More

    ರೈತರಿಗೆ ಅನೇಕ ಯೋಜನೆಗಳು ಜಾರಿ: ಶಾಸಕ ಡಾ.ಶಿವರಾಜ ಪಾಟೀಲ್ ಹೇಳಿಕೆ

    ರಾಯಚೂರು: ರೈತರು ಸುಖವಾಗಿದ್ದರೆ ನಾಡು ಸಮೃದ್ಧವಾಗಿರಲಿದೆ. ಈ ಮೂಲಕ ಜನರು ಚೆನ್ನಾಗಿರಲು ಸಾಧ್ಯ. ಹೀಗಾಗಿ ನಾನು ಶಾಸಕನಾಗಿ 189 ಕೋಟಿ ರೂ. ವೆಚ್ಚದಲ್ಲಿ 14 ಗ್ರಾಮಗಳ ಕೆರೆ ತುಂಬಿಸುವ ಯೋಜನೆ ಜಾರಿಗೊಳಿಸಿ ರೈತರಿಗೆ ಅನುಕೂಲ ಕಲ್ಪಿಸಿದ್ದೇನೆ ಎಂದು ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಡಾ.ಶಿವರಾಜ ಪಾಟೀಲ್ ಹೇಳಿದರು.

    ಮೆಣಸಿನಕಾಯಿ ಮಾರಾಟಕ್ಕೆ ಅನುಕೂಲ ಕಲ್ಪಿಸಲಾಗಿದೆ

    ನಗರದ ರಾಜೇಂದ್ರ ಗಂಜ್‌ನಲ್ಲಿ ಶನಿವಾರ ಮತಯಾಚನೆ ನಡೆಸಿ ಮಾತನಾಡಿದರು. ಮೆಣಸಿನಕಾಯಿ ಬೆಳೆಯುವ ರೈತರಿಗೆ ಸ್ಥಳೀಯವಾಗಿ ಮಾರುಕಟ್ಟೆ ಇಲ್ಲದಿರುವುದನ್ನು ಅರಿತು ಹತ್ತಿ ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ಮಾರುಕಟ್ಟೆ ಆರಂಭಿಸಿ ರೈತರು ಬೆಳೆದ ಮೆಣಸಿನಕಾಯಿ ಮಾರಾಟಕ್ಕೆ ಅನುಕೂಲ ಕಲ್ಪಿಸಲಾಗಿದೆ ಎಂದರು.

    ಸೂರಿಲ್ಲದ ಹಮಾಲರಿಗೆ ಸೂರು

    ಸೂರಿಲ್ಲದ ಹಮಾಲರಿಗೆ ಸೂರು ಒದಗಿಸುವ ಹಾಗೂ ಹಕ್ಕುಪತ್ರ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ. ನಗರದ ಮುಖ್ಯರಸ್ತೆ ಹಾಗೂ ಒಳ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗಿದ್ದು, ಯುಜಿಡಿ ಕಾಮಗಾರಿ ಪೂರ್ಣಗೊಂಡಿಲ್ಲ. ಜನರು ಮತ್ತೊಮ್ಮೆ ಆಶೀರ್ವದಿಸಿದರೆ ಯುಜಿಡಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.

    ರೈತರು, ಹಮಾಲರು, ವ್ಯಾಪಾರಸ್ಥರಿಗೆ ಸಹಾಯ

    ಮಾಜಿ ಶಾಸಕ ಎ.ಪಾಪಾರೆಡ್ಡಿ ಮಾತನಾಡಿ, ಕರೊನಾ ಸಂದರ್ಭದಲ್ಲಿ ಜಿಲ್ಲೆಯೇ ಸ್ತಬ್ದವಾಗಿದ್ದಾಗ ಡಾ.ಶಿವರಾಜ ಪಾಟೀಲ್ ಸಿಎಂ ಜತೆ ಮಾತನಾಡಿ ಮಾರುಕಟ್ಟೆಯನ್ನು ಆರಂಭಿಸಿ ರೈತರು, ಹಮಾಲರು, ವ್ಯಾಪಾರಸ್ಥರಿಗೆ ಸಹಾಯ ಮಾಡಿದ್ದರು. ನನ್ನ ಕನಸಾದ ಬೋಳಮಾನದೊಡ್ಡಿ ಏತ ನೀರಾವರಿ ಯೋಜನೆಯನ್ನು ಸಾಕಾರಗೊಳಿಸುವ ಮೂಲಕ ಕೆರೆಗಳನ್ನು ತುಂಬಿಸುವ ಮೂಲಕ ರೈತರ ಬದುಕಿಗೆ ಅನುಕೂಲ ಕಲ್ಪಿಸಿದ್ದಾರೆ ಎಂದರು.

    ಇದನ್ನೂ ಓದಿ: ಶಾಸಕ ಡಾ.ಶಿವರಾಜ ಪಾಟೀಲ್-ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕರಿಂದ ಅನುದಾನ ದುರ್ಬಳಕೆ; ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರೂಪಾಕ್ಷಿ ಆರೋಪ

    ಮಡ್ಡಿಪೇಟೆ ಬಡಾವಣೆಗೆ ಪ್ರಚಾರಕ್ಕೆ ತೆರಳಿದಾಗ ಕಾರ್ಯಕರ್ತರು ಪಟಾಕಿ ಸಿಡಿಸಿ, ಹೂವಿನ ಸುರಿಮಳೆಗೈಯುವ ಮೂಲಕ ಡಾ.ಶಿವರಾಜ ಪಾಟೀಲರನ್ನು ಸ್ವಾಗತಿಸಿದರು. ನಂತರ ಸಿಯಾತಲಾಬ್ ಬಡಾವಣೆಯಲ್ಲಿ ಮನೆ ಮನೆಗೆ ತೆರಳಿ ಮತಯಾಚನೆ ನಡೆಸಿ, ಸೂರಿಲ್ಲದವರಿಗೆ ಸೂರು ಒದಗಿಸುವ ಕೆಲಸ ಮಾಡಲಾಗುವುದು ಎಂದು ಶಾಸಕ ಭರವಸೆ ನೀಡಿದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts