More

    ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಪ್ರತಿಭಾ ಕಾರಂಜಿ ಸಹಕಾರಿ

    ಕನಕಗಿರಿ: ಪ್ರತಿಭಾ ಕಾರಂಜಿ ಕಾರ್ಯಕ್ರಮವು ವಿದ್ಯಾರ್ಥಿಗಳ ವ್ಯಕ್ತಿತ್ವದ ವಿಕಸನಕ್ಕೆ ಸಹಾಯವಾಗುತ್ತದೆ ಎಂದು ಗೌರಿಪುರ ಗ್ರಾಪಂ ಅಭಿವೃದ್ಧಿ ಅಧಿಕಾರಿ ನಾಗಲಿಂಗಪ್ಪ ಹೇಳಿದರು.

    ಇದನ್ನೂ ಓದಿ: ಪ್ರತಿಭಾವಂತ ಕ್ರೀಡಾಪಟುಗಳನ್ನು ಬೆಳೆಸಿ

    ತಾಲೂಕಿನ ಅಡವಿಬಾವಿ ಚಿಕ್ಕತಾಂಡಾದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಹುಲಿಹೈದರ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಕಾರ್ಯಕ್ರಮವು ಶಿಕ್ಷಣಕ್ಕೆ ಪ್ರೇರೇಣೆ ನೀಡುವುದಲ್ಲದೇ, ಮನರಂಜನೆ ಹಾಗೂ ಅಭಿವೃದ್ಧಿಗೆ ಉತ್ತೇಜಿಸುತ್ತದೆ. ವಿದ್ಯಾರ್ಥಿಗಳ ಕಲಿಕೆಗೆ ಹಾಗೂ ಹೊಸದಾದ ಜೀವನ ಕೌಶಲ್ಯವನ್ನು ಹೊಂದಲು ವೇದಿಕೆಯಾಗಿದೆ.

    ವಿದ್ಯಾರ್ಥಿಗಳಲ್ಲಿನ ಪ್ರತಿಭೆಯನ್ನು ಗುರುತಿಸಿ ಹೊರತರಲು ಶಿಕ್ಷಕರಿಗೆ ಅವಕಾಶವನ್ನು ನೀಡುತ್ತದೆ. ವ್ಯಕ್ತಿತ್ವ ಹಾಗೂ ಸ್ಪರ್ಧಾತ್ಮಕ ಮನೋಭಾವವನ್ನು ರೂಪಿಸಲು ಸಹಕಾರಿ ಎಂದರು.

    ರಾಜ್ಯ ಸರ್ಕಾರಿ ನೌಕರರ ಸಂಘದ ನಿರ್ದೇಶಕ ಸಿದ್ದಲಿಂಗಪ್ಪ ಗದ್ದಿ ಮಾತನಾಡಿ, ಭಾರತೀಯ ಕಲೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಇಲಾಖೆಯೂ ಹಮ್ಮಿಕೊಂಡಿರುವ ಕಾರ್ಯಕ್ರಮ ಇದಾಗಿದೆ. ಇಲ್ಲಿ ಗ್ರಾಮೀಣ ಸೊಬಗಿನ ವೇಷ ಭೂಷಣ, ಸಾಂಸ್ಕೃತಿಕ ಚಟುವಟಿಕೆಗಳ ಅನಾವರಣಗೊಳ್ಳಲಿವೆ ಎಂದರು.

    ಗ್ರಾಪಂ ಅಧ್ಯಕ್ಷ ವೆಂಕಟೇಶ ತೊಗರಿ, ಸದಸ್ಯರಾದ ಬಸವರಾಜ ವರ್ನಖೇಡ, ಗೌರಮ್ಮ, ಬಸರಿಹಾಳ ಗ್ರಾಪಂ ಉಪಾಧ್ಯಕ್ಷೆ ಶರಣಮ್ಮ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸೋಮಪ್ಪ, ಶಿಕ್ಷಕರ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಂಶಾದ್ ಬೇಗಂ, ತಾಲೂಕು ಕೋಶಾಧ್ಯಕ್ಷೆ ಮಂಜುಳಾ ಶ್ಯಾವಿ, ನಿರ್ದೇಶಕರಾದ ಮಂಜುನಾಥ ಹಾಸಗಲ್, ನೌಕರರ ಸಂಘದ ಡಿಜೆ ಸಂಗಮ್ಮನವರ್, ಸಿಆರ್‌ಪಿ ಶಿವಪ್ಪ ಹೆಳವರ್, ಮುಖ್ಯಗುರು ಹನ್ಮಂತಪ್ಪ, ಗ್ರಾಮಸ್ಥರಾದ ಕೃಷ್ಣ ನಾಯ್ಕ, ಭೀಮಣ್ಣ, ಲೋಕಪ್ಪ, ದುರ್ಗಪ್ಪ, ಅಮರಪ್ಪ, ಶಿವಮ್ಮ ಇದ್ದರು.

    ರಂಗಮಂದಿರಕ್ಕೆ ಶಿಕ್ಷಕನ ಹೆಸರಿಟ್ಟ ಗ್ರಾಮಸ್ಥರು
    ಮಕ್ಕಳಿಗೆ ಶಿಕ್ಷಣ ನೀಡುವುದರ ಜತೆಗೆ ಶಾಲೆಯು ಹಸಿರಿನಿಂದ ಕಂಗೊಳಿಸಲು ಕಾರಣವಾದ ಪರಿಸರ ಪ್ರೇಮಿಯಾದ ಶಾಲೆಯ ಮುಖ್ಯಶಿಕ್ಷಕ ಡಿ.ವಿ.ಹನುಮಂತಪ್ಪ ಅವರ ಹೆಸರನ್ನು ಶಾಲೆಯೊಳಗೆ ನಿರ್ಮಿಸಿರುವ ರಂಗಮಂದಿರಕ್ಕೆ ನಾಮಕರಣ
    ಮಾಡುವುದರ ಮೂಲಕ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts