More

    ಇವಿಎಂಗಳ ಪ್ರಥಮ ಹಂತದ ಪರಿಶೀಲನೆ

    ಚಿಕ್ಕಮಗಳೂರು: ವಿವಿಧ ಪಕ್ಷಗಳ ಮುಖಂಡರು, ಅಧಿಕಾರಿಗಳ ಸಮ್ಮುಖದಲ್ಲಿ ಇವಿಎಂಗಳ ಪರಿಶೀಲನೆ ನಡೆಸಲಾಗಿದ್ದು, ಪರಿಶೀಲನೆ ಬಳಿಕ ೨,೨೦೯ ಬ್ಯಾಲೆಟ್ ಯೂನಿಟ್, ೧,೫೭೦ ಕಂಟ್ರೋಲ್ ಯೂನಿಟ್ ಹಾಗೂ ೧,೬೫೮ ವಿವಿ ಪ್ಯಾಟ್‌ಗಳು ಸುಸ್ಥಿತಿಯಲ್ಲಿವೆ ಎಂಬುದು ದೃಢವಾಗಿದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ತಿಳಿಸಿದರು.

    ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಇವಿಎಂಗಳ ಪ್ರಥಮ ಪರೀಶಿಲನೆ ನಡೆಸಿ ವಿವಿಧ ಪಕ್ಷಗಳ ಮುಖಂಡರು ಹಾಗೂ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಶೃಂಗೇರಿ ವಿಧಾನಸಭಾ ಕ್ಷೇತ್ರಕ್ಕೆ ೩೨೦ ಬ್ಯಾಲೆಟ್ ಯೂನಿಟ್, ೩೨೦ ಕಂಟ್ರೋಲ್ ಯೂನಿಟ್ ಹಾಗೂ ೩೪೦ ವಿವಿ ಪ್ಯಾಟ್‌ಗಳು, ಮೂಡಿಗೆರೆ ವಿಧಾನಸಭಾ ಕ್ಷೇತ್ರಕ್ಕೆ ೨೮೮ ಬ್ಯಾಲೆಟ್ ಯೂನಿಟ್, ೨೮೮ ಕಂಟ್ರೋಲ್ ಯೂನಿಟ್, ೩೦೭ ವಿವಿ ಪ್ಯಾಟ್, ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರಕ್ಕೆ ೩೨೬ ಬ್ಯಾಲೆಟ್ ಯೂನಿಟ್, ೩೨೬ ಕಂಟ್ರೋಲ್ ಯೂನಿಟ್, ೩೪೨ ವಿವಿ ಪ್ಯಾಟ್, ತರೀಕೆರೆ ವಿಧಾನಸಭಾ ಕ್ಷೇತ್ರಕ್ಕೆ ೨೮೫ ಬ್ಯಾಲೆಟ್ ಯೂನಿಟ್, ೨೮೫ ಕಂಟ್ರೋಲ್ ಯೂನಿಟ್, ೩೦೩ ವಿವಿ ಪ್ಯಾಟ್ ಹಾಗೂ ಕಡೂರು ವಿಧಾನಸಭಾ ಕ್ಷೇತ್ರಕ್ಕೆ ೩೧೬ ಬ್ಯಾಲೆಟ್ ಯೂನಿಟ್, ೩೧೬ ಕಂಟ್ರೋಲ್ ಯೂನಿಟ್, ೩೩೬ ವಿವಿ ಪ್ಯಾಟ್ ಸೇರಿದಂತೆ ಒಟ್ಟು ೧,೫೩೫ ಬ್ಯಾಲೆಟ್ ಯೂನಿಟ್, ೧,೫೩೫ ಕಂಟ್ರೋಲ್ ಯೂನಿಟ್, ೧,೬೩೩ ವಿವಿ ಪ್ಯಾಟ್‌ಗಳನ್ನು ರವಾನಿಸಲಾಗುವುದು ಎಂದು ಮಾಹಿತಿ ನೀಡಿದರು.
    ಇನ್ನುಳಿದಂತೆ ೯೮ ಇವಿಎಂ ಯಂತ್ರಗಳನ್ನು ಸಾರ್ವಜನಿಕರಿಗೆ ಇವಿಎಂಗಳಲ್ಲಿ ಮತ ಚಲಾಯಿಸುವ ಕುರಿತು ಅರಿವು ಮೂಡಿಸಲು ಸ್ವೀಪ್ ಸಮಿತಿಗೆ ಹಾಗೂ ಒಂದು ವಿಧಾನಸಭಾ ಕ್ಷೇತ್ರಕ್ಕೆ ೧೦ ಇವಿಎಂಗಳನ್ನು ತರಬೇತಿಗಾಗಿ ನೀಡಲಾಗುವುದು ಎಂದು ವಿವರಿಸಿದರು.
    ಎಲ್ಲ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಕ್ಷಮದಲ್ಲಿ ಚುನಾವಣಾ ಆಯೋಗದ ಮಾರ್ಗಸೂಚಿ ಪ್ರಕಾರ ಪ್ರಥಮ ರ‍್ಯಾಂಡಮೈಜೇಷನ್ ನಡೆಸಲಾಗಿದೆ. ಇದಾದ ಬಳಿಕ ಆಯಾ ಮತ ಕ್ಷೇತ್ರಗಳಿಗೆ ಮತಯಂತ್ರಗಳನ್ನು ಕಳುಹಿಸಲಾಗುವುದು. ಜಿಲ್ಲೆಯ ಶೃಂಗೇರಿ, ಮೂಡಿಗೆರೆ, ತರೀಕೆರೆ, ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರಗಳು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರಿದರೆ, ಕಡೂರು ವಿಧಾನಸಭಾ ಕ್ಷೇತ್ರ ಹಾಸನ ಲೋಕಸಭಾ ಕ್ಷೇತ್ರಕ್ಕೆ ಸೇರುತ್ತದೆ. ನಾಮಪತ್ರ ಪ್ರಕ್ರಿಯೆಯನ್ನು ಉಡುಪಿ ಹಾಗೂ ಹಾಸನ ಜಿಲ್ಲೆಯ ಜಿಲ್ಲಾ ಚುನಾವಣಾಧಿಕಾರಿಗಳು ಮಾಡಲಿದ್ದಾರೆ ಎಂದು ಹೇಳಿದರು.
    ಚುನಾವಣೆಗೆ ಸಂಬAಧಿಸಿದAತೆ ವಾಹನ ಪರವಾನಗಿ, ಪ್ರಚಾರ ವೀಡಿಯೋ ವ್ಯಾನ್ ಅನುಮತಿ, ಪಕ್ಷದ ಪದಾಧಿಕಾರಿಗಳಿಗೆ ವಾಹನ ಅನುಮತಿ ಮುಂತಾದವುಗಳಿಗೆ ಸುವಿಧಾ ಮೂಲಕ ಅನುಮತಿ ಪಡೆಯಬೇಕು. ಚುನಾವಣೆಗೆ ಸಂಬAಧಿಸಿದAತೆ ಯಾವುದೇ ದೂರುಗಳಿದ್ದಲ್ಲಿ ಸಿವಿಜಲ್ ಮೂಲಕ ದೂರು ದಾಖಲಿಸಬಹುದು ಎಂದು ತಿಳಿಸಿದರು.
    ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ, ಉಪವಿಭಾಗಾಧಿಕಾರಿಗಳಾದ ದಲ್ಜಿತ್ ಕುಮಾರ್, ಕಾಂತರಾಜು ಸೇರಿದಂತೆ ಎಲ್ಲ ತಾಲೂಕುಗಳ ತಹಸೀಲ್ದಾರರು ಹಾಗೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts