More

    ಎಲ್ಲ ವಾಹನಗಳಿಗೆ ಫಾಸ್ಟ್ಯಾಗ್ ಕಡ್ಡಾಯ, ಮಾತಿನ ಚಕಮಕಿಗೆ ಸಾಕ್ಷಿಯಾದ ರಾಷ್ಟ್ರೀಯ ಹೆದ್ದಾರಿ

    ಮುಳಬಾಗಿಲು: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ಎಲ್ಲ ವಾಹನಗಳಿಗೆ ಫಾಸ್ಟ್ಯಾಗ್ ಕಡ್ಡಾಯ ಎಂದು ಘೋಷಣೆ ಮಾಡಿರುವುದರಿಂದ ರಾ.ಹೆ.75ರ ಹನುಮನಹಳ್ಳಿ ಗೇಟ್ ಬಳಿ ಇರುವ ಲ್ಯಾಂಕೋ ಟೋಲ್ ಫ್ಲಾಜಾ ಮತ್ತು ನಂಗಲಿ ಬಳಿ ಇರುವ ಜೆಎಸ್‌ಆರ್ ಟೋಲ್ ಫ್ಲಾಜಾಗಳಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ವಾಹನ ಚಾಲಕರು ಮತ್ತು ಟೋಲ್ ಪ್ಲಾಜಾ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆಯಿತು.

    ಟೋಲ್‌ಗೇಟ್‌ಗಳಲ್ಲಿ ಫಾಸ್ಟ್ಯಾಗ್ ಕಡ್ಡಾಯ ಮಾಡಲಾಗಿದ್ದು, ಒಂದು ವೇಳೆ ಫಾಸ್ಟ್ ಟ್ಯಾಗ್ ಇಲ್ಲದಿದ್ದಲ್ಲಿ ದುಪ್ಪಟ್ಟು ಶುಲ್ಕ ಪಾವತಿಸಿ ಪ್ರವೇಶಿಸಬೇಕೆಂದು ಹೇಳಿದ್ದು, ಈ ವಿಷಯವಾಗಿ ವಾಹನ ಸವಾರರು ಹಾಗೂ ಸಿಬ್ಬಂದಿ ನಡುವೆ ವಾಗ್ವಾದ ನಡೆದು ಪೊಲೀಸರು ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿ ಎಲ್ಲರೂ ಫಾಸ್ಟ್ಯಾಗ್ ಅಳವಡಿಸಿಕೊಳ್ಳುವಂತೆ ಸೂಚನೆ ನೀಡಿದರು.

    ಹನುಮನಹಳ್ಳಿ ಗೇಟ್ ಟೋಲ್ ಫ್ಲಾಜಾ ಬಳಿ ಲಾರಿ ಚಾಲಕ ಟೋಲ್ ಹಣ 410 ಬದಲು 820 ಕಟ್ಟುವಂತೆ ಸೂಚಿಸಿದ್ದರಿಂದ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು. ವಾಹನ ಚಾಲಕರು ದುಪ್ಪಟ್ಟು ಹಣ ನೀಡಲು ಸಾಧ್ಯವಿಲ್ಲ ಎಂದು ಪಟ್ಟು ಹಿಡಿದರೂ ಪ್ರಯೋಜನವಾಗಲಿಲ್ಲ. ಫಾಸ್ಟ್ಯಾಗ್‌ನಲ್ಲಿ 500 ರೂ. ಹಣ ಇದ್ದರೂ 410 ಕಡಿತ ಮಾಡಿ ಎಂದು ಕೆಲ ಚಾಲಕರು ಪಟ್ಟುಹಿಡಿದಿದ್ದು, ಮಿನಿಮಮ್ ಬ್ಯಾಲೆನ್ಸ್ ಸಮಸ್ಯೆಗೆ ಮತ್ತೊಂದು ಕಾರಣವಾಯಿತು.

    ಕೆಲ ವಾಹನ ಮಾಲೀಕರು ಬದಲಾಗಿದ್ದು, ಇನ್ನು ಕೆಲವರು ಬ್ಯಾಂಕ್ ಖಾತೆ ಇಲ್ಲದಿರುವುದು ಸಮಸ್ಯೆಗೆ ಕಾರಣವಾಗಿದೆ ಎಂದು ತಿಳಿದು ಬಂದಿದೆ. ಒಟ್ಟಾರೆ ಲಾಕ್‌ಡೌನ್ ಸಂದರ್ಭದಲ್ಲಿ ಕಡ್ಡಾಯ ಮಾಸ್ಕ್ ನಿಯಮ ಜಾರಿ ಮಾಡಿದ ನಂತರ ಮಾಸ್ಕ್‌ಗೆ ಮುಗಿಬಿದ್ದಂತೆ ಫಾಸ್ಟ್ಯಾಗ್ ಇಲ್ಲದ ವಾಹನ ಮಾಲೀಕರು ಹನುಮನಹಳ್ಳಿ ಟೋಲ್ ಫ್ಲಾಜಾ ಬಳಿ ಫಾಸ್ಟ್ಯಾಗ್‌ಗೆ ಮುಗಿ ಬೀಳುತ್ತಿರುವುದು ಕಂಡು ಬಂತು.

    ನಂಗಲಿ ಬಳಿಯ ಜೆಎಸ್‌ಆರ್ ಟೋಲ್ ಫ್ಲಾಜಾ ಬಳಿಯ ಮಾಹಿತಿಯಂತೆ ಶೇ. 85 ವಾಹನಗಳಿಗೆ ಫಾಸ್ಟ್ಯಾಗ್ ಅಳವಡಿಸಿಕೊಂಡಿದ್ದು, ಶೇ.15 ವಾಹನಗಳು ಅಳವಡಿಸಿಕೊಂಡಿಲ್ಲ ಎಂಬುದು ಬೆಳಕಿಗೆ ಬಂದಿದೆ.
    2-3 ದಿನಗಳಿಂದ ಕಡ್ಡಾಯ ಫಾಸ್ಟ್ಯಾಗ್ ಅಳವಡಿಕೆಗೆ ವಾಹನ ಚಾಲಕರಿಗೆ ಮಾಹಿತಿ ನೀಡುತ್ತಿದ್ದು, ಇದಲ್ಲದೆ ಟೋಲ್ ಫ್ಲಾಜಾ ಬಳಿ ಫಾಸ್ಟ್ಯಾಗ್ ಪಾಯಿಂಟ್‌ಗಳನ್ನು ಇಟ್ಟು ವಾಹನಗಳಿಗೆ ಅಳವಡಿಸಿಕೊಳ್ಳುವ ಅವಕಾಶ ಹಲವಾರು ದಿನಗಳಿಂದ ಇದ್ದು ಈಗ ಹೆಚ್ಚುವರಿ ಪಾಯಿಂಟ್ ಸಹ ಮಾಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts