More

    ವಿದ್ಯುತ್ ಯೋಜನೆಗಳ ಅಧ್ಯಯನಕ್ಕಾ, ಅಮೇರಿಕಾ ಭೇಟಿ ನೀಡಿರುವ ಕೆಇಆರ್‌ಸಿ ತಂಡ

    ಬೆಂಗಳೂರು:
    ಹೊರ ದೇಶದಲ್ಲಿ ವಿದ್ಯುತ್ ಯೋಜನೆಗಳು ಮತ್ತು ನಿರ್ವಹಣೆ ಹೇಗೆ ನಡೆಯುತ್ತಿದೆ ಎನ್ನುವುದನ್ನು ಅಧ್ಯಯನ ಮಾಡಲು ಕರ್ನಾಟಕ ವಿದ್ಯುತ್‌ಚ್ಛಕ್ತಿ ನಿಯಂತ್ರಣ ಮಂಡಳಿ (ಕೆಇಆರ್‌ಸಿ) ಅಧ್ಯಕ್ಷ ರವಿಕುಮಾರ್ ಅವರ ನೇತೃತ್ವದ ತಂಡ ಅಮೇರಿಕಾ ಪ್ರವಾಸ ಕೈಗೊಂಡಿದೆ.
    ಕೆಇಆರ್‌ಸಿ ಸದಸ್ಯರಾದ ಮಂಜುನಾಥ್ ಮತ್ತು ರವಿ ಹಾಗೂ ತಾಂತ್ರಿಕ ಸಮಿತಿ ಸದಸ್ಯರು ತಂಡದಲ್ಲಿದ್ದಾರೆ. ಅಮೇರಿಕಾದ ಆಹ್ವಾನದ ಮೇರೆಗೆ ಈ ತಂಡ ತೆರಳಿದ್ದು, ಸೆ.16ತನಕ ಹಲವು ಯೋಜನೆಗಳ ಅಧ್ಯಯನ ಮಾಡಲಿದೆ.
    ಜಗತ್ತಿನಲ್ಲಿ ಪ್ರಪ್ರಥಮವಾಗಿ 1895ರಲ್ಲಿ ನಯಾಗರ ಾಲ್ಸ್ ಜಲ ವಿದ್ಯುತ್ ಉತ್ಪಾದನೆ ಮಾಡಿದ ಹೆಗ್ಗಳಿಕೆ ಅಮೇರಿಕಾದ್ದು. ಅಲ್ಲಿಗೂ ಭೇಟಿ ನೀಡಿರುವ ಕೆಇಆರ್‌ಸಿ ತಂಡ, ಅಲ್ಲಿ ಯಾವ ತಾಂತ್ರಿಕತೆಯನ್ನು ಅಳವಡಿಸಿಕೊಂಡಿದೆ ಎನ್ನುವುದನ್ನು ಖುದ್ದು ಪರಿಶೀಲಿಸಿತು. ನಯಾಗರ ಾಲ್ಸ್‌ನ ಎರಡೂ ಬದಿಯಲ್ಲಿ ತಲಾ 2500 ಮೆವಾ ನಂತೆ 5 ಸಾವಿರ ಮೆವಾ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ.
    ಏಷ್ಯಾ ಖಂಡದಲ್ಲಿಯೇ ಪ್ರಪ್ರಥಮ ಬಾರಿಗೆ 1902ರಲ್ಲಿ ಶಿಂಷಾದಲ್ಲಿ ಜಲವಿದ್ಯುತ್ ಉತ್ಪಾದನೆ ಮಾಡಿರುವ ಯೋಜನೆಯ ಬಗ್ಗೆ ಅಮೇರಿಕಾ ಜೊತೆಗೆ ಅಧಿಕಾರಿಗಳ ತಂಡ ಚರ್ಚೆ ನಡೆಸಿತು. ವಿದ್ಯುತ್ ಯೋಜನೆಗಳ ಅಧ್ಯಯನ ಬಳಿಕ ರಾಜ್ಯದಲ್ಲಿ ವಿದ್ಯುತ್ ಗುಣಾತ್ಮಕತೆ ಹೆಚ್ಚಿಸಲು ಏನು ಮಾಡಬಹುದು? ಎಷ್ಟು ಅನುಷ್ಠಾನಕ್ಕೆ ತರಲು ಸಾಧ್ಯವಿದೆ? ಎನ್ನುವ ಬಗ್ಗೆ ಕೆಇಆರ್‌ಸಿ ಸರ್ಕಾರಕ್ಕೆ ಸಲಹೆ ನೀಡಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts