More

    ಗದ್ದೆಯಲ್ಲಿ ಹಾನಿಯಾದ ಮನೆಗೂ ಪರಿಹಾರ ನೀಡಿ

    ರೇವತಗಾಂವ: ನೆರೆಪೀಡಿತ ಪ್ರದೇಶಗಳಿಗೆ ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್.ಆರ್. ಪಾಟೀಲ ಮಂಗಳವಾರ ಭೇಟಿ ನೀಡಿ ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಿದರು.
    ಚಡಚಣ ತಾಲೂಕಿನ ಉಮರಜ, ನಿವರಗಿ, ಹೊಳೆಸಂಖ, ಉಮರಾಣಿ ಸೇರಿ ಹಲವಾರು ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದರು.

    ಬಾಂದಾರ ರಸ್ತೆ ಕಡಿತದ ಕುರಿತು ಚರ್ಚೆ

    ಭಾರಿ ಮಳೆಯಿಂದಾಗಿ ರಸ್ತೆ ಸಂಪರ್ಕ ಕಡಿತಗೊಂಡ ಉಮರಜದ ಬ್ರಿಜ್ ಕಮ್ ಬಾಂದಾರ ಕುರಿತು ರೈತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಎಸ್.ಆರ್.ಪಾಟೀಲ, ಸಣ್ಣ ನೀರಾವರಿ ಇಲಾಖೆ ಎಇಇ ಜತೆ ಮಾತನಾಡಿ ಬಾಂದಾರ ದುರಸ್ತಿ ಮಾಡಿಸುವುದಾಗಿ ಭರವಸೆ ನೀಡಿದರು.
    ರೈತರ ಜಮೀನುಗಳಿಗೆ ನೀರು ನುಗ್ಗಿ ಬೆಳೆ ಹಾನಿಯಾಗಿರುವ ಕುರಿತು ಪರಿಶೀಲನೆ ನಡೆಸಿದರು. ಕುಸಿತಗೊಂಡ ಮನೆಗಳಿಗೆ ತಕ್ಷಣವೇ 10 ಸಾವಿರ ರೂ. ಬಿಡುಗಡೆ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ಶಿರಾಡೋಣ-ಉಮರಜ ರಸ್ತೆ ಹದೆಗೆಟ್ಟಿದ್ದು, ಈ ಕುರಿತು ಪಿಡಬ್ಲೂೃಡಿ ಸಹಾಯಕ ಅಭಿಯಂತರರೊಂದಿಗೆ ಮಾತನಾಡಿ ರಸ್ತೆ ಡಾಂಬರೀಕರಣ ಮಾಡಿಸಲಾಗುವುದು ಎಂದು ಹೇಳಿದರು.

    ರೇವಣಸಿದ್ಧೇಶ್ವರ ದೇವಸ್ಥಾನಕ್ಕೆ ಭೇಟಿ

    ಪ್ರವಾಹಕ್ಕೆ ತುತ್ತಾದ ಉಮರಜ ಗ್ರಾಮದ ರೇವಣಸಿದ್ಧೇಶ್ವರ ದೇವಸ್ಥಾನಕ್ಕೆ ಎಸ್.ಆರ್.ಪಾಟೀಲ ಭೇಟಿ ನೀಡಿ, ದೇವಾಯ ಬಿರುಕು ಬಿಟ್ಟಿರುವುದನ್ನು ವೀಕ್ಷಣೆ ಮಾಡಿದರು. ಘೂಳೇಶ್ವರ ಮಹಾರಾಜರಿಂದ ಜರುಗುವ ನುಡಿಮುತ್ತುಗಳನ್ನು ಹೇಳುವ ರುದ್ರಕಟ್ಟೆಯನ್ನು ವೀಕ್ಷಿಸಿದರು. ಹೊಲಗದ್ದೆಗಳಲ್ಲಿ ಹಾನಿಗೊಳಗಾದ ಮನೆಗಳಿಗೂ ಪರಿಹಾರ ನೀಡಬೇಕು ಎಂದು ತಹಸೀಲ್ದಾರ್ ಸುರೇಶ ಚವಲರ ಅವರಿಗೆ ಸೂಚಿಸಿದರು.
    ಮಾಜಿ ಶಾಸಕ ವಿಠ್ಠಲ ಕಟಕಧೋಂಡ, ಇಂಡಿ ಉಪವಿಭಾಗ ಅಧಿಕಾರಿ ರಾಹುಲ್ ಶಿಂಧೆ, ಗ್ರಾಮ ಲೆಕ್ಕಾಧಿಕಾರಿ ದಟ್ಟಿ, ಕಂದಾಯ ನಿರೀಕ್ಷಕ ಪಿ.ಜಿ. ಕೊಡಹೊನ್ನ, ಪಿಡಿಒ ಎಸ್.ಆರ್. ಕೊಟ್ಟಲಗಿ, ಚಡಚಣ ಪಿಎಸ್‌ಐ ಸತ್ತಿಗೌಡರ, ತಾಪಂ ಸದಸ್ಯ ಶಿವಾಜಿ ವಾಲಿಕಾರ, ಉಮರಜ ಸಮುದಾಯ ಆರೋಗ್ಯ ಕೇಂದ್ರದ ಡಾ. ಶೈಲಜಾ ಶಿವಶರಣ, ಸಾಹೇಬಗೌಡ ಬಿರಾದಾರ, ಸಿದ್ದು ಗುಡ್ಡಾಪುರ, ರಾಮ ವಾಲಿಕಾರ ಸೇರಿದಂತೆ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts