More

    ವಿಶೇಷ ಆರ್ಥಿಕ ಪ್ಯಾಕೇಜ್​ನ 2ನೇ ದಿನದ ಘೋಷಣೆಗಳ ಬಗ್ಗೆ ಪಿಎಂ ಮೋದಿ ಹೀಗೆ ಹೇಳ್ತಿದ್ದಾರೆ…

    ನವದೆಹಲಿ: ಕೊವಿಡ್​-19 ಸಂಕಷ್ಟ ನಿರ್ವಹಣೆಗಾಗಿ 20 ಲಕ್ಷ ಕೋಟಿ ರೂಪಾಯಿಯ ವಿಶೇಷ ಆರ್ಥಿಕ ಪ್ಯಾಕೇಜ್​ನ್ನು ಪ್ರಧಾನಿ ನರೇಂದ್ರ ಮೋದಿಯವರು ಮೇ 12ರಂದು ಘೋಷಣೆ ಮಾಡಿದ್ದಾರೆ.
    ಪ್ಯಾಕೇಜ್​​ನಲ್ಲಿ ಯಾವ ವರ್ಗಕ್ಕೆ ಎಷ್ಟು ಮೀಸಲಿಡಲಾಗಿದೆ? ಯಾವ ಕ್ಷೇತ್ರಕ್ಕೆ ಎಷ್ಟೆಷ್ಟು ಸಂದಾಯ ಮಾಡಲಾಗುತ್ತದೆ ಎಂಬ ಬಗ್ಗೆ ಕಳೆದೆರಡು ದಿನಗಳಿಂದಲೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ವಿಸ್ತಾರವಾಗಿ ವಿವರಿಸುತ್ತಿದ್ದಾರೆ.

    ಮೇ 13ರಂದು ಸುದ್ದಿಗೋಷ್ಠಿ ನಡೆಸಿದ್ದ ನಿರ್ಮಲಾ ಸೀತಾರಾಮನ್​, ವಿಶೇಷ ಆರ್ಥಿಕ ಪ್ಯಾಕೇಜ್​ನ ಮೊದಲ ಭಾಗವನ್ನು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ವರ್ಗದ ಉದ್ಯಮಗಳು, ರಿಯಲ್​ ಎಸ್ಟೇಟ್​ಗಳಿಗೆ ಮೀಸಲಿಟ್ಟಿದ್ದರು. ನೇರ ತೆರಿಗೆದಾರರ ಟಿಡಿಎಸ್​ ಕಡಿತದಂತಹ ಮಹತ್ವದ ನಿರ್ಧಾರ ಪ್ರಕಟಿಸಿದ್ದರು. ಇಪಿಎಫ್​ ಅವಧಿಯನ್ನು ಇನ್ನೂ ಮೂರು ತಿಂಗಳಿಗೆ ವಿಸ್ತರಿಸುವುದಾಗಿ ಘೋಷಿಸಿದ್ದರು.

    ಇದನ್ನೂ ಓದಿ: ರೈತರಿಗೆ, ಕಾರ್ಮಿಕರಿಗೆ ಬಂಪರ್​ ಗಿಫ್ಟ್: ಹಣಕಾಸು ನೆರವು ಘೋಷಿಸಿದ ನಿರ್ಮಲಾ ಸೀತಾರಾಮನ್

    ಇಂದು ವಿಶೇಷ ಪ್ಯಾಕೇಜ್​ನ ಎರಡನೇ ಭಾಗದಲ್ಲಿ ರೈತರು, ಕೃಷಿಕರು, ಬಡ ಕಾರ್ಮಿಕರಿಗೆ ಸಹಾಯವಾಗುವಂತಹ ಘೋಷಣೆಗಳನ್ನು ಮಾಡಿದ್ದಾರೆ. ಬೀದಿ ಬದಿ ವ್ಯಾಪಾರಿಗಳು, ವಲಸೆ ಕಾರ್ಮಿಕರು, ದಿನಗೂಲಿ ನೌಕರರು, ಸಣ್ಣ ಉದ್ಯಮದಾರರು, ಸ್ವಯಂ ಉದ್ಯೋಗಿಗಳು ಮತ್ತು ಸಣ್ಣ ಹಿಡುವಳಿ ರೈತರಿಗೆ ಅಗತ್ಯ ಯೋಜನೆಗಳನ್ನು ಪ್ರಕಟಿಸಿದ್ದಾರೆ.

    ನಿರ್ಮಲಾ ಸೀತಾರಾಮನ್​ ಅವರ ಸುದ್ದಿಗೋಷ್ಠಿ ಮುಗಿದು ಕೆಲವೇ ಕ್ಷಣದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಟ್ವೀಟ್​ ಮಾಡಿದ್ದಾರೆ.

    ಇದನ್ನೂ ಓದಿ: ರೈತರು, ಕಾರ್ಮಿಕರಿಗೆ ಕೇಂದ್ರದಿಂದ ಎರಡನೇ ದಿನದ ಕೊಡುಗೆ: ಯಡಿಯೂರಪ್ಪ ಏನಂತಾರೆ?

    ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಅವರು ಇಂದು ಪ್ರಕಟಿಸಿದ ವಿಶೇಷ ಯೋಜನೆಗಳಿಂದ ಖಂಡಿತ ರೈತರು, ವಲಸೆ ಕಾರ್ಮಿಕರಿಗೆ ಅನುಕೂಲ ಆಗುತ್ತದೆ.

    ಇವತ್ತಿನ ಘೋಷಣೆ ಹಲವು ಪ್ರಗತಿಪರ ಕ್ರಮಗಳನ್ನು ಒಳಗೊಂಡಿದೆ ಮತ್ತು ದೇಶದ ಆಹಾರ ಭದ್ರತೆಯನ್ನು ಉತ್ತೇಜಿಸುತ್ತದೆ ಮತ್ತು ರೈತರು, ಬೀದಿಬದಿ ವ್ಯಾಪಾರಿಗಳಿಗೆ ನೀಡುವ ವಿಶೇಷ ಸಾಲಸೌಲಭ್ಯದಿಂದ ತುಂಬ ಅನುಕೂಲ ಆಗುತ್ತದೆ ಎಂದು ಹೊಗಳಿದ್ದಾರೆ.

    ಪ್ರಧಾನಿ ಮೋದಿಯವರು ಯಾವತ್ತೂ ಬಡಜನರು, ವಲಸೆ ಕಾರ್ಮಿಕರು, ರೈತರು ಸುರಕ್ಷತೆ ಬಗ್ಗೆ ಕಾಳಜಿ ವಹಿಸುತ್ತಾರೆ. ರೈತರು ಮತ್ತು ಕೆಲಸಗಾರರೇ ದೇಶದ ಬೆನ್ನೆಲುಬು ಎಂದು ಹೇಳುತ್ತಾರೆ. ಹಾಗಾಗಿ ಅವರಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಇಂದು ನಿರ್ಮಲಾ ಸೀತಾರಾಮನ್​ ತಿಳಿಸಿದ್ದಾರೆ. (ಏಜೆನ್ಸೀಸ್​)

    ಇದನ್ನೂ ಓದಿ: ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯ ಹೆದ್ದಾರಿ ಬಂದ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts