More

    ಬಾಗೇಪಲ್ಲಿ, ಗುಡಿಬಂಡೆಯಲ್ಲಿ ಫ್ಲೋರೋಸಿಸ್ ; 3,515 ಮಾದರಿಗಳಲ್ಲಿ ಹೆಚ್ಚು ಪತ್ತೆ

    ಚಿಕ್ಕಬಳ್ಳಾಪುರ : ಜಿಲ್ಲೆಯ ಬಾಗೇಪಲ್ಲಿ, ಗುಡಿಬಂಡೆ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಫ್ಲೋರೋಸೀಸ್ ಸಮಸ್ಯೆ ಕಂಡುಬಂದಿದೆ. ಹಲ್ಲು, ಮೂಳೆ ಹಾಗೂ ದೇಹದ ಇತರ ಭಾಗಗಳಿಗೆ ಫ್ಲೋರೋಸೀಸ್ ಕಾಡುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಇಂದಿರಾ ಆರ್.ಕಬಾಡೆ ತಿಳಿಸಿದರು.

    ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಗುರುವಾರ ಪ್ಲೋರೋಸೀಸ್ ಅಂತರ್ ಇಲಾಖೆ ಸಮನ್ವಯ ಸಭೆಯಲ್ಲಿ ಮಾತನಾಡಿ, ಫೊ್ಲೕರೋಸೀಸ್ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ಈವರೆಗೆ 2,401 ನೀರಿನ ಮಾದರಿಗಳನ್ನು ಪರೀಕ್ಷಿಸಿದ್ದು ಈ ಪೈಕಿ 970(ಶೇ. 40.3)ರಷ್ಟು ಮಾದರಿಗಳಲ್ಲಿ 1 ಪಿಪಿಎಂ ಗಳಿಗಿಂತ ಕಡಿಮೆಯಿದೆ.

    1431(ಶೇ.59.7) ಮಾದರಿಗಳಲ್ಲಿ 1 ಪಿಪಿಎಂ ಗಳಿಗಿಂತ ಹೆಚ್ಚಾಗಿದೆ. ಇಲ್ಲಿಯವರೆಗೆ 3,515 ಮಕ್ಕಳ ಪರೀಕ್ಷಾ ಮಾದರಿಗಳಲ್ಲಿ ಹೆಚ್ಚು ಫ್ಲೋರೈಡ್ ಅಂಶ ಇರುವುದು ಕಂಡುಬಂದಿದೆ ಎಂದು ಮಾಹಿತಿ ನೀಡಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಪಂ ಸಿಇಒ ಪಿ.ಶಿವಶಂಕರ್ ಮಾತನಾಡಿ, ಜಿಲ್ಲೆಯನ್ನು ಫ್ಲೋರೋಸೀಸ್ ಸಮಸ್ಯೆ ಮುಕ್ತ ಪ್ರದೇಶವನ್ನಾಗಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕಿದೆ, ಹಾಲು, ಬೆಲ್ಲ, ಹಸಿರು ಸೊಪ್ಪು, ನುಗ್ಗೆಕಾಯಿ, ಕಾಳು, ಸೀಬೆ, ನೆಲ್ಲಿಕಾಯಿ, ನಿಂಬೆ, ಟೊಮ್ಯಾಟೊ, ಕ್ಯಾರೆಟ್, ಕಿತ್ತಳೆ ಹಾಗೂ ಮೂಸಂಬಿ, ಬೆಳ್ಳುಳ್ಳಿ, ಶುಂಠಿ, ಈರುಳ್ಳಿ, ಕ್ಯಾರೇಟ್, ಪರಂಗಿ ಹಣ್ಣು, ಗೆಣಸು, ಮೀನು, ಮೊಟ್ಟೆ, ಶುದ್ಧ ಮಾಂಸ ಹಾಗೂ ತಾಜಾ ಆಹಾರ ಪದಾರ್ಥಗಳನ್ನು ಸೇವನೆ ಹಾಗು ಶುದ್ಧ ಕುಡಿಯುವ ನೀರು ಸೇವನೆ ಕುರಿತು ಜಾಗೃತಿ ಮೂಡಿಸುವಂತೆ ಸೂಚಿಸಿದರು.

    ಭಾರತೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ವಿಜ್ಞಾನಿಗಳಾದ ಶ್ರೀನಿವಾಸನ್, ಪಂಡಿತ್, ಸಿಜಿಡಬ್ಲ್ಯೂಬಿಯ ವಿಜ್ಞಾನಿ ಬಿಜಿಮಲ್ ಜೋಶ್, ಐಎನ್​ಆರ್​ಇಎಂ ಸ್ವಯಂ ಸೇವಾ ಸಂಸ್ಥೆ ಪ್ರತಿನಿಧಿ ಕಿರಣ್, ಫ್ಲೋರೋಸೀಸ್ ಜಿಲ್ಲಾ ಸಮಾಲೋಚಕ ವಿನೋದ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts