More

    ಶಾಸಕಿ ಮೇಲೆ ಬಿತ್ತು ಪೊಲೀಸ್ ಕೇಸ್; ಹಲ್ಲೆ ಮಾಡಿದ್ದಕ್ಕೆ ಎಫ್​ಐಆರ್​

    ಬೆಂಗಳೂರು: ಜನಪ್ರತಿನಿಧಿ ಮತ್ತು ಪೊಲೀಸ್ ನಡುವಿನ ಸಂಘರ್ಷ ಮತ್ತೊಂದು ಹಂತಕ್ಕೆ ಹೋಗಿದ್ದು, ಇದೀಗ ಶಾಸಕಿಯೊಬ್ಬರ ಮೇಲೆ ಪ್ರಕರಣ ದಾಖಲಾಗಿದ್ದು, ಎಫ್​​ಐಆರ್ ಕೂಡ ಆಗಿದೆ. ಜಯನಗರ ಶಾಸಕಿ ಸೌಮ್ಯ ರೆಡ್ಡಿ ಆರೋಪಿಯಾಗಿದ್ದು, ಅವರ ವಿರುದ್ಧ ಉಪ್ಪಾರಪೇಟೆ ಪೊಲೀಸ್​ ಠಾಣೆಯಲ್ಲಿ ನೀಡಲಾಗಿದ್ದ ದೂರಿನ ಮೇರೆಗೆ ಎಫ್​ಐಆರ್ ದಾಖಲಾಗಿದೆ. ಕರ್ತವ್ಯನಿರತ ಪೊಲೀಸ್ ಸಿಬ್ಬಂದಿ ಅಂಬಿಕಾ ಎಂಬುವವರು ದೂರು ನೀಡಿದ್ದರು.

    ಇದನ್ನೂ ಓದಿ: ಸೆಕ್ಸ್​ ಮಾಡುವಾಗ ಉಸಿರುಗಟ್ಟಿ ಸತ್ತೇ ಹೋದಳು… ಬ್ಯಾಚಲರ್​ ಮನೆಯಲ್ಲಿ ವಿವಾಹಿತೆ ಸಾವು!

    ಪ್ರಕರಣದ ಹಿನ್ನೆಲೆ: ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಬುಧವಾರ ಬೆಂಗಳೂರಿನಲ್ಲಿ ನಡೆದ ರೈತರ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಶಾಸಕರು, ನಾಯಕರು, ಕಾರ್ಯಕರ್ತರೂ ಪಾಲ್ಗೊಂಡಿದ್ದರು. ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆದ ಸಮಾವೇಶದ ಬಳಿಕ ರಾಜಭವನ ಚಲೋ ನಡೆಸಲಾಗಿತ್ತು. ಆಗ ಕಾಂಗ್ರೆಸ್​ ನಾಯಕರನ್ನು ಪೊಲೀಸರು ತಡೆದರು. ಆ ಸಂದರ್ಭದಲ್ಲಿ ತನ್ನನ್ನು ತಡೆದ ಮಹಿಳಾ ಪೇದೆ ಮೇಲೆ ಸಿಟ್ಟಾದ ಶಾಸಕಿ ಸೌಮ್ಯ ರೆಡ್ಡಿ, ‘ಹೂ ದಿ ಹೆಲ್​’ ಎನ್ನುತ್ತ ಪೇದೆ ಮೇಲೆ ಕೈ ಮಾಡಿದ್ದರು.

    ಇದನ್ನೂ ಓದಿ: ಇದು ಅಮಲಿಳಿಸೋ ಸುದ್ದಿ; ‘ಫಿಗರ್’ ಬೇಕೆಂದರೆ ‘ಡ್ರಿಂಕ್ಸ್’ ಬಿಡಿ..!

    ಈ ವಿಷಯ ಬಳಿಕ ಗಂಭೀರ ಸ್ವರೂಪ ಪಡೆದಿದ್ದು, ಘಟನೆಗೆ ಕಾರಣ ಏನು ಎಂದು ಸೌಮ್ಯ ರೆಡ್ಡಿ ಸ್ಪಷ್ಟನೆ ನೀಡಿದ್ದಲ್ಲದೆ, ಅವರ ವಿರುದ್ಧವೂ ಆಕ್ಷೇಪಗಳು ಕೇಳಿಬಂದಿದ್ದವು. ಆದರೆ ಪೇದೆ ಅಂಬಿಕಾ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಮಾಡಿದ್ದಲ್ಲದೆ ತನ್ನ ಮೇಲೆ ಹಲ್ಲೆ ಮಾಡಿದ್ದಾಗಿಯೂ ಆರೋಪಿಸಿ ಉಪ್ಪಾರಪೇಟೆ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದರು. ಅದರ ಮೇರೆಗೆ IPC ಸೆಕ್ಷನ್​ 353ರಡಿ FIR ದಾಖಲಿಸಿಕೊಳ್ಳಲಾಗಿದೆ.

    ನೂರಾರು ಜನರ ಎದುರಲ್ಲೇ ಮಹಿಳಾ ಪೊಲೀಸ್​ ಮೇಲೆ ಶಾಸಕಿ ಸೌಮ್ಯರೆಡ್ಡಿ ದಬ್ಬಾಳಿಕೆ! ಹಲ್ಲೆಯ ದೃಶ್ಯ ವೈರಲ್​

    ನನ್ನನ್ನು ತಳ್ಳಿದ್ರು, ಕೂದಲು ಎಳೆದ್ರು, ಎಲ್ಲಾ ಕಡೆ ಮುಟ್ಟಲು ಬಂದ್ರು: ಶಾಸಕಿ ಸೌಮ್ಯರೆಡ್ಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts