More

    ಕೋವಿಡ್ ಮುಂಜಾಗ್ರತಾ ಪರಿಶೀಲನೆಗೆ ಸ್ವತಃ ಫೀಲ್ಡಿಗೆ ಇಳಿದ ಜಿಲ್ಲಾಧಿಕಾರಿ

    ಮಂಗಳೂರು: ಕೋವಿಡ್ ಲಸಿಕೆ ಬಂತೆಂದು ಉದಾಸೀನ ಮಾಡಿ, ಯಾವುದೇ ಅಂತರವಿಲ್ಲದೆ, ಮಾಸ್ಕ್ ಕೂಡಾ ಧರಿಸದೆ ಓಡಾಡುವವರಿಗೆ ಬಿಸಿ ಮುಟ್ಟಿಸಲು ಜಿಲ್ಲಾಡಳಿತ ಮುಂದಾಗಿದೆ.

    ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು ಪೊಲೀಸ್ ಹಾಗೂ ಮನಪಾ ಅಧಿಕಾರಿಗಳೊಂದಿಗೆ ಸ್ವತಃ ಫೀಲ್ಡಿಗೆ ಇಳಿದಿದ್ದಾರೆ. ವಿವಿಧ ಅಂಗಡಿ, ಮಾಲ್, ಬಸ್‌ಗಳಿಗೆ ಭೇಟಿ ನೀಡಿ ಜನರು ಯಾವ ರೀತಿ ಕೋವಿಡ್ ನಿಯಮಗಳನ್ನು ಪಾಲಿಸುತ್ತಿದ್ದಾರೆ ಎಂಬುದನ್ನು ಪರಿಶೀಲಿಸಿದರು. ಮಾಸ್ಕ್ ಹಾಕದೆ ತಿರುಗಾಡುತ್ತಿರುವವರಿಗೆ ಕ್ಲಾಸ್ ತೆಗೆದುಕೊಂಡರಲ್ಲದೆ ಅರೆಬರೆ ಮುಚ್ಚಿಕೊಂಡು ಓಡಾಡುತ್ತಿರುವವರಿಗೆ ಸರಿಯಾಗಿ ಮಾಸ್ಕ್ ಧರಿಸುವಂತೆ ಸೂಚನೆಯಿತ್ತರು.

    ಡಿಸಿಪಿ(ಕಾನೂನು ಸುವ್ಯವಸ್ಥೆ) ಹರಿರಾಂ ಶಂಕರ್, ಮನಪಾ ಪ್ರಭಾರ ಆಯುಕ್ತ ದಿನೇಶ್ ಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯರಿ ಮುಂತಾದವರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts