More

    VIDEO|ಫ್ರೀಡಂ ಪಾರ್ಕ್​ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ವಿರೋಧಿಸಿ ನಡೆಯುತ್ತಿದ್ದ ಹೋರಾಟದಲ್ಲಿ ಪಾಕ್​ ಪರ ಘೋಷಣೆ ಕೂಗಿದ ಯುವತಿ

    ಬೆಂಗಳೂರು: ನಗರದ ಫ್ರೀಡಂ ಪಾರ್ಕ್​ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ವಿರೋಧಿಸಿ ನಡೆದ ಹೋರಾಟದಲ್ಲಿ ಯುವತಿಯೊಬ್ಬಳು ಪಾಕ್​ ಪರ ಘೋಷಣೆ ಕೂಗಿದ್ದಾಳೆ.

    ಅಮೂಲ್ಯ ಲಿಯೋನಾ ಎಂಬ ಯುವತಿ ಪಾಕಿಸ್ತಾನ್​ ಜಿಂದಾಬಾದ್​ ಎಂದು ಘೋಷಣೆ ಕೂಗಿದಳು. ಕೂಡಲೇ ವೇದಿಕೆಯಲ್ಲಿದ್ದ ಎಐಎಂಐಎಂ ಮುಖ್ಯಸ್ಥ ಸಂಸದ ಅಸಾದುದ್ದೀನ್ ಓವೈಸಿ ಯುವತಿಯಿಂದ ಮೈಕ್​ ಕಿತ್ತುಕೊಳ್ಳಲು ಯತ್ನಿಸಿದರು. ಅಲ್ಲದೆ ಕಾರ್ಯಕ್ರಮ ಸಂಘಟಕರು ಯುವತಿಯನ್ನು ಘೋಷಣೆ ಕೂಗದಂತೆ ಎಚ್ಚರಿಸಿದರು.  ಪೊಲೀಸರು ಯುವತಿಯನ್ನು ವಶಕ್ಕೆ ಪಡೆದಿದ್ದಾರೆ.

    ವೇದಿಕೆಯಿಂದ ಹೊರ ನಡೆದ ಓವೈಸಿ: ಯುವತಿ ಪಾಕಿಸ್ತಾನ ಪರ ಘೋಷಣೆ ಕೂಗುತ್ತಿದ್ದಂತೆ ಕೋಪಗೊಂಡ ಸಂಸದ ಅಸಾದುದ್ದೀನ್​ ಓವೈಸಿ ಕಾರ್ಯಕ್ರಮ ಬಹಿಷ್ಕರಿಸಿ ವೇದಿಕೆಯಿಂದ ಇಳಿದು ಹೊರ ನಡೆದರು. ಕೂಡಲೇ ಎಚ್ಚೆತ್ತ ಸಂಘಟಕರು ಕ್ಷಮೆ ಕೋರಿ ಅವರನ್ನು ಸಮಾಧಾನಪಡಿಸಿ ಮರಳಿ ವೇದಿಕೆಗೆ ಕರೆ ತಂದರು.

    ಪಾಕ್​ ಪರ ಘೋಷಣೆ ಕೂಗಿದ ಯುವತಿ ಚಿಕ್ಕಮಗಳೂರಿನವಳು: ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆದ ಹೋರಾಟದಲ್ಲಿ ಪಾಕ್​ ಪರ ಘೋಷಣೆ ಕೂಗಿದ ಯುವತಿ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಮೂಲದವಳು. ಈಕೆ ಗೌರಿ ಲಂಕೇಶ್​ ಹತ್ಯೆಯಾದ ಬಳಿಕ ಕೂಡ ಪ್ರತಿಭಟನೆಯಲ್ಲಿ ತೊಡಗಿದ್ದಳು ಎಂದು ತಿಳಿದು ಬಂದಿದೆ.

    ಪ್ರತಿಭಟನೆಗೆ ಯುವತಿ ಅಮೂಲ್ಯ ಲಿಯೋನಾಳನ್ನು ಆಹ್ವಾನಿಸಿಲ್ಲ ಎಂದು ಸಂಸದ ಓವೈಸಿ ಹೇಳಿದ್ದಾರೆ. ಪ್ರತಿಭಟನೆಯನ್ನು ದಾರಿ ತಪ್ಪಿಸಲು ಕೆಲವರು ಷಡ್ಯಂತರ ನಡೆಸಿದ್ದಾರೆ ಎಂದು ಅವರು ದೂರಿದ್ದಾರೆ. (ದಿಗ್ವಿಜಯ ನ್ಯೂಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts