More

    ಭಕ್ತರಿಗೆ ಯಾವುದೆ ತೊಂದರೆಯಾಗದಿರಲಿ

    ಅಥಣಿ ಗ್ರಾಮೀಣ: ಕೊಕಟನೂರ ರೇಣುಕಾ ಯಲ್ಲಮ್ಮದೇವಿ ಜಾತ್ರೆಯಲ್ಲಿ ಯಾವುದೆ ತೊಂದರೆಯಾಗದಂತೆ ತಾಲೂಕಾಧಿಕಾರಿಗಳು ನಿಗಾ ವಹಿಸಬೇಕು ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

    ಅಥಣಿ ತಾಲೂಕಿನ ಕೊಕಟನೂರಿಗೆ ಭಾನುವಾರ ಭೇಟಿ ನೀಡಿ ದೇವಿಯ ದರ್ಶನಾಶೀರ್ವಾದ ಪಡೆದು ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು. ಕಂದಾಯ ಇಲಾಖೆ, ತಾಲೂಕು ಪಂಚಾಯಿತಿ ಹಾಗೂ ಗ್ರಾಪಂ ಸ್ವಚ್ಛತೆಗೆ ಗಮನಹರಿಸಬೇಕು. ಜಾತ್ರೆಗೆ ಆಗಮಿಸಿದ ಭಕ್ತರಿಗೆ ಶುದ್ಧ ಕುಡಿಯುವ ನೀರು ಒದಗಿಸಬೇಕು. ಆರೋಗ್ಯ ಇಲಾಖೆ ಹೆಚ್ಚುವರಿ ವೈದ್ಯರನ್ನು ನಿಯೋಜನೆ ಮಾಡಿಕೊಳ್ಳಬೇಕು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅನಿಷ್ಠ ಪದ್ದತಿ ಜರುಗದಂತೆ ನಿಗಾವಹಿಸಬೇಕು. ಅಹಿತಕರ ಘಟನೆ ಜರುಗದಂತೆ ಪೊಲೀಸ್ ಇಲಾಖೆ ಎಚ್ಚರ ವಹಿಸಬೇಕು ಎಂದು ಸೂಚಿಸಿದರು.

    ಜಿಪಂ ಮಾಜಿ ಸದಸ್ಯ ಪ್ರಲ್ಹಾದ ಪೂಜಾರಿ ಮಾತನಾಡಿ, ಹೆಚ್ಚಿನ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದರು. ಕೆಪಿಸಿಸಿ ಸದಸ್ಯ ಶಾಮರಾವ ಪೂಜಾರಿ, ತಾಪಂ ಇಒ ಶಿವಾನಂದ ಕಲ್ಲಾಪುರ, ಜಿಪಂ ಎಇಇ ಈರಣ್ಣ ವಾಲಿ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಶಾನವ್ವ ಪೂಜಾರಿ, ಉಪಾಧ್ಯಕ್ಷ ಅರ್ಜುನ ಪೂಜಾರಿ, ಮುಖಂಡರಾದ ಸುರೇಶ ಪಾಟಣಕರ, ಸುಭಾಷ ಸೋನಕರ, ವಿಶಾಲ ದೇಸಾಯಿ, ಶೀತಲಗೌಡ ಪಾಟೀಲ, ಮಹಾವೀರ ಹಳಕಿ, ಬಾಳಾಸಾಹೇಬ ಪೂಜಾರಿ, ಅನಿಲ ಮುಳಿಕ, ಶ್ರೀಶೈಲ ನಾಯಿಕ, ವಕೀಲ ಸುಭಾಷ ಪಾಟಣಕರ, ಪಿಡಿಒ ಸಿದ್ಧಪ್ಪ ತುಂಗಳ, ಬಸವರಾಜ ಬಳೋಜ, ಕಲ್ಮೇಶ ಕಲಮಡಿ, ಘೂಳಪ್ಪ ಪೂಜಾರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts