More

    ಅನುಮಾನಾಸ್ಪದ ಸೂಟ್​ಕೇಸ್ ಕಂಡು ಬೆಚ್ಚಿದ ಜನತೆ, ಸ್ಥಳಕ್ಕೆ ಬಾಂಬ್​ ಪತ್ತೆ ದಳ ಭೇಟಿ

    ಮೈಸೂರು: ನಗರದ ನ್ಯೂಸಯ್ಯಾಜಿ ರಾವ್ ರಸ್ತೆಯಲ್ಲಿ ಮಂಗಳವಾರ ಮಧ್ಯಾಹ್ನ ಆಕಾಶನೀಲಿ ಬಣ್ಣದ ದೊಡ್ಡ ಸೂಟ್​ಕೇಸ್ವೊಂದು ಅನುಮಾನಾಸ್ಪ ರೀತಿಯಲ್ಲಿ ಪತ್ತೆಯಾಗಿದ್ದು, ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

    ಸೂಟ್​ಕೇಸ್ ಸುತ್ತ ಬ್ಯಾರಿಕೇಡ್ ಹಾಕಿ ಬಾಂಬ್ ನಿಷ್ಕ್ರಿಯ ದಳ ತಪಾಸಣೆ ನಡೆಸಿದ್ದು, ಎರಡು ಕಡೆ ರಸ್ತೆ ಬಂದ್ ಮಾಡಿ ಸಾರ್ವಜನಿಕರು ಸುಳಿದಾಡದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿತ್ತು.

    ಇದನ್ನೂ ಓದಿರಿ ಇಂದು ಬೆಳ್ಳಂಬೆಳಗ್ಗೆ ಭ್ರಷ್ಟರಿಗೆ ಎಸಿಬಿ ಶಾಕ್​, ರಾಜ್ಯದ 12 ಕಡೆ ದಾಳಿ

    ಅನುಮಾನಾಸ್ಪದ ಸೂಟ್​ಕೇಸ್ ಬಗ್ಗೆ ಸಾರ್ವಜನಿಕರಲ್ಲಿ ಆತಂಕ ಮೂಡಿ, ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ಸುಮಾರು ೫೦ ಅಡಿ ದೂರರಿಂದಲೇ ಜನರು ಸೂಟ್​ಕೇಸ್ ಅನ್ನು ವೀಕ್ಷಿಸುತ್ತಿದ್ದರು. ಕೆ.ಆರ್. ಪೊಲೀಸ್ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ಪತ್ತೆಯಾದ ಈ ಸೂಟ್​ಕೇಸ್ ಅನ್ನು ಬಾಂಬ್ ನಿಷ್ಕ್ರಿಯ ದಳದ ಪೊಲೀಸರು ಪರಿಶೀಲನೆ ನಡೆಸಿದಾಗ ಅದರಲ್ಲಿ ಯಾವುದೇ ಸ್ಫೋಟಕ ವಸ್ತುಗಳು ಇರಲಿಲ್ಲ. ಹೀಗಾಗಿ, ಅದನ್ನು ಹೆಚ್ಚಿನ ಪರಿಶೀಲನೆಗಾಗಿ ಪೊಲೀಸರು ತೆಗೆದುಕೊಂಡು ಹೋದರು. ಬಳಿಕವೇ ಸ್ಥಳೀಯರು ನಿರಾಳರಾದರು.

    ಇದನ್ನೂ ಓದಿರಿ ಮಧ್ಯರಾತ್ರಿ ಪತ್ನಿಯನ್ನು ಕೊಂದು ಪೊಲೀಸ್​ ಠಾಣೆಗೆ ಬಂದ ಭೂಪ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts