More

    ಪ್ರತಿಭಾವಂತ ಕ್ರೀಡಾಪಟುಗಳನ್ನು ಬೆಳೆಸಿ

    ದೇವದುರ್ಗ: ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಕ್ರೀಡಾಪಟುಗಳು ಹೊಂದಿರಬೇಕು. ಸೋಲು ಗೆಲುವಿನ ಮೆಟ್ಟಿಲು ಆಗಲಿದೆ ಎಂದು ಗಬ್ಬೂರು ಸಂಸ್ಥಾನಮಠದ ಬೂದಿಬಸವ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

    ಪ್ರತಿ ಸ್ಪರ್ಧಿಯನ್ನು ಗೌರವಿಸಿ

    ತಾಲೂಕಿನ ಗಬ್ಬೂರು ಗ್ರಾಮದ ನವಯುಗ ಗ್ರಾಮೀಣ ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಸಾನ್ನಿಧ್ಯವಹಿಸಿ ಶುಕ್ರವಾರ ಮಾತನಾಡಿದರು. ಕ್ರೀಡಾಮನೋಭಾವ ಬೆಳಸಿಕೊಂಡು ಪ್ರತಿ ಸ್ಪರ್ಧಿಯನ್ನು ಗೌರವಿಸಿ ಆಟವಾಡಬೇಕು. ಕ್ರೀಡೆಯಲ್ಲಿ ಜಗಳಕ್ಕೆ ಅವಕಾಶ ನೀಡದೆ ಕ್ರೀಡಾಸ್ಪೂರ್ತಿ ಎತ್ತಿಹಿಡಿಯಬೇಕು ಎಂದರು.

    ಇದನ್ನೂ ಓದಿ: ಜೀರ್ಣಕ್ರಿಯೆ ಸುಧಾರಿಸಲು, ತೂಕ ಕಳೆದುಕೊಳ್ಳಲು ಬಯಸಿದರೆ ಆಹಾರದಲ್ಲಿ ಬೆಂಡೆಕಾಯಿ ಸೇರಿಸಿ…

    ವಿದ್ಯಾರ್ಥಿಗಳು ಕೇವಲ ಓದಿನ ಕಡೆ ಗಮನಹರಿಸದೆ ಪಠ್ಯೇತರ ಚಟುವಟಿಕೆಗಳು ತೊಡಗಿಸಿಕೊಳ್ಳಬೇಕು. ಕ್ರೀಡೆಯಿಂದ ಉತ್ತಮ ಆರೋಗ್ಯ ಹಾಗೂ ಸಧೃಡ ದೇಹ ಹೊಂದಲು ಸಾಧ್ಯ. ಗ್ರಾಮೀಣ ಭಾಗದಲ್ಲಿ ಅನೇಕ ಪ್ರತಿಭಾವಂತ ಕ್ರೀಡಾಪಟುಗಳು ಬೆಳೆಸುವ ಕಾರ್ಯವಾಗಲಿ ಎಂದು ಸಲಹೆ ನೀಡಿದರು.
    ಎಪಿಎಂಸಿ ಮಾಜಿ ಅಧ್ಯಕ್ಷ ರಾಮನಗೌಡ ರಾಮದುರ್ಗ, ನವಯುಗ ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿ ನರಸಿಂಹಲು, ಕಾರ್ಯದರ್ಶಿ ಹೇಮಾವತಿ ಸತೀಶ, ಶಿಕ್ಷಕರಾದ ವಿಜಯಲಕ್ಷ್ಮೀ , ಶೇಖ್ ಅತ್ತಾರ್, ರಿಜ್ವಾನಾ ಪರ್ವಿನ್, ಎಎಸ್‌ಐ ಶಾಲಂಸಾಬ್, ಈರಣ್ಣ ಪೂಜಾರಿ, ರಮೇಶ ಉಪ್ರಾಳ, ಪ್ರಾಚಾರ್ಯ ಹನುಮಂತ್ರಾಯ ನಾಯಕ, ಜಗದೀಶ, ಚನ್ನಬಸವ ಚಿಕ್ಕಮಠ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts