More

    ಪ್ರತಿಭೆಗೆ ಪ್ರೋತ್ಸಾಹ ನೀಡಿ

    ಅಳವಂಡಿ: ಪ್ರತಿ ಮಗುವಿನಲ್ಲಿ ವಿಭಿನ್ನ ಕಲೆ ಅಡಗಿರುತ್ತದೆ. ಮಕ್ಕಳಲ್ಲಿನ ಪ್ರತಿಭೆ ಗುರುತಿಸಿ ಪ್ರೋತ್ಸಾಹ ನೀಡುವದು ಪ್ರತಿಯೊಬ್ಬರ ಕರ್ತವ್ಯ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರ‌್ಜಾಜ್ಯಾಧ್ಯಕ್ಷ ಶಂಭುಲಿಂಗನಗೌಡ ಪಾಟೀಲ ತಿಳಿಸಿದರು.

    ಇದನ್ನೂ ಓದಿ: ಮಕ್ಕಳ ಪ್ರತಿಭೆ ಹೊರಹೊಮ್ಮಿಸಲು ವೇದಿಕೆ ಕಾರ್ಯಕ್ರಮ ಸಹಕಾರಿ

    ಸಮೀಪದ ಮೈನಹಳ್ಳಿ ಗ್ರಾಮದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ನಡೆದ ಬೆಟಗೇರಿ ಕ್ಲಷ್ಟರ್ ಮಟ್ಟದ 2023-24 ನೇ ಸಾಲಿನ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಸ್ಪರ್ಧಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಕ್ರವಾರ ಮಾತನಾಡಿದರು.

    ಮಕ್ಕಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಯಲ್ಲಿ ಪಾಲ್ಗೊಳ್ಳಬೇಕು. ಇದರಿಂದ ಬೌದ್ದಿಕ ವಿಕಸನ ಹೊಂದಲಿದೆ ಹಾಗೂ ನಿರಂತರ ಓದಿನ ಜತೆಗೆ ಪ್ರತಿಭಾ ಕಾರಂಜಿ, ಕ್ರೀಡೆ, ಸಂಗೀತ ಮುಂತಾದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು ಎಂದರು.

    ಹಾಡು, ನೃತ್ಯ, ಛದ್ಮವೇಷ, ಭಾಷಣ, ಆಶು ಭಾಷಣ, ಧಾರ್ಮಿಕ ಪಠಣ, ಜಾನಪದ ನೃತ್ಯ, ರಂಗೋಲಿ, ಕಥೆ ಹೇಳುವುದು, ಮಣ್ಣಿನ ಮಾದರಿ ತಯಾರಿಕೆ, ಚರ್ಚಾ ಸ್ಪರ್ದೆ ಹಾಗೂ ಜಾನಪದ ನೃತ್ಯಗಳು ಪ್ರೇಕ್ಷಕರ ಮನಸೆಳೆದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts