More

    ಫುಟ್‌ಬಾಲ್ ಟೂರ್ನಿ : ಸೆಮಿ ಫೈನಲ್ ಪ್ರವೇಶಿಸಿದ ಸೇಪಿಯಂಟ್

    ಮೈಸೂರು: ಸಾಂಘಿಕ ಪ್ರದರ್ಶನ ತೋರಿದ ಸೇಪಿಯೆಂಟ್ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ತಂಡವು 2021-22ನೇ ಸಾಲಿನ ಮೈಸೂರು ವಿಶ್ವವಿದ್ಯಾಲಯ ಚಾಮುಂಡಿ ವಲಯ ಅಂತರ ಕಾಲೇಜು ಫುಟ್‌ಬಾಲ್ ಟೂರ್ನಿಯಲ್ಲಿ ಸೆಮಿ ಫೈನಲ್ ಪ್ರವೇಶಿಸಿದೆ.


    ಮೈಸೂರು ವಿಶ್ವವಿದ್ಯಾಲಯ ದೈಹಿಕ ಶಿಕ್ಷಣ ವಿಭಾಗದ ಸ್ಪೋರ್ಟ್ಸ್ ಪೆವಿಲಿಯನ್‌ನ ಫುಟ್‌ಬಾಲ್ ಮೈದಾನದಲ್ಲಿ ಮಂಗಳವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಯುವರಾಜ ಕಾಲೇಜು ವಿರುದ್ಧ 4-1 ಗೋಲುಗಳಿಂದ ಜಯ ಸಾಧಿಸಿತು. ಪಂದ್ಯದಲ್ಲಿ ಸೇಪಿಯೆಂಟ್ ಪರ ಶರಣ್, ಗೋಕುಲ್, ನಿತೀನ್, ಸಚ್ಚಿದಾನಂದ ತಲಾ ಒಂದು ಗೋಲು ದಾಖಲಿಸಿ ತಂಡದ ಗೆಲುವಿಗೆ ನೆರವಾದರು. ಇನ್ನು ಯುವರಾಜ ಕಾಲೇಜು ಪರ ಕಾರ್ಲಿನಿ ಒಂದು ಗೋಲು ಬಾರಿಸಿದರು.


    ಬುಧವಾರ ಬೆಳಗ್ಗೆ ವಿದ್ಯಾ ವಿಕಾಸ್ ಇನ್ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೆಜ್‌ಮೆಂಟ್ ಮತ್ತು ಎಸ್‌ಬಿಆರ್‌ಆರ್ ಮಹಾಜನ ನಡುವೆ, ಸೇಂಟ್ ಫಿಲೋಮಿನಾ ಕಾಲೇಜು ಮತ್ತು ಕ್ರೈಸ್ಟ್ ಕಾಲೇಜು ನಡುವೆ ಹಾಗೂ ಪಿಜಿಎಸ್‌ಇ ಮಾನಸ ಗಂಗೋತ್ರಿ ಮೈಸೂರು ಮತ್ತು ಮೈಕಾ ಕಾಲೇಜು ತಂಡಗಳ ನಡುವೆ ಕ್ವಾರ್ಟರ್ ಫೈನಲ್ ಪಂದ್ಯ ನಡೆಯಲಿದೆ.


    ಮಂಗಳವಾರ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ಎಸ್‌ಬಿಆರ್‌ಆರ್ ಮಹಾಜನ ಕಾಲೇಜು ತಂಡ 3-1 ಗೋಲುಗಳಿಂದ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜು ವಿರುದ್ಧ ಜಯ ಸಾಧಿಸಿತು. ಯುವರಾಜ ಕಾಲೇಜು ತಂಡ 2-0 ಗೋಲುಗಳಿಂದ ಸಿದ್ಧಾರ್ಥ ನಗರದ ಪ್ರಥಮ ದರ್ಜೆ ಕಾಲೇಜನ್ನು ಮಣಿಸಿತು. ಕ್ರೈಸ್ಟ್ ಕಾಲೇಜು ತಂಡ 2-1 ಗೋಲುಗಳಿಂದ ಆರ್‌ಐಇ ಮೈಸೂರು ತಂಡವನ್ನು ಸೋಲಿಸಿತು. ಮೈಕಾ ಕಾಲೇಜು ತಂಡ 2-0 ಗೋಲುಗಳಿಂದ ಸೇಂಟ್ ಜೋಸೆಫ್ ಕಾಲೇಜು ವಿರುದ್ಧ ಭರ್ಜರಿ ಜಯ ಸಾಧಿಸಿತು.


    ಉಳಿದ ಪಂದ್ಯಗಳಲ್ಲಿ ಸೇಂಟ್ ಫಿಲೋಮಿನಾ ಕಾಲೇಜು 2-1 ಗೋಲುಗಳಿಂದ ಮಹಾರಾಜ ಕಾಲೇಜು ವಿರುದ್ಧ, ವಿದ್ಯಾ ವಿಕಾಸ್ ಇನ್ಸಿಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೆಜ್‌ಮೆಂಟ್ ತಂಡ 3-1 ಗೋಲುಗಳಿಂದ ಆಯಿಷ್ ತಂಡ ವಿರುದ್ಧ ಹಾಗೂ ಪಿಜಿಎಸ್‌ಇ ಮಾನಸ ಗಂಗೋತ್ರಿ ಮೈಸೂರು ತಂಡ 5-0 ಗೋಲುಗಳಿಂದ ಕುವೆಂಪುನಗರ ಪ್ರಥಮ ದರ್ಜೆ ಕಾಲೇಜು ವಿರುದ್ಧ ಜಯ ಸಾಧಿಸಿತು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts