More

    ಅಂಗವಿಕಲರಿಗೆ ಪರಿಹಾರ ಕೊಡುವಂತೆ ಎಸಿ ರಾಜಶೇಖರ ಡಂಬಳರಿಗೆ ವಿಕಲಾಂಗರ ಮನವಿ

    ಲಿಂಗಸುಗೂರು: ತಾಲೂಕಿನ ಬುದ್ಧಿಮಾಂದ್ಯರು, ದಿವ್ಯಾಂಗರು, ಅಂಗವಿಕಲರಿಗೆ ಕರೊನಾ ಕೋವಿಡ್-19 ಪರಿಹಾರ ನೀಡುವಲ್ಲಿ ಸರ್ಕಾರ ನಿರ್ಲಕ್ಷ್ಯ ತೋರಿದ್ದು, ಕೂಡಲೇ ನೆರವಿಗೆ ಧಾವಿಸಬೇಕೆಂದು ಎಸಿ ರಾಜಶೇಖರ ಡಂಬಳರಿಗೆ ಅಂಗವಿಕಲರು ಮನವಿ ಮಾಡಿದರು. ಅಂಗವಿಕಲರು ಸಣ್ಣಪುಟ್ಟ ಉದ್ಯೋಗ, ಕೆಲಸ ಕಾರ್ಯ ಮಾಡಿಕೊಂಡು ಬದುಕು ಸಾಗಿಸುತ್ತಿದ್ದರು. ಆದರೆ, ಲಾಕ್‌ಡೌನ್ ಜಾರಿಯಿಂದ ಕೆಲಸವಿಲ್ಲದೆ ಜೀವನ ತೀವ್ರ ತೊಂದರೆಗೆ ಸಿಲುಕಿದೆ. ವಿಕಲಚೇತನರ ಸಬಲೀಕರಣ ಇಲಾಖೆ, ಜಿಲ್ಲಾಡಳಿತ ಮತ್ತು ಚುನಾಯಿತ ಪ್ರತಿನಿಧಿಗಳು ಗಮನ ಹರಿಸುತ್ತಿಲ್ಲ. ಸರ್ಕಾರದಿಂದ ಜನೆವರಿ ತಿಂಗಳವರೆಗೆ ಮಾತ್ರ ಮಾಸಾಶನ ಬಂದಿದೆ. ನಿತ್ಯದ ಔಷಧ ಮತ್ತು ಆಹಾರ ಸಾಮಗ್ರಿ ಖರೀದಿಗೆ ಹಣವಿಲ್ಲದೆ ಪರದಾಡುವಂತಾಗಿದೆ.

    ಸರ್ಕಾರದಿಂದ ದೊರೆಯುವ ಉಚಿತ ಹಾಲು, ಆಹಾರ ನಮಗೆ ಸಿಗುತ್ತಿಲ್ಲ. ಗ್ರಾಮೀಣ ಭಾಗದ ಅಂಗವಿಕಲರ ಪರಿಸ್ಥಿತಿ ಚಿಂತಾಜನಕವಾಗಿದ್ದು, ಪ್ರತ್ಯೇಕ ಅನುದಾನ ಬಿಡುಗಡೆ ಮಾಡಬೇಕು. ಕೂಡಲೇ ಬಾಕಿ ಇರುವ ಮಾಸಾಶನ, ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಿರುವ ಶೇ.5 ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದರು. ಅಂಗವಿಕಲರ ಸಂಘದ ತಾಲೂಕು ಅಧ್ಯಕ್ಷ ನಿಂಗನಗೌಡ, ಮುಖಂಡರಾದ ಅಮರೇಶ ಪಂಚಾಳ, ನಾಗರಾಜ ಅಸ್ಕಿಹಾಳ, ಸುರೇಶ ಭಂಡಾರಿ, ನಾಗರಾಜ ತಿಪ್ಪಣ್ಣ ಸೇರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts