More

    ಪಾಕ ಕೌಶಲ್ಯವೇ ಮಹಿಳೆಯ ಶ್ರೇಷ್ಠ ಕಲೆ: ರಜನಿ ಪಾಟೀಲ

    ವಿಜಯವಾಣಿ ಸುದ್ದಿಜಾಲ ಗದಗ
    ಆಧುನೀಕ ಜೀವನದಲ್ಲಿ ಜಂಜಾಟ, ಮನೆ , ಕೆಲಸ ಇತ್ಯಾದಿ ಒತ್ತಡಗಳ ಮಧ್ಯೆ ಅಡುಗೆ ಮಾಡುವುದೇ ತೊಂದರೆದಾಯಕ ಕೆಲಸವಾಗಿದೆ. ಆದರೆ, ಅಡುಗೆ ಮಾಡುವ ಕೌಶಲ್ಯವನ್ನು ಮಹಿಳೆಯರು ಮತ್ತು ಪುರುಷರು ಕರಗತ ಮಾಡಿಕೊಂಡರೆ ಒತ್ತಡ ಸಂದರ್ಭದಲ್ಲೂ ಸಾತ್ವಿಕ ಆಹಾರ ಸೇವೆಯನ್ನು ಸವಿದು ಉತ್ತಮ ಜೀವನ ಶೈಲಿ ರೂಢಿಸಿಕೊಳ್ಳಬಹುದು ಎಂದು ಇನ್ನರವಿಲ್​ ಕ್ಲಬ್​ ಅಧ್ಯೆ ರಜನಿ ಪಾಟೀಲ ಹೇಳಿದರು.
    ನಗರದ ವಿಜಯ ಲಲಿತಕಲಾ ಪದವಿ ಪೂರ್ವ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಗುರುವಾರ ಜರುಗಿದ ಅಗ್ನಿ ಇಲ್ಲದ ಅಡುಗೆ ಕೌಶಲ್ಯ ಕಲೆ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.
    ಇಂದಿನ ದಿನಮಾನದಲ್ಲಿ ಯುವತಿಯರು ಮನೆಯಜೀವನ ಶೈಲಿ ಮತ್ತು ಅಡುಗೆ ಬಗ್ಗೆ ಗಮನ ನೀಬೇಕಾದ ಅಗತ್ಯವಿದೆ. ಪ್ರತಿ ವ್ಯಕ್ತಿಯ ಜೀವನಕ್ಕೆ ಉದರ ತುಂಬಿಕೊಳ್ಳುವ ಕಾರ್ಯ ಮಹತ್ವದ್ದಾಗಿದೆ. ಅದು ರುಚಿಯಾದ ಹಾಗೂ ಸಾತ್ವಿಕ ಆಹಾರ ಸಿದ್ದಪಡಿಸುವ ಕಲೆಯನ್ನು ಕಾಲೇಜು ದಿನಗಳಿಂದಲೂ ರೂಢಿಸಿಕೊಳ್ಳಬೇಕು ಎಂದರು.
    ಹೇಮಲತಾ ಪುಂಗಳಿ, ಸಾಗರಿಕಾ ಅಕ್ಕಿ, ಎಸ್​. ವಿ ಗುಂಜಾಳ , ಸಂತೋಷ ಅಕ್ಕಿ, ಸಿ. ವಿ ಬಡಿಗೇರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts