More

    ಸ್ಥಳೀಯರಿಗೇ ಖಾತ್ರಿ ಕೆಲಸ ನೀಡಿ

    ಹಿರೇಬಾಗೇವಾಡಿ: ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿಯಲ್ಲಿ ನಮ್ಮನ್ನು ಕಡೆಗಣಿಸಿ ಹಲಗಾ ಗ್ರಾಮದ ಕಾರ್ಮಿಕರನ್ನು ಬಳಸಿಕೊಂಡು ಅಧಿಕಾರಿಗಳು ಹಿರೇಬಾಗೇವಾಡಿ ವ್ಯಾಪ್ತಿಯಲ್ಲಿ ಕಾಮಗಾರಿ ನಿರ್ವಹಿಸುತ್ತಿದ್ದಾರೆಂದು ಆರೋಪಿಸಿ ಸ್ಥಳೀಯರು ಗ್ರಾಪಂಗೆ ಗುರುವಾರ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

    ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಹಿರೇಬಾಗೇವಾಡಿಗೆ ಸ್ಥಳಾಂತರಿಸಿರುವ ಹಿನ್ನೆಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ರಸ್ತೆ ಕಾಮಗಾರಿ ಕೈಗೊಳ್ಳಲಾಗಿದೆ. ಆದರೆ, ಸ್ಥಳೀಯರಿಗೆ ಕೆಲಸ ಕೊಡದೆ ಅನ್ಯ ಗ್ರಾಮದವರನ್ನು ಕೆಲಸಕ್ಕೆ ಬಳಸಲಾಗಿದೆ. ಹಿರೇಬಾಗೇವಾಡಿಯವರಿಗೆ ಕೂಡಲೇ ಜಾಬ್‌ಕಾರ್ಡ್ ನೀಡಿ ಎಂದು ಆಗ್ರಹಿಸಿದರು.

    ಪಿಡಿಒ ಉಷಾ ಎಸ್., ಗ್ರಾಪಂ ಅಧ್ಯಕ್ಷೆ ಸ್ವಾತಿ ಇಟಗಿ ಹಾಗೂ ಸದಸ್ಯರು ಮಾತನಾಡಿ, ತಮ್ಮ ಬೇಡಿಕೆ ಈಡೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಗ್ರಾಮದ ಉಮೇಶ ನಂದಿ, ಬಸನಗೌಡ ಹಾದಿಮನಿ, ಚಂದ್ರಪ್ಪ ಹಾದಿಮನಿ, ದೊಡ್ಡಪ್ಪ ನಾಯ್ಕರ, ರುದ್ರಪ್ಪ ವಾಲಿಕಾರ, ಬಸವರಾಜ ಅಳ್ಳಾವಾಡ, ಬಸ್ಸಪ್ಪ ಸುತಗಟ್ಟಿ, ಆನಂದ ಪಾಟೀಲ, ಚನ್ನಮ್ಮ ನಾಯ್ಕರ, ಬಸ್ಸವ್ವ ಅಳ್ಳಾವಾಡ, ಗಂಗವ್ವ ಪಾಟೀಲ, ಕಾಶವ್ವ ರೊಟ್ಟಿ, ಗಂಗವ್ವ ಹಾದಿಮನಿ, ಶಾಂತವ್ವ ರೊಟ್ಟಿ, ಶೋಭಾ ಹಾದಿಮನಿ, ಆನಂದ ಪಾರಿಶ್ವಾಡ, ಶಿವಪ್ಪ ಘೋಡಗೇರಿ, ಶಿವಲೀಲಾ ಅರಳೀಕಟ್ಟಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts