಿಕ ಸಂಘದಲ್ಲಿ ಅಂತ್ಯಕ್ರಿಯೆ ನಡೆಸಿ, ಮಂಟಪಕ್ಕೆ ಪೂಜೆ ಸಲ್ಲಿಸಲಾಗುತ್ತಿದೆ. ಇಂದಿಗೂ ಕಾರ್ಮಿಕರಲ್ಲಿ ಜೀವಂತವಾಗಿದ್ದಾರೆಂದು ಭಾವುಕರಾಗಿ ನುಡಿದರು.

    ಸಿಂಧನೂರಿನ ನಿವೃತ್ತ ನ್ಯಾಯಾಧೀಶ ವಿ.ಎ ಪಾಟೀಲ್, ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ವಿಜಯಭಾಸ್ಕರ್, ಕಾರ್ಮಿಕ ಸಂಘದ ಅಧ್ಯಕ್ಷ ಎಸ್.ಎಂ ಶಫಿ, ರಾಜ್ಯ ವಕೀಲರ ಪರಿಷತ್ ಸದಸ್ಯ ಕೋಟೇಶ್ವರರಾವ್, ಅರವಿಂದರ ಸಂಭಂಧಿ ಸತ್ಯವಂತರಾವ್ ಮಳೆಬೆನ್ನೂರ್,

    ಪ್ರಜಾವಾಣಿ ಪತ್ರಿಕೆ ಮುಖ್ಯ ಉಪಸಂಪಾದಕಿ ಎಸ್.ರಶ್ಮಿ, ಗಣಿ ಕಂಪನಿ ಹಿರಿಯ ವ್ಯವಸ್ಥಾಪಕ ಯಮನೂರಪ್ಪ ಕಾನೂನು ಕೇಸರಿ-ಕಾರ್ಮಿಕ ಸಿರಿ ಲೇಖಕಿ ಲೀಲಾ ಹಿರೇಮಠ್ ರಾಯಚೂರು, ರಾಯಚೂರಿನ ವಕೀಲರಾದ ನಾಗರಾಜ್ ಮಸ್ಕಿ, ಸಿಂಧನೂರಿನ ವಕೀಲ ಪ್ರಹ್ಲಾದ್‌ಗುಡಿ, ರಾಮಣ್ಣ ವಂದಲಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts