More

    ಟ್ವಿಟ್ಟರ್​ ತುಂಬ ಇದೇ ಸುದ್ದಿ: ಬರೋಬ್ಬರಿ 11 ಲಕ್ಷ ಟ್ವೀಟ್​ ಆಗಿದೆಯಂತೆ ಭಾರತದ ಈ ಒಂದು ವಿಚಾರ

    ನವದೆಹಲಿ: ನರೇಂದ್ರ ಮೋದಿ 2.0 ಸರ್ಕಾರದ ಮೊದಲನೇ ಬಜೆಟ್​ ಮಂಡನೆಯು ಫೆ.1ರಂದು ನಡೆದಿದ್ದು, ಎರಡನೇ ದಾಖಲೆ ಬರೆಯುವಲ್ಲಿ ಈ ಬಜೆಟ್​ ಯಶಸ್ವಿಯಾಗಿದೆ. ಸ್ವಾತಂತ್ರ್ಯ ಬಂದಾಗಿನಿಂದ ಮಂಡನೆಗೆ ಅತಿ ಹೆಚ್ಚು ಸಮಯ ತೆಗೆದುಕೊಂಡ ಬಜೆಟ್​ ಎನ್ನುವುದು ಮೊದಲನೇ ದಾಖಲೆಯಾದರೆ ಬರೋಬ್ಬರಿ 11 ಲಕ್ಷ ಟ್ವೀಟ್​ ಬಜೆಟ್​ ಕುರಿತಾಗಿಯೇ ಆಗಿರುವುದು ಎರಡನೇ ದಾಖಲೆ.

    ಫೆ.1ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ 2020-21ನೇ ಸಾಲಿನ ಬಜೆಟ್​ ಮಂಡನೆ ಮಾಡಿದ್ದಾರೆ. 2 ಗಂಟೆ, 41 ನಿಮಿಷಗಳ ಕಾಲ ಬಜೆಟ್​ ಮಂಡನೆಯಾಗಿದ್ದು ಇದೇ ಮೊದಲನೇ ಬಾರಿಗೆ ಇಷ್ಟೊಂದು ದೊಡ್ಡ ಬಜೆಟ್​​ನ್ನು ಸಂಸತ್​ನಲ್ಲಿ ಮಂಡಿಸಲಾಗಿದೆ. ಬಜೆಟ್​ ಮಂಡನೆಗೆ ಹಲವು ದಿನಗಳಿರುವಾಗಲೇ ಅದರ ಬಗ್ಗೆ ಸಾಕಷ್ಟು ಚರ್ಚೆಗಳು ಆರಂಭವಾಗಿದ್ದವು. ಬಜೆಟ್​ ಮಂಡನೆ ಮುಗಿಯುತ್ತಿದ್ದಂತೆಯೇ ಅದರ ಪರ ವಿರೋಧವಾಗಿ ಲಕ್ಷಾಂತರ ಟ್ವೀಟ್​ಗಳನ್ನು ಮಾಡಲಾಗಿದೆ. #UnionBudget2020 ಎಂಬ ಹ್ಯಾಷ್​ಟ್ಯಾಗ್​ನೊಂದಿಗೆ ಆರ್ಥಿಕ ತಜ್ಞರು, ರಾಜಕೀಯ ನಾಯಕರು ಸೇರಿದಂತೆ ಜನಸಾಮಾನ್ಯರು ಬಜೆಟ್​ನ ಬಗ್ಗೆ ತಮ್ಮ ಅಭಿಪ್ರಾಯವನ್ನು ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದಾರೆ. ಜನವರಿ 30ರಿಂದ ಇಂದಿನವರೆಗೆ ಸುಮಾರು 11 ಲಕ್ಷಕ್ಕೂ ಹೆಚ್ಚು ಟ್ವೀಟ್​ಗಳಲ್ಲಿ #UnionBudget2020 ಹ್ಯಾಷ್​ಟ್ಯಾಗ್​ ಬಳಕೆಯಾಗಿದೆ ಎಂದು ಟ್ವಿಟ್ಟರ್​ ತಿಳಿಸಿದೆ.

    ನಮ್ಮ ಸುದ್ದಿ ಪಾಲುದಾರರ ಸಹಾಯದೊಂದಿಗೆ, ಕೇಂದ್ರ ಬಜೆಟ್​ 2020ರ ಮಂಡನೆಯನ್ನು ಮತ್ತು ವಿಶ್ಲೇಷಣೆಯನ್ನು ದೇಶಾದ್ಯಂತ ಟ್ವಿಟ್ಟರ್​ ಮೂಲಕ ತಲುಪಿಸಿದ್ದೇವೆ. ಆಯಾ ಸಮಯ ಸಂದರ್ಭಕ್ಕೆ ತಕ್ಕಂತೆ ಕಾಮೆಂಟ್​ಗಳನ್ನು ಮಾಡಿ ಜನಸಾಮಾನ್ಯರು ಈ ದಾಖಲೆಯನ್ನು ಬರೆದುಕೊಟ್ಟಿದ್ದಾರೆ ಎಂದು ಟ್ವಿಟ್ಟರ್​ ಇಂಡಿಯಾದ ಸುದ್ದಿ ಪಾಲುದಾರಿಕೆಯ ಮುಖ್ಯಸ್ಥರಾದ ಅಮೃತ ತ್ರಿಪಾಠಿ ಹೇಳಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts