More

    Video] ನಾಲ್ಕರ ನಗುಮೊಗದ ಪೋರಿಯ ಹುಟ್ಟುಹಬ್ಬಕ್ಕೆ ತಂದೆ ನೀಡಿದ ಗಿಫ್ಟ್ ನೋಡಿದರೆ ನೀವೂ ಫುಲ್ ಖುಷ್

    ಅಪ್ಪ ಎಂದರೆ…. ಒಬ್ಬೊಬ್ಬರದು ಒಂದೊಂದು ಅನುಭವ.. ಅಪ್ಪ ಎಂದರೆ ಆಕಾಶ, ಅಪ್ಪ ಎಂದರೆ ಗಾಂಭೀರ್ಯ ಮತ್ತು ಕಟ್ಟುನಿಟ್ಟಿನ ವ್ಯಕ್ತಿತ್ವ, ಅಪ್ಪ ಎಂದರೆ ಭಯ.. ಇದೆಲ್ಲಕ್ಕೂ ಮಿಗಿಲಾಗಿ ಅಪ್ಪ ಎಂದರೆ ಅನವರತ ಪ್ರೀತಿ…
    ತಂದೆ-ಮಕ್ಕಳ ಸಂಬಂಧ ಯಾವಾಗಲೂ ವಿಶೇಷ. ಮಗುವಿನ ಬೆಳವಣಿಗೆಯಲ್ಲಿ ತಾಯಿಯಂತೆಯೇ ತಂದೆಯೂ ಕೂಡ ಪ್ರಮುಖ ಪಾತ್ರ ವಹಿಸುತ್ತಾನೆ.
    ಇಲ್ಲೊಂದು ವಿಡಿಯೋ ಇದೆ. ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ ವಿಡಿಯೋ ನೆಟ್ಟಿಗರ ಹೃದಯ ಕರಗಿಸುವಂತಿದೆ.

    ಇದನ್ನೂ ಓದಿ: ಕೋವಿಡ್​ ಟೆಸ್ಟ್ ದರದ ಹೊರೆ ಇಳಿದೀತೇ?: ಭರವಸೆ ಮೂಡಿಸಿದೆ ಐಐಟಿ ಖರಗ್​ಪುರದ ಉಪಕರಣ

    ಚೀನಾದ ಸುತ್ತಮುತ್ತ 71 ದಿನಗಳ ರಸ್ತೆ ಪ್ರವಾಸಕ್ಕೆ ತಂದೆಯೊಬ್ಬ ತನ್ನ ಮಗಳನ್ನು ಬೈಸಿಕಲ್‌ನಲ್ಲಿ ಕರೆದೊಯ್ಯುವುದನ್ನು ಇದು ತೋರಿಸುತ್ತದೆ. ಇದು ಕೇವಲ ಬೈಸಿಕಲ್ ಪಯಣವಲ್ಲ. ತಂದೆಯೊಬ್ಬ ತನ್ನ ಮಗಳಿಗೆ ತೋರುವ ಸುದೀರ್ಘ ಪ್ರೀತಿ. ಈ ಪಯಣದ ಹಾದಿಯುದ್ದಕ್ಕೂ ಪ್ರೀತಿ, ಮಮತೆಯ ಧಾರೆ ಸುರಿಸುವ ತಂದೆ ಈ ಹಾದಿ ಬೇಗ ಗಮ್ಯ ತಲುಪದಿರಲಿ ಎಂದು ಆಶಿಸುತ್ತಾನೆ.
    ಆ ತಂದೆ ಟೌ ಹಾವೋಬಿ 4000 ಕಿ.ಮೀ.ಗಿಂತಲೂ ಹೆಚ್ಚು ದೂರ ಬೈಸಿಕಲ್ ಸವಾರಿ ಮಾಡುತ್ತ ಟಿಬೆಟ್‌ನ ಲಾಸಾ ಸೇರಿ ದಕ್ಷಿಣ ಚೀನಾ ಸುತ್ತುವರಿದ.

    ಕುಳಿತುಕೊಳ್ಳಲು ಸ್ವಲ್ಪವೇ ಜಾಗವಿದ್ದ ಬೈಸಿಕಲ್ ನಲ್ಲಿ ಡೌಡೌ ಕುಳಿತುಕೊಂಡಿದ್ದು ಹಾವೋಬಿ ಅದನ್ನು ಅಂದಾಜು 71 ದಿನ ಓಡಿಸಿದ.
    ಹೃದಯಸ್ಪರ್ಧಿ ವೀಡಿಯೊ “ವರ್ಷದ ತಂದೆ” ಎಂಬ ಪದಗಳೊಂದಿಗೆ ಪ್ರಾರಂಭವಾಗುತ್ತದೆ. ಇದನ್ನು 52,000 ಬಾರಿ ವೀಕ್ಷಿಸಲಾಗಿದೆ.
    ಗಂಡ- ಹೆಂಡತಿ ಇಬ್ಬರೂ ಇದ್ದಾಗ ತಮ್ಮ ಮಗುವನ್ನು ರಕ್ಷಿಸುವುದು ಕಷ್ಟವೇನಲ್ಲ. ಆದರೆ ಹೌಬೀ ವಿಷಯದಲ್ಲಿ ಇದು ಹಾಗಲ್ಲ. ಆತ 2009ರಲ್ಲಿ ವಿಚ್ಛೇದನ ಪಡೆದಿದ್ದು, ಆ ನಂತರ ಡೌಡೌ ಆತನೊಂದಿಗೇ ವಾಸಿಸುತ್ತಿದ್ದಾಳೆ.

    ಇದನ್ನೂ ಓದಿ: ಐಸೋಲೇಷನ್ ವಾರ್ಡ್​ನಲ್ಲಿ ಕಾಮೇಗೌಡರಿಗೆ ಆರೈಕೆ ಮಾಡೋರಿಲ್ಲ, ಅನ್ನ-ನೀರು ತ್ಯಜಿಸಿ ನೋವಿನಿಂದ ನರಳಾಟ!

    ಈ ವರ್ಷದ ಏಪ್ರಿಲ್‌ನಲ್ಲಿ ಆಕೆಯ ನಾಲ್ಕನೇ ಹುಟ್ಟುಹಬ್ಬದ ನಿಮಿತ್ತ, ಅವಳನ್ನು ಪ್ರವಾಸಕ್ಕೆ ಕರೆದೊಯ್ಯುವ ಆಲೋಚನೆ ಬಂತು. ಆತ ಚೀನಾದ ಸುದ್ದಿ ಸಂಸ್ಥೆಗೆ ತಿಳಿಸಿ “ನಾನು ಬೈಸಿಕಲ್ ಮೂಲಕ ಪಯಣಿಸಲು ಇಷ್ಟಪಡುತ್ತೇನೆ. ಅದು ನನಗೆ ಹೆಚ್ಚು ಅರ್ಥಪೂರ್ಣವೆನಿಸುತ್ತದೆ ಮತ್ತು ಅದು ಜೀವನವನ್ನು ಪ್ರತಿನಿಧಿಸುತ್ತದೆ. ನೀವು ಹಂತ ಹಂತವಾಗಿ ಹೋದರೆ, ಪಯಣವನ್ನು ಎಂದಿಗೂ ನಿಲ್ಲಿಸಬೇಡಿ ಮತ್ತು ಎಂದಿಗೂ ಬಿಡಬೇಡಿ. ನಿಮ್ಮ ಗಮ್ಯಸ್ಥಾನವನ್ನು ಖಂಡಿತವಾಗಿ ನೀವು ತಲುಪುತ್ತೀರಿ ಎಂದಿದ್ದಾರೆ.
    ಅವರು ತಮ್ಮ ಪ್ರವಾಸದಲ್ಲಿ ಪರ್ವತಗಳಿಂದ ಹಿಡಿದು ದಟ್ಟ ಕಾಡುಗಳವರೆಗೆ ವಿವಿಧ ರೀತಿಯ ಪ್ರದೇಶಗಳನ್ನು ದಾಟಿದ್ದಾರೆ. ಯಾವುದೇ ಮಳೆ, ಹಿಮ ಅಥವಾ ಚಂಡಮಾರುತವು ಆತನ ಮಗಳಿಗೆ ಜೀವಮಾನದ ಪ್ರವಾಸದ ಆನಂದಾನುಭವ ತಂದುಕೊಡುವುದನ್ನು ತಡೆಯಲು ಸಾಧ್ಯವಾಗಲಿಲ್ಲ.

    ಇದನ್ನೂ ಓದಿ:  ನಿಮ್ಮ ಮನೆ ‘ತುಳಸಿ’ ಜೋಪಾನ…ಮಿತಿಮೀರುತ್ತಿದೆ ಗಿಡಗಳ ಕಳ್ಳತನ…!

    ಆತ ರಾತ್ರಿಯಲ್ಲೂ ಪ್ರಯಾಣಿಸಿದ. ಅದು ಆತನಿಗೆ ಅಚ್ಚುಮೆಚ್ಚಿನ ಭಾಗವಾಗಿತ್ತು , ಏಕೆಂದರೆ ಅವನ ಮಗಳು ನಕ್ಷತ್ರಗಳನ್ನು ಸ್ಪಷ್ಟವಾಗಿ ನೋಡಬಹುದು ಎಂಬ ಪರಿಕಲ್ಪನೆ ಇತ್ತು. “ಡೌಡೌ ನಕ್ಷತ್ರಗಳನ್ನು ನೋಡಿದ್ದೇ ವಿರಳ.. ನಾನು ರಾತ್ರಿ ಸವಾರಿ ಮಾಡುತ್ತಿರುವಾಗ, ಅವಳು ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್ ಹಾಡುತ್ತಲೇ ಇದ್ದಳು. ಅದು ಒಂದು ಪ್ರಮುಖ ಅಂಶವಾಗಿದೆ, ”ಎಂದು ಅವರು ಹೇಳಿದರು.
    ಈ ವಿಡಿಯೋ ನೋಡಿ ನೆಟ್ಟಿಗರು ತೀವ್ರ ಭಾವಾವೇಶಕ್ಕೊಳಗಾಗಿದ್ದಾರೆ.”ಅದೃಷ್ಟ ಮಗು, ಶ್ರೇಷ್ಠ ತಂದೆ,” ಎಂದು ಹಾಡು ಹೊಗಳಿದ್ದಾರೆ.ಇದನ್ನು ನೋಡುವುದು ಅತ್ಯಂತ ಸ್ಪೂರ್ತಿದಾಯಕ ಎಂದಿದ್ದಾರೆ.

    ಗ್ರಾಮಸ್ಥರ ಪ್ರತಿಭಟನೆಗೆ ಹೆದರಿ ಹೆದ್ದಾರಿ ಯೋಜನೆ ಬದಲಿಸಿದ ಸರ್ಕಾರ; ಎಲ್ಲಮ್ಮಾ ಉಧೋ, ಉಧೋ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts