More

    ತವರೂರಿಗೆ ಬರುವ ಆತುರದಲ್ಲಿದ್ದವರು ಕ್ವಾರಂಟೈನ್​​ಗೆ…!

    ಕೊಚ್ಚಿ/ ನವದೆಹಲಿ: ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಿಂದ ಕಳೆದ ರಾತ್ರಿ ವಿಶೇಷ ವಿಮಾನದಲ್ಲಿ ಸ್ವದೇಶಕ್ಕೆ ಮರಳಿದ 181 ಜನರ ಪೈಕಿ ಐವರಲ್ಲಿ ಕೋವಿಡ್- 19 ಸೋಂಕು ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಅವರೆಲ್ಲರನ್ನೂ ಪ್ರತ್ಯೇಕವಾಗಿರಿಸಲಾಗಿದೆ.
    ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುರುವಾರ ಥರ್ಮಲ್ ಸ್ಕ್ರೀನಿಂಗ್ ಮಾಡಿದಾಗ ಇವರಲ್ಲಿ ಜ್ವರ ಇರುವುದು ಪತ್ತೆಯಾಯಿತು. ಈ ಹಿನ್ನೆಲೆಯಲ್ಲಿ ಅವರನ್ನು ಅಲುವಾ ಜಿಲ್ಲೆ ಆಸ್ಪತ್ರೆಯಲ್ಲಿ ಐಸೋಲೇಷನ್ ವಾರ್ಡ್​​ಗೆ ಕಳುಹಿಸಲಾಗಿದೆ. 

    ಇದನ್ನೂ ಓದಿ: ಕರೊನಾ ಅಟ್ಟಹಾಸದ ಮಧ್ಯದಲ್ಲೇ ಪ್ರವಾಹದ ರುದ್ರನರ್ತನ

    ಅಬುಧಾಬಿಯಿಂದ 181 ಜನರನ್ನು ಹೊತ್ತ ಮೊದಲ ವಿಶೇಷ ಏರ್ ಇಂಡಿಯಾ ಎಕ್ಸ್​​ಪ್ರೆಸ್ ವಿಮಾನ ಗುರುವಾರ ಕೊಚ್ಚಿಗೆ ಬಂದಿಳಿಯಿತು. ಪ್ರಯಾಣಿಕರಲ್ಲಿ ಒಬ್ಬನಿಗೆ ಕಾಯಿಲೆ ಕಂಡುಬಂದಿದ್ದು ಅವರನ್ನು ಅಲ್ಪಾವಧಿ ಕ್ವಾರಂಟೈನ್​​ಗೆ ಕಳುಹಿಸಲು ಎರ್ನಾಕುಲಂ ಜಿಲ್ಲಾಡಳಿತ ಅಂಬ್ಯುಲೆನ್ಸ್ ವ್ಯವಸ್ಥೆ ಮಾಡಿತು.
    ಸ್ವದೇಶಕ್ಕೆ ಮರಳಿದವರಲ್ಲಿ 49 ಗರ್ಭಿಣಿಯರು, ಮತ್ತು ನಾಲ್ಕು ಮಕ್ಕಳಿದ್ದರೆನ್ನಲಾಗಿದೆ. ಎಲ್ಲರನ್ನೂ ಕಡ್ಡಾಯವಾಗಿ 14 ದಿನಗಳ ಹೋಮ್ ಕ್ವಾರಂಟೈನ್​​ನಲ್ಲಿಡಲಾಗಿದೆ. ಏತನ್ಮಧ್ಯೆ, ಇತರ ಪ್ರಯಾಣಿಕರನ್ನು ಆಯಾ ಜಿಲ್ಲೆಗಳ ಕ್ವಾರಂಟೈನ್ ಕೇಂದ್ರಗಳಿಗೆ ಕರೆದೊಯ್ಯಲಾಗಿದೆ.

    ಇದನ್ನೂ ಓದಿ: ಪರ್ಲ್​ ಹಾರ್ಬರ್​, ವರ್ಲ್ಡ್​ ಟ್ರೇಡ್​ ಸೆಂಟರ್​ ಅಟ್ಯಾಕ್​​ಗಳನ್ನು ಮೀರಿಸುತ್ತಿದೆ ಕೊವಿಡ್​-19ರ ದಾಳಿ ಎಂದ್ರು ಟ್ರಂಪ್​

    177 ಪ್ರಯಾಣಿಕರು ಹಾಗೂ ನಾಲ್ಕು ಮಕ್ಕಳಿದ್ದ ಏರ್ ಇಂಡಿಯಾ ಎಕ್ಸ್​​​ಪ್ರೆಸ್ ವಿಮಾನ ಅಬುಧಾಬಿಯಿಂದ ಹೊರಟು ಗುರುವಾರ ಬೆಳಗ್ಗೆ 10 ಗಂಟೆಯ ನಂತರ ಕೊಚ್ಚಿಗೆ ಬಂದಿಳಿದಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮಾರ್ಗಸೂಚಿಗಳ ಪ್ರಕಾರ, ವಿದೇಶದಿಂದ ಮರಳಿದವರನ್ನು ಆಯಾ ರಾಜ್ಯ ಸರ್ಕಾರಗಳು 14 ದಿನ ಕಡ್ಡಾಯವಾಗಿ ಕ್ವಾರಂಟೈನ್​​ನಲ್ಲಿಡಬೇಕಾಗುತ್ತದೆ.
    ಕಡ್ಡಾಯ ಕ್ವಾರಂಟೈನ್ ಅವಧಿ ಮುಗಿದ ನಂತರ ಎಲ್ಲ ಪ್ರಯಾಣಿಕರನ್ನು ಪರೀಕ್ಷಿಸಲಾಗುತ್ತದೆ. ಪ್ರೊಟೋಕಾಲ್ ಅನುಸಾರ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. 182 ಜನ ಭಾರತೀಯರನ್ನು ಸ್ಥಳಾಂತರಿಸಲು ಮತ್ತೊಂದು ವಿಮಾನ ದುಬೈದಿಂದ ಹೊರಟು ಗುರುವಾರ ಕೇರಳದ ಕೋಳಿಕೋಡ್​​ಗೆ ಬಂದಿಳಿದಿದೆ (ಏಜೆನ್ಸೀಸ್).

    ಭಾರತದಲ್ಲೇ ಉಳಿದಿರುವ ಮಾಲ್ಡೋವಾ ಟೆನಿಸ್​ ಆಟಗಾರನ ವಿಶಿಷ್ಟ ಸರ್ವಿಸ್​ 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts