More

    ಪಟಾಕಿ ಮಾರಾಟ ಜೋರು

    ನಾಪೋಕ್ಲು: ಹುತ್ತರಿ ಹಬ್ಬವೆಂದರೆ ಗ್ರಾಮೀಣ ಪ್ರದೇಶದಲ್ಲಿ ಸಂಭ್ರಮ. ಧಾನ್ಯಲಕ್ಷ್ಮೀಯನ್ನು ಕರೆತರುವ ಈ ಹಬ್ಬದಲ್ಲಿ ಸಿಡಿಮದ್ದುಗಳದ್ದೇ ದರ್ಬಾರ್. ರಾಜ್ಯದ ಇತರೆಡೆಗಳಲ್ಲಿ ದೀಪಾವಳಿಯನ್ನು ಬೆಳಕಿನ ಹಬ್ಬವಾಗಿ ಆಚರಿಸಿದರೆ, ಕೊಡಗಿನಲ್ಲಿ ಹುತ್ತರಿಯನ್ನು ಬೆಳಕಿನ ಹಬ್ಬವಾಗಿ ಆಚರಿಸುತ್ತಾರೆ. ಅಂತೆಯೇ ಪಟಾಕಿಗಳಿಗೆ ಅಧಿಕ ಬೇಡಿಕೆ ಇರಲಿದೆ.

    ಸೋಮವಾರ ನಾಪೋಕ್ಲುವಿನ ಸಂತೆ ಮೈದಾನದಲ್ಲಿ ಪಟಾಕಿಗಳ ಮಾರಾಟ ಬಿರುಸಿನಿಂದ ನಡೆಯಿತು. ಹುತ್ತರಿ ಹಬ್ಬದಂದು ಭತ್ತದ ಗದ್ದೆಗಳಲ್ಲಿ ಕದಿರು ಕೊಯ್ಯುವಲ್ಲಿಂದ ಹಿಡಿದು ರಾತ್ರಿಯಿಡೀ ಪಟಾಕಿ ಸಿಡಿಸುತ್ತಾರೆ. ಅದಕ್ಕೂ ಮುನ್ನ ಕತ್ತಲೆ ಆವರಿಸುತ್ತಿದ್ದಂತೆ ನೆರೆಕಟ್ಟುವ ಕಾರ್ಯ ಆರಂಭಗೊಳ್ಳುತ್ತದೆ. ಇಡೀ ದಿನ ಪಟಾಕಿಗಳ ಸದ್ದು ಜೋರಾಗಿರುತ್ತದೆ. ಬಾಣಬಿರುಸುಗಳ ಸದ್ದಿನೊಂದಿಗೆ ಮಕ್ಕಳು, ಹಿರಿಯರು ಖುಷಿ ಪಡುತ್ತಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts