More

    ಇಂದು ಭಾರತ-ನೆದರ್ಲೆಂಡ್ ಅಭ್ಯಾಸ ಪಂದ್ಯ: ಆರ್.ಅಶ್ವಿನ್ ಜತೆಗೆ ಕೆಳ ಕ್ರಮಾಂಕದ ಸತ್ವಪರೀಕ್ಷೆ

    ತಿರುವನಂತಪುರ: ಐಸಿಸಿ ವಿಶ್ವಕಪ್ ಏಕದಿನ ಟೂರ್ನಿ ಪೂರ್ವಸಿದ್ದತೆಯ ಕೊನೇ ಹಂತವಾಗಿ ಆತಿಥೇಯ ಭಾರತ ತಂಡ ಮಂಗಳವಾರ ನೆದರ್ಲೆಂಡ್ ವಿರುದ್ಧ 2ನೇ ಹಾಗೂ ಅಂತಿಮ ಅಭ್ಯಾಸ ಪಂದ್ಯ ಆಡಲಿದೆ. ಈ ಪಂದ್ಯಕ್ಕೂ ಮಳೆ ಭೀತಿ ಎದುರಾಗಿದೆ. ಇಂಗ್ಲೆಂಡ್ ವಿರುದ್ಧದ ಮೊದಲ ಅಭ್ಯಾಸ ಪಂದ್ಯ ಒಂದೂ ಎಸೆತ ಕಾಣದೆ ರದ್ದುಗೊಂಡಿತ್ತು.
    ಗುವಾಹಟಿಯಿಂದ ಭಾನುವಾರ ತಿರುವನಂತಪುರಕ್ಕೆ ಟೀಮ್ ಇಂಡಿಯಾ ಆಟಗಾರರು ಆಗಮಿಸಿದ್ದು, ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ವೈಯಕ್ತಿಕ ಕಾರಣದಿಂದ ತುರ್ತಾಗಿ ಮುಂಬೈಗೆ ತೆರಳಿದ್ದಾರೆ ಎನ್ನಲಾಗಿದೆ. ಪಂದ್ಯಕ್ಕೂ ಮುನ್ನ ತಂಡ ಸೇರುವ ನಿರೀಕ್ಷೆ ಇದೆ. ನೆದರ್ಲೆಂಡ್ ವಿರುದ್ಧ ಪಂದ್ಯದಲ್ಲಿ ಆರ್.ಅಶ್ವಿನ್ ಜತೆಗೆ ಕೆಳ ಕ್ರಮಾಂಕದ ಸತ್ವಪರೀಕ್ಷೆ ನಡೆಯಲಿದೆ. ನೆಟ್ಸ್‌ನಲ್ಲಿ ಅಶ್ವಿನ್, ಜಡೇಜಾ, ಕುಲದೀಪ್ ಯಾದವ್ ಹಾಗೂ ಶಾರ್ದೂಲ್ ಠಾಕೂರ್ ಬ್ಯಾಟಿಂಗ್‌ನಲ್ಲಿ ಹೆಚ್ಚಿನ ಗಮನಹರಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ದ ಅಭ್ಯಾಸ ಪಂದ್ಯದಲ್ಲಿ ಬೌಲಿಂಗ್‌ನಲ್ಲಿ ಮಿಂಚಿದ್ದ ಡಚ್ಚರು, ಬ್ಯಾಟಿಂಗ್‌ನಲ್ಲಿ ವೈಲ್ಯ ಅನುಭವಿಸಿದ್ದರು. ಸೆಪ್ಟೆಂಬರ್‌ನಲ್ಲಿಯೇ ಭಾರತಕ್ಕೆ ಆಗಮಿಸಿದ್ದ ನೆದರ್ಲೆಂಡ್ ತಂಡ ಬೆಂಗಳೂರಿನಲ್ಲಿ ಕಠಿಣ ಅಭ್ಯಾಸ ನಡೆಸಿತ್ತು.

    https://x.com/StarSportsIndia/status/1708700841295884436?s=20

    ಇಂದಿನ ಅಭ್ಯಾಸ ಪಂದ್ಯ
    ಭಾರತ-ನೆದರ್ಲೆಂಡ್
    ಅ್ಘಾನಿಸ್ತಾನ-ಶ್ರಿಲಂಕಾ
    ಪಾಕಿಸ್ತಾನ-ಆಸ್ಟ್ರೇಲಿಯಾ
    ಆರಂಭ: ಮಧ್ಯಾಹ್ನ 2.00
    ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts