More

    ಕರೊನಾ ವೈರಸ್​ಗೆ ಯಾರೂ ಹೆದರುವ ಅಗತ್ಯವಿಲ್ಲ

    ಚಿಕ್ಕಮಗಳೂರು: ಕರೊನಾ ವೈರಸ್​ಗೆ ಯಾರೂ ಹೆದರುವ ಅಗತ್ಯವಿಲ್ಲ. ಆದರೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವುದು ಅಗತ್ಯ ಎಂದು ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಎಂ.ಎಸ್.ದಿವ್ಯಶ್ರೀ ಹೇಳಿದರು.

    ನಗರ ಹೊರವಲಯದ ರಾಂಪುರದ ಚಿಂತಾಮಣಿ ಸಮುದಾಯ ಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ತಾಲೂಕು ಮಹಿಳಾ ಗ್ರಾಮ ವಿಕಾಸ ಕೇಂದ್ರ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಕರೊನಾ ವೈರಸ್ ಹರಡುತ್ತಿರುವುದಾಗಿ ಫೇಸ್​ಬುಕ್, ವಾಟ್ಸ್​ಆಪ್, ಸಾಮಾಜಿಕ ಜಾಲತಾಣಗಳಲ್ಲಿ ವದಂತಿಯಾಗುತ್ತಿದೆ. ಇಂತಹ ಉತ್ಪ್ರೇಕ್ಷಿತ ಸುದ್ದಿಗಳಿಗೆ ಯಾರೂ ಭಯಭೀತರಾಗಬೇಕಿಲ್ಲ ಎಂದು ತಿಳಿಸಿದರು.

    110 ದೇಶಗಳಲ್ಲಿ ಕರೊನಾ ವ್ಯಾಪಿಸಿದ್ದು, 1,13,702 ಮಂದಿ ಈ ಸೋಂಕಿನಿಂದ ಬಳಲುತ್ತಿದ್ದಾರೆ. 4 ಸಾವಿರಕ್ಕಿಂತ ಹೆಚ್ಚು ಸಾವುನೋವುಗಳು ಸಂಭವಿಸಿವೆ ಎಂದು ಎಂದರು.

    ಎರಡನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶೆ ಅರುಣಕುಮಾರಿ ಮಾತನಾಡಿ, ಮಹಿಳೆಯರಲ್ಲಿ ಗ್ರಾಮೀಣ ಹಾಗೂ ನಗರದ ಕಡೆಯವರೆಂಬ ಎರಡು ವಿಭಾಗವಿದೆ. ಗ್ರಾಮೀಣ ಮಹಿಳೆಯರು ಅವರ ಚೌಕಟ್ಟಿನಲ್ಲಿ ಕೆಲಸ ನಿರ್ವಹಿಸುತ್ತಾರೆ. ಸಮಾಜದ ಬಗ್ಗೆ ಅವರ ಇತಿಮಿತಿಯಲ್ಲೇ ಆಲೋಚಿಸುತ್ತಾರೆ. ನಗರದ ಮಹಿಳೆ ಇದನ್ನು ಹೊರತುಪಡಿಸಿ ವಿಶೇಷವಾದ ಸಮಾಜದಲ್ಲಿ ಕಾರ್ಯಪ್ರವೃತ್ತಳಾಗುತ್ತಾಳೆ. ಹಾಗಾಗಿ ಗ್ರಾಮೀಣ ಮಹಿಳೆಯರಿಗೆ ಕಾನೂನು ಅರಿವು ಮೂಡಿಸುವುದು, ಹಳ್ಳಿಗಳಿಗೆ ಹೋಗಿ ತರಬೇತಿ ಕೊಟ್ಟು ಅವರಿಗೆ ಉಚಿತ ಕಾನೂನು ನೆರವು ಒದಗಿಸುವುದೇ ಕಾನೂನು ಸೇವಾ ಪ್ರಾಧಿಕಾರದ ಮುಖ್ಯ ಉದ್ದೇಶ ಎಂದು ತಿಳಿಸಿದರು.

    ಕಸ್ತೂರ ಬಾ ಸದನದ ಕಾರ್ಯದರ್ಶಿ ಮೋಹಿನಿ ಸಿದ್ದೇಗೌಡ, ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ಜಸಂತಾ ಅನಿಲ್​ಕುಮಾರ್, ವಕೀಲರ ಸಂಘದ ಸದಸ್ಯೆ ಮಮತಾ, ಯೋಜನಾಧಿಕಾರಿ ಸುನೀತಾ ಪ್ರಭು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts