More

    ಕೂಸಿನ ಮನೆಯಲ್ಲಿ ಮಕ್ಕಳ ಆರೈಕೆಗೆ ಒತ್ತು

    ​ಹೂವಿನಹಡಗಲಿ: ಕೂಸಿನ ಮನೆಗಳಲ್ಲಿ ನಲಿ-ಕಲಿ ರೀತಿಯ ಚಟುವಟಿಕೆಗಳ ಮೂಲಕ ನಿರಂತರವಾಗಿ ಮಕ್ಕಳನ್ನು ಆರೈಕೆ ಮಾಡಲಾಗುತ್ತದೆ ಎಂದು ನರೇಗಾ ಸಹಾಯಕ ನಿರ್ದೇಶಕ ವೀರಣ್ಣನಾಯ್ಕ ಹೇಳಿದರು.

    ಕೂಸಿನ ಮನೆಗಳಲ್ಲಿ ನಲಿ-ಕಲಿ ರೀತಿಯ ಚಟುವಟಿಕೆಗಳು

    ತಾಲೂಕಿನ ಕೊಂಬಳಿ ಮತ್ತು ನವಲಿ ಗ್ರಾಮಗಳಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಹಾಗೂ ನರೇಗಾ ಯೋಜನೆಯಡಿ ನಿರ್ಮಿಸಿರುವ ಕೂಸಿನ ಮನೆ ಶುಕ್ರವಾರ ಉದ್ಘಾಟಿಸಿ ಮಾತನಾಡಿದರು. ತಾಲೂಕಿನ 26 ಗ್ರಾಮ ಪಂಚಾಯಿತಿಗಳಲ್ಲಿ ಕೂಸಿನ ಮನೆಗಾಗಿ ಸುಸಜ್ಜಿತ ಕಟ್ಟಡಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಕೊಂಬಳಿ ಮತ್ತು ನವಲಿ ಗ್ರಾಮಗಳಲ್ಲಿ ಮನೆಯನ್ನು ಆರಂಭಿಸಲಾಗಿದೆ. ಉಳಿದ ಪಂಚಾಯಿತಿಗಳಲ್ಲಿ ಅತಿ ಶೀಘ್ರದಲ್ಲಿ ಕೂಸಿನ ಮನೆ ಪ್ರಾರಂಭಿಸಲಾಗುವುದು ಎಂದರು.

    ಇದನ್ನೂ ಓದಿ: ಸಂಕ್ರಾಂತಿ ಆಚರಿಸಲು ಪತ್ನಿ ಮಗಳೊಂದಿಗೆ ಬೆಂಗಳೂರಿಗೆ ಬಂದ ನಟ ರಾಮ್​ ಚರಣ್​!

    ಕೂಸಿನ ಮನೆಗಳ ನಿರ್ವಹಣೆಗೆ 6 ಜನ ಆರೈಕೆದಾರರನ್ನು ನರೇಗಾ ಯೋಜನೆಯಲ್ಲಿ ನೇಮಕ ಮಾಡಿ ಅವರಿಗೆ ಸೂಕ್ತ ತರಬೇತಿ ನೀಡಲಾಗಿದೆ. ಅಗತ್ಯವಿರುವ ಎಲ್ಲ ಮೂಲ ಸೌಲಭ್ಯಗಳನ್ನೂ ಕಲ್ಪಿಸಿದ್ದು, ಮಾರ್ಗಸೂಚಿಯಂತೆ ಆರೈಕೆದಾರರು ಸಮರ್ಪಕವಾಗಿ ಕರ್ತವ್ಯ ನಿರ್ವಹಿಸಬೇಕು. ಕೂಸಿನ ಮನೆ ಕೇವಲ ನರೇಗಾ ಕಾರ್ಮಿಕರಿಗೆ ಮಾತ್ರ ಸೀಮಿತವಾಗಿಲ್ಲ. ಸಮಾಜದ ಪ್ರತಿಯೊಬ್ಬರೂ ತಾರತಮ್ಯವಿಲ್ಲದೆ ಮಕ್ಕಳನ್ನು ಸೇರ್ಪಡೆ ಮಾಡಬಹುದು ಎಂದು ಹೇಳಿದರು.

    ನವಲಿ ಗ್ರಾಪಂ ಪಿಡಿಒ ಮಹಮ್ಮದ್‌ಗೌಸ್ ಬಿ., ಅಧ್ಯಕ್ಷೆ ಸುಷ್ಮಿತಾ ಪಿ., ಕಾರ್ಯದರ್ಶಿ ಬಸವರಾಜ, ಕೊಂಬಳಿ ಗ್ರಾಪಂ ಪಿಡಿಒ ಪ್ರಕಾಶ್ ಪೂಜಾರ್, ಕಾರ್ಯದರ್ಶಿ ಮಲ್ಲಯ್ಯ, ಬಿಜೆಪಿ ಎಸ್‌ಟಿ ಮೋರ್ಚಾ ತಾಲೂಕು ಉಪಾಧ್ಯಕ್ಷ ಮಂಜುನಾಥ ಹಾಗೂ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts