More

    ಕರ್ಫ್ಯೂ ಆದೇಶಕ್ಕೆ ತಲೆಬಾಗಿದ ಜನತೆ

    ಯಾದಗಿರಿ: ಕರೊನಾ ವೈರಸ್ ನಿಯಂತ್ರಣದ ಹಿನ್ನೆಲೆ ಸಕರ್ಾರ ಭಾನುವಾರ ಹೊರಡಿಸಿದ್ದ 36 ತಾಸಿನ ಕಫ್ಯರ್ೂ ಆದೇಶಕ್ಕೆ ಇಡೀ ಗಿರಿ ಜಿಲ್ಲೆಯ ಜನತೆ ಸ್ಥಬ್ಧಗೊಂಡಿದೆ.

    ಬೆಳಗ್ಗೆಯಿಂದ ಯಾವುದೇ ಅಂಗಡಿ ಮುಂಗಟ್ಟು ತೆರೆಯದ ಕಾರಣ ಜಿಲ್ಲೆಯ ಪ್ರಮುಖ ರಸ್ತೆಗಳು ಭಣಗುಡುತ್ತಿದ್ದವು. ಬೆಳಗ್ಗೆ 7ರಿಂದ 8ರ ವರೆಗೆ ತರಕಾರಿ ಮಾರಾಟ ಕಂಡು ಬಂದಿತು. 10ರ ನಂತರ ಇಡೀ ನಗರ ಸಂಪೂರ್ಣ ಸ್ಥಬ್ಧವಾಗುವ ಮೂಲಕ ಜನತೆ ಕಫ್ಯರ್ೂ ಆದೇಶಕ್ಕೆ ಸಾಥ್ ನೀಡಿದರು. ಭಾನುವಾರವಾದ್ದರಿಂದ ಜನತೆ ಮನೆಯಿಂದ ಹೊರಗಡೆ ಬರಲಿಲ್ಲ.

    ನಗರದ ಗಾಂಧಿ ವೃತ್ತ, ಹತ್ತಿಕುಣಿ ವೃತ್ತ, ಸುಭಾಷ್ ಸರ್ಕಲ್, ಗಂಜ್ ಏರಿಯಾ ಜನರಿಲ್ಲದೆ ಬಿಕೋ ಎನ್ನುತ್ತಿದ್ದವು. ಜನನಿಬಿಡ ಪ್ರದೇಶವಾದ ಗಾಂಧಿ ವೃತ್ತದಲ್ಲಿ ಜನತೆ ಕಂಡು ಬರಲಿಲ್ಲ. ಅಲ್ಲದೆ ಆಟೋರಿಕ್ಷಾ, ಸಾರಿಗೆ ಬಸ್, ಖಾಸಗಿ ವಾಹನಗಳು ರಸ್ತೆಗೆ ಬರಲಿಲ್ಲ.

    ಅಲ್ಲದೆ ನಗರದಲ್ಲಿ ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳು ಸಟಿರೌಂಡ್ ಹೊಡೆಯುವ ಮೂಲಕ ಅನಗತ್ಯವಾಗಿ ಬಡಾವಣೆಯಲ್ಲಿ ಬೈಕ್ಗಳ ಮೇಲೆ ಅಡ್ಡಾಡುತ್ತಿರುವವರಿಗೆ ಬಿಸಿ ಮುಟ್ಟಿಸಿದರು. ಯಾರೂ ಮನೆಯಿಂದ ಹೊರಗಡೆ ಬರದಂತೆ ಆಗಾಗ ಸೂಚನೆ ಕೊಡುತ್ತಿದ್ದರು. ಸೋಮವಾರ ರಂಜಾನ್ ಹಬ್ಬ ಇರುವುದರಿಂದ ಸಹಜವಾಗಿ ಭಾನುವಾರ ನಗರ ಜನರಿಂದ ಫುಲ್ ರೆಶ್ ಇರಬೇಕಿತ್ತು. ಆದರೆ ಕಫ್ಯರ್ೂನಿಂದಾಗಿ ಪ್ರಮುಖ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು.

    ನಿತ್ಯ ಬೆಳಗ್ಗೆ 7ರಿಂದ ಸಂಜೆ 7ರವರೆಗೆ ವೈನ್ಶಾಪ್, ಎಂಎಸ್ಐಎಲ್ ಮಳಿಗೆ ವ್ಯಾಪಾರ ನಡೆಸಲು ಅನುಮತಿ ನೀಡಲಾಗಿತ್ತು. ಆದರೆ ಭಾನುವಾರ ಸಂಪೂರ್ಣ ಬಂದ್ ಹಿನ್ನೆಲೆಯಲ್ಲಿ ಮದ್ಯ ಮಾರಾಟಕ್ಕೂ ಬ್ರೇಕ್ ಹಾಕಿದ್ದರಿಂದ ಮದ್ಯದಂಗಡಿಗಳೂ ಬಂದ್ ಆಗಿದ್ದವು. ಭಾನುವಾರ ಬಂದ್ ವಿಷಯ ಅರಿತುಕೊಂಡ ಪಾನಪ್ರೀಯರು ಶನಿವಾರವೇ ತಮಗೆ ಇಷ್ಟವಾದ ಮದ್ಯವನ್ನು ಖರೀದಿಸುತ್ತಿದ್ದರು. ಹೀಗಾಗಿ ಶನಿವಾರ ಮದ್ಯದಂಗಡಿಗಳ ಮುಂದೆ ಜನ ಜಂಗುಳಿ ಕಂಡು ಬಂದಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts