More

    ಕಲಬುರಗಿ ಕಮಿಷನರ್ ಮತ್ತು ಪತ್ನಿ ವಿರುದ್ಧ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ದೂರು, ಎಫ್​ಐಆರ್​ ದಾಖಲು

    ಕಲಬುರಗಿ: ಪೊಲೀಸ್ ಕಮಿಷನರ್ ವೈ.ಎಸ್. ರವಿಕುಮಾರ್ ಮತ್ತು ಇವರ ಪತ್ನಿ ರೂಪಾಲಿ ವಿರುದ್ಧ ಲೋಕಾಯುಕ್ತಕ್ಕೆ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ದೂರು ಸಲ್ಲಿಸಿದ್ದಾರೆ.

    ಕಮಿಷನರ್ ಮತ್ತು ಕಮಿಷನರ್ ಪತ್ನಿ ಇಬ್ಬರೂ ಅಧಿಕಾರ ದುರುಪಯೋಗ ಪಡಿಸಿಕೊಂಡು ಬ್ಲ್ಯಾಕ್​ಮೇಲ್ ಮಾಡಿ ನನ್ನಿಂದ 3 ಲಕ್ಷ ಹಣ ವಸೂಲಿ ಮಾಡಿದ್ದಾರೆ. ಸಾಲದು ಎಂಬಂತೆ ಮತ್ತೆ 3 ಲಕ್ಷ ಹಣಕ್ಕೆ ರೂಪಾಲಿ ಬೇಡಿಕೆ ಇಟ್ಟರು. ಹಣಕೊಡಲಿಲ್ಲ ಎಂದು ನನ್ನನ್ನು ಗಡಿಪಾರು ಮಾಡಿದರು ಎಂದು ಮಣಿಕಂಠ ರಾಠೋಡ್ ಗಂಭೀರ ಆರೋಪ ಮಾಡಿದ್ದಾರೆ.

    ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟ, ಜೀವ ಬೆದರಿಕೆ ಸೇರಿದಂತೆ ಹಲವು ಕೇಸ್​ಗಳಲ್ಲಿ ಶಾಮೀಲಾಗಿರುವ ಆರೋಪ ಎದುರಿಸುತ್ತಿರುವ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್​ರನ್ನು ಕಲಬುರಗಿಯಿಂದ ಒಂದು ವರ್ಷ ಗಡಿಪಾರು ‌ಮಾಡಿ ಸೆ.30ರ‍ಂದೇ ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ. ವೈ.ಎಸ್.ರವಿಕುಮಾರ್ ಆದೇಶ ಹೊರಡಿಸಿದ್ದರು.

    ಇದಾದ ಬಳಿಕ ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಅವರನ್ನು ಶೂಟ್ ಮಾಡುವುದಾಗಿ ಮಣಿಕಂಠ ರಾಠೋಡ್​ ಹೇಳಿಕೆ ನೀಡಿದ್ದರು. ಈ ಕುರಿತು ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಐಪಿಸಿ 506 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಮಣಿಕಂಠ ರಾಠೋಡ್​ನ ಬಂಧನಕ್ಕೆ‌ ಆಗ್ರಹಿಸಿ ಕಲಬುರಗಿ ಎಸ್​ಪಿ ಕಚೇರಿ ಮುಂಭಾಗ ಕಾಂಗ್ರೆಸ್​ ಬೃಹತ್ ಪ್ರತಿಭಟನೆ ಕೂಡ ನಡೆಸಿತ್ತು. ನ.13ರಂದು ಹೈದ್ರಾಬಾದ್​ನಲ್ಲಿ ಮಣಿಕಂಠ ರಾಠೋಡ್​ನನ್ನು ಕಲಬುರಗಿಯ ಬ್ರಹ್ಮಪುರ ಪೊಲೀಸರು ಬಂಧಿಸಿದ್ದರು.

    ಇದೀಗ ಕಲಬುರಗಿ ಕಮಿಷನರ್​ ಮತ್ತು ಅವರ ಪತ್ನಿ ವಿರುದ್ಧವೇ ಮಣಿಕಂಠ ರಾಠೋಡ್​ ಲಂಚದ ಆರೋಪ ಮಾಡಿದ್ದಾರೆ. ದಾಂಡಿಯಾ ನೈಟ್ ಇವೆಂಟ್ ಸಲುವಾಗಿ ರೂಪಾಲಿ ರವಿಕುಮಾರ್ 3 ಲಕ್ಷ ಹಣ ಪಡೆದಿದ್ದರು. ಮತ್ತಷ್ಟು ಹಣಕ್ಕೆ ಡಿಮಾಂಡ್​ ಮಾಡಿದ್ದರು. ಕೊಡಲಿಲ್ಲ ಎಂದು ಗಡಿಪಾರು ಮಾಡಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

    ರಾತ್ರೋರಾತ್ರಿ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್​ ಬಂಧನ

    ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಗಡಿಪಾರು: ಒಂದು ವರ್ಷ ಕಲಬುರಗಿಗೆ ಕಾಲಿಡುವಂತಿಲ್ಲ

    ಹತ್ತಿ ಹೊಲದಲ್ಲೇ ಬಿತ್ತು ಜೋಡಿ ಶವ! ಗಂಡನಿಂದಲೇ ನಡೆಯಿತು ಘೋರ ದುರಂತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts